ಬಿಗ್-ಬಿ, ಸಲ್ಮಾನ್ ಮಧ್ಯೆ ಪೈಪೋಟಿ..! ಯಾವ ವಿಚಾರಕ್ಕೆ ಗೊತ್ತಾ..?

in ಸಿನಿಮಾ 26 views

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸಲ್ಮಾನ್ ಖಾನ್ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದು ಬಿಗ್ ಬಿಯನ್ನ ಸಲ್ಲೂ ಹಿಂದಿಕುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಭಾರೀ ಚರ್ಚೆ ನಡಿತಾ ಇದೆ. ಅರೆ ಯಾವುದರಲ್ಲಿ ಏನು ವಿಚಾರ ಅಂತೀರಾ..?ಸ್ಟಾರ್ ಗಳಲ್ಲಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಿಂದಿರಲು ಇರುವ ಏಕೈಕ ಮಾರ್ಗ ಅಂದರೆ ಅದು ಸಾಮಾಜಿಕ ಜಾಲತಾಣ. ಜಾಲತಾಣಗಳ ಮೂಲಕ ಎಲ್ಲಾ ನಟ-ನಟಿಯರು ತಮ್ಮ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನ ಕುರಿತು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ತಮ್ಮ ನೆಚ್ಚಿನ ನಟರನ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುವ ಮೂಲಕ ಸಂಪರ್ಕದಲ್ಲಿರುತ್ತಾರೆ. ಇದೆಲ್ಲದರ ಮಧ್ಯೆ ಯಾರಿಗೆ ಎಷ್ಟು ಜನ ಫಾಲೋವರ್ಸ್ ಇದ್ದಾರೆ. ಯಾವ ನಟ ಜನಪ್ರಿಯ ಎಂಬುದರ ಕುರಿತು ಚರ್ಚೆ ನಡೆಯುತ್ತಿರುತ್ತೆ. ನಟನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಫಾಲವರ್ಸ್ ಗಳನ್ನ ಆಧರಿಸಿ ಸಹ ಇದನ್ನ ಅಳೆಯಲಾಗುತ್ತೆ. ಹೀಗಾಗಿ ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.

Advertisement

 

Advertisement

Advertisement

ಆಗಾಗ ಅಭಿಮಾನಿಗಳಿಗಾಗಿ ಸುದ್ದಿ ನೀಡುತ್ತಿರುತ್ತಾರೆ. ಇದೇ ವಿಷಯಕ್ಕೆ ಇದೀಗ ಬಾಲಿವುಡ್ ನ ಬಿಗ್-ಬಿ ಹಾಗೂ ಸಲ್ಮಾನ್ ನಡುವೆ ಪೈಪೋಟಿ ನಡೆಯುತ್ತಿದೆ. ಹೌದು, ಟ್ವಿಟರ್ ನಲ್ಲಿ 5.56 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ದೇಶದಲ್ಲಿ ಹೆಚ್ಚು ಫಾಲವರ್ಸ್ ರನ್ನ ಹೊಂದಿರುವ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರದ್ದು. ನಂತರದ ಸ್ಥಾನದಲ್ಲಿ ಅಮಿತಾಬಚ್ಚನ್ ಇದ್ದಾರೆ. ಸಿನಿಮಾರಂಗದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವುದು ಬಿಗ್-ಬಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 4.15 ಕೋಟಿ ಹಿಂಬಾಲಕರನ್ನ ಹೊಂದಿದ್ದಾರೆ. ಇದೀಗ ಸಲ್ಮಾನ್ ಖಾನ್ ಸಹ 4 ಕೋಟಿಗೆ ಬಂದು ತಲುಪಿದ್ದಾರೆ. ಈ ಮೂಲಕ ನಟರ ಪೈಕಿ 2 ನೇ ಸ್ಥಾನದಲ್ಲಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪೈಕಿ 3 ನೇ ಸ್ಥಾನದಲ್ಲಿದ್ದಾರೆ.

Advertisement

 

ಭಾನುವಾರ ಅವರು 40 ಮಿಲಿಯನ್ ಫಾಲೋವರ್ಸ್ ಮುಟ್ಟಿದ್ದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಈ ಕುರಿತು ದಬಾಂಗ್ ಬಾಯ್ ಅಭಿಮಾನಿಗಳು ಸಂತಸವನ್ನ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಅತಿ ಹೆಚ್ಚು ಫಾಲೋವರ್ಸ್ ಪಡೆಯುತ್ತಿರುವಂತಹ ಸಲ್ಮಾನ್ ಬಿಗ್ ಬಿಯನ್ನ ಹಿಂದಿಕಲಿದ್ದಾರಾ ಅಂತ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸಲ್ಲು ಸದ್ಯ ಪ್ರಭುದೇವ್ ನಿರ್ದೇಶನದ ರಾಧೆ ದಿ ಮೋಸ್ಟ್ ವಾಂಟೆಡ್ ಬಾಯ್ ಚಿತ್ರದಲ್ಲಿ ಬಿಜಿ಼ಯಾಗಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ ಬ್ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಚಿತ್ರದಲ್ಲಿ ಬಹುತಾರಾಗಣವೇ ಇದ್ದು ದಿಶಾ ಪಠಾಣಿ, ರಣದೀಪ್ ಕೂಡ ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದಾರೆ.

– ಸುಷ್ಮಿತಾ

Advertisement
Share this on...