‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಕೋಟಿ ಗೆದ್ದ ಬಾಲಕ ಈಗ ಏನಾಗಿದ್ದಾರೆ ? ಓದಿ ನೋಡಿ ಹೆಮ್ಮೆ ಪಡ್ತೀರಾ !

in ಮನರಂಜನೆ 17 views

ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್ ಪತಿ’ ಅನೇಕ ಜನರ ಜೀವನವನ್ನು ಬದಲಿಸಿದೆ. ಅವರ ಜ್ಞಾನದ ಆಧಾರದ ಮೇಲೆ, ಅನೇಕ ಜನರು ಈ ಕಾರ್ಯಕ್ರಮಕ್ಕೆ ಬಂದು ಕೋಟಿ ಗೆದ್ದಿದ್ದಾರೆ. ಅಂದಹಾಗೆ 19 ವರ್ಷಗಳ ಹಿಂದೆ ಈ ಶೋನಲ್ಲಿ ಭಾಗವಹಿಸಿ 1 ಕೋಟಿ ರೂ. ಗೆದ್ದಿದ್ದ 14 ವರ್ಷದ ರವಿ ಮೋಹನ್ ಇಂದು ಪೋರ್ ಬಂದರ್ ಎಸ್ಪಿ ಆಗಿದ್ದಾರೆ. ಹೌದು, ರವಿ ಮೋಹನ್ ಸೈನಿ ಅವರು ಗುರುವಾರದಿಂದ ಪೋರ್ ಬಂದರ್ ಎಸ್ಪಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
2001 ರಲ್ಲಿ ‘ಕೌನ್ ಬನೇಗಾ ಕರೋಡ್ ಪತಿ’ ಜೂನಿಯರ್ನಲ್ಲಿ ರವಿ ಮೋಹನ್ ಅವರು ಒಂದು ಕೋಟಿ ರೂಪಾಯಿ ಗೆದ್ದಿದ್ದರು.

Advertisement

 

Advertisement

Advertisement

ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಜೂನಿಯರ್ ಕಾರ್ಯಕ್ರಮದ ಸಂದರ್ಭದಲ್ಲಿ ರವಿ ಅವರು ಎಲ್ಲಾ 15 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಮೂಲಕ 1 ಕೋಟಿ ರೂ. ಗೆದ್ದಿದ್ದು ಇತಿಹಾಸ. ಆ ನಂತರ 2014 ರಲ್ಲಿ ಅವರು ಐಪಿಎಸ್ ಅಧಿಕಾರಿಯಾದರು. ಇಂದು ಅವರಿಗೆ 33 ವರ್ಷ. ಡಾ.ರವಿ ಮೋಹನ್ ಸೈನಿ ಅವರು ಪೋರ್ ಬಂದರ್ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು ರಾಜ್ ಕೋಟ್ನಲ್ಲಿ ಡಿಸಿಪಿಯಾಗಿ ಕೆಲಸ ಮಾಡುತ್ತಿದ್ದರು. ರವಿ 2014 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಗುಜರಾತ್’ನಲ್ಲಿ ಐಪಿಎಸ್ ಕೇಡರ್ನ ಅಧಿಕಾರಿಯಾದರು. ರವಿ ಅವರ ತಂದೆ ನೌಕಾಪಡೆಯಿಂದ ನಿವೃತ್ತರಾಗಿದ್ದಾರೆ. ಅವರು ಮೂಲತಃ ರಾಜಸ್ಥಾನದ ಅಲ್ವಾರ್ ಮೂಲದವರು.

Advertisement

 


ರವಿ ಅವರು ಎಂಬಿಬಿಎಸ್ ಅಧ್ಯಯನ ಮಾಡಿದ್ದರು. ಆ ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ರವಿ ಅವರ ತಂದೆ ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಅಲ್ಲಿಯೇ ವ್ಯಾಸಂಗ ಮಾಡಿದರು. ರವಿ ಮೋಹನ್ ಸೈನಿ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಬಂದಾಗ, ಅವರು 10 ನೇ ತರಗತಿಯಲ್ಲಿ ಓದುತ್ತಿದ್ದರು.

 


‘ಕೌನ್ ಬನೇಗಾ ಕರೋಡ್ ಪತಿ’ ಸೀಸನ್ 12 ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಬಾರಿ ಲಾಕ್ ಡೌನ್ ಇರುವುದರಿಂದ, ಈ ಬಾರಿ ತಯಾರಕರು ಕಾರ್ಯಕ್ರಮವನ್ನು ಹೇಗೆ ನಡೆಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

Advertisement
Share this on...