ಗೋಧಿಹಿಟ್ಟಿನ ಪ್ಯಾಕ್​​ನಲ್ಲಿ ಹಣ…ಈ ಸಹಾಯ ಮಾಡಿದ್ದು ಆ ಸೆಲಬ್ರಿಟಿನಾ…ನಿಜ ಸಂಗತಿ ಏನು…?

in Kannada News 76 views

ಕೊರೊನಾ ವೈರಸ್​​ನಿಂದ ಕಷ್ಟ ಪಡುತ್ತಿರುವ ಜನರಿಗೆ ಬಹಳಷ್ಟು ಜನರು ಸಹಾಯ ಮಾಡುತ್ತಾ ಬಂದಿದ್ದಾರೆ. ಪರಿಹಾರ ನಿಧಿ, ರಕ್ತದಾನ, ಅನ್ನದಾನ, ಅಡುಗೆ ಸಾಮಗ್ರಿಗಳ ವಿತರಣೆ, ಮಾಸ್ಕ್​, ಬಟ್ಟೆಗಳ ವಿತರಣೆ, ಕೊರೊನಾ ಬಗ್ಗೆ ತಿಳುವಳಿಕೆ ಹೀಗೆ ಲಾಕ್​ಡೌನ್ ಆರಂಭವಾದಾಗಿನಿಂದ ನೆರವು ನೀಡುತ್ತಾ ಬಂದಿದ್ದಾರೆ.

Advertisement

 

Advertisement

Advertisement

 

Advertisement

ಇನ್ನು ಇತ್ತೀಚೆಗೆ ಬಾಲಿವುಡ್ ನಟ ಆಮೀರ್ ಖಾನ್ ಗೋಧಿಹಿಟ್ಟಿನ ಕವರ್​​​​​​ಗಳಲ್ಲಿ ಬಡವರಿಗಾಗಿ 15 ಸಾವಿರ ರೂಪಾಯಿ ಹಣ ಇಟ್ಟಿದ್ದು ಯಾರಿಗೂ ತಿಳಿಯದಂತೆ ಸಹಾಯ ಮಾಡಿದ್ಧಾರೆ ಎಂಬ ಸುದ್ದಿ ವೈರಲ್ ಆಗಿತ್ತು. ‘ಆಮೀರ್ ಖಾನ್ ಯಾರಿಗೂ ತಿಳಿಯದಂತೆ ಒಂದು ಟ್ರಕ್ ತುಂಬಾ 1 ಕಿಲೋ ತೂಕದ ಗೋಧಿಹಿಟ್ಟಿನ ಕವರ್​​​​ಗಳಲ್ಲಿ 15 ಸಾವಿರ ಹಣ ಇರಿಸಿ ಅದನ್ನು ದೆಹಲಿಗೆ ಕಳಿಸಿದ್ದಾರೆ. ಕವರ್​​ನಲ್ಲಿ ಕೇವಲ 1 ಕೆಜಿ ಗೋಧಿಹಿಟ್ಟು ಮಾತ್ರ ಇದ್ದಿದ್ದರಿಂದ ತೀರಾ ಬಡತನ ಇದ್ದವರು ಮಾತ್ರ 1 ಕಿಲೋ ಗೋಧಿಹಿಟ್ಟನ್ನು ಮನೆಗೆ ಕೊಂಡೊಯ್ದಿದ್ದಾರೆ. ಆದರೆ ಒಳಗೆ ತೆಗೆದು ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಆ ಕವರ್​ನಲ್ಲಿ ಗೋಧಿಹಿಟ್ಟಿನೊಂದಿಗೆ 15 ಸಾವಿರ ರೂಪಾಯಿ ಹಣ ಇತ್ತು. ತಾನು ಸಹಾಯ ಮಾಡುವುದರ ಪ್ರಚಾರ ಬೇಡ ಎಂಬ ಕಾರಣಕ್ಕಾಗಿ ಆಮೀರ್ ಖಾನ್ ಹೀಗೆ ಮಾಡಿದ್ದಾರೆ’ ಎಂಬ ಸುದ್ದಿ ಹರಿದಾಡಿತ್ತು’.

 

 

ಈ ರೀತಿ ಸಹಾಯ ಮಾಡಿದ್ದು ಆಮೀರ್ ಖಾನ್ ಅಥವಾ ಬೇರೆ ಯಾರಾದರೂ ಹೀಗೆ ಮಾಡಿದ್ದಾರಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಸಂಗ್ರಾಮ್ ಯು ಸಿಂಗ್ ಎಂಬ ಪಂಜಾಬ್​ ವ್ಯಕ್ತಿಯೊಬ್ಬರು ಟಿಕ್​ಟಾಕ್ ಮಾಡಿ, ಈ ರೀತಿ ಬಡವರಿಗೆ ಸಹಾಯ ಮಾಡಿರುವುದು ಆಮೀರ್ ಖಾನ್ ಎಂದು ಹೇಳಿದ್ದು ಕೂಡಾ ವೈರಲ್ ಆಗಿತ್ತು. ಈ ವಿಚಾರವಾಗಿ ಕೆಲವು ಮಾಧ್ಯಮದವರು ಆಮಿರ್ ಖಾನ್ ಅವರನ್ನು ಸಂಪರ್ಕಿಸಿದ್ದರೂ ನಿಜ ಏನು ಎಂದು ತಿಳಿದುಬಂದಿಲ್ಲ. ಆಮೀರ್ ಖಾನ್ ಬಹಳ ಸರಳ ಸ್ವಭಾವದವರು. ಅವರು ಮೊದಲಿನಿಂದಲೂ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಆದರೆ ಅವರಿಗೆ ಪ್ರಚಾರದ ಇಷ್ಟ ಇಲ್ಲ ಎಂಬುದು ಬಹಳಷ್ಟು ಜನರ ಅಭಿಪ್ರಾಯ.

 

 

ಇನ್ನು ಗಮನವಿಟ್ಟು ಈ ಕವರ್​​​​​ಗಳನ್ನು ನೋಡಿದರೆ ಅಲ್ಲಿ 15 ಸಾವಿರ ಹಣ ಇಲ್ಲ, 500 ರ ಎರಡು ನೋಟುಗಳಿವೆ. ಆಮೀರ್ ಖಾನ್ ಅಭಿಮಾನಿಗಳು ಅವರಿಗೆ ಕ್ರೆಡಿಟ್ ಸಿಗಲಿ ಎಂದೂ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.. ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬ ಮಾತಿದೆ. ಗುಂಪುಕಟ್ಟಿಕೊಂಡು ಪ್ರಚಾರಕ್ಕಾಗಿ ಅಷ್ಟೋ ಇಷ್ಟೋ ಸಹಾಯ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಷೇರ್ ಮಾಡಿಕೊಳ್ಳುವವರ ನಡುವೆ ಈ ವ್ಯಕ್ತಿ ವಿಭಿನ್ನವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಈ ಸಹಾಯವನ್ನು ಆಮೀರ್ ಖಾನ್ ಮಾಡಿರಲಿ ಬೇರೆ ಯಾರಾದರೂ ಮಾಡಿರಲಿ ನಿಜಕ್ಕೂ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Advertisement
Share this on...