‘ರಾಮ್ ಬಲರಾಮ್’ ಶೂಟಿಂಗ್ ಸಮಯದಲ್ಲಿ ಜಯಾ ಬಚ್ಚನ್ ರೇಖಾ ಕೆನ್ನೆಗೆ ಬಾರಿಸಿದ್ದೇಕೆ ?

in ಮನರಂಜನೆ 41 views

ಬಾಲಿವುಡ್ ನಟ ಅಮಿತಾಬ್ ಬಚ್ಚನ್’ಗೆ ಎಲ್ಲಾ ಭಾಷೆಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರನ್ನು ಇಷ್ಟಪಡದ ಜನರೇ ಇಲ್ಲ. ಬಾಲಿವುಡ್ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಅಮಿತಾಬ್ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಸಾರಿ ಚರ್ಚೆಯಾಗಿದೆ. ಏಕೆಂದರೆ ಒಂದು ಕಾಲದಲ್ಲಿ ಅಮಿತಾಬ್ ಅವರ ಹೆಸರು ರೇಖಾ ಜೊತೆ ಕೇಳಿ ಬರುತ್ತಿತ್ತು. ಈ ವಿಚಾರ ನಿಮಗೂ ಗೊತ್ತಿರಲೇಬೇಕು. ಇದೇ ಸಮಯದಲ್ಲಿ ಅವರು ಜಯಾ ಬಚ್ಚನ್ ಅವರನ್ನು ವಿವಾಹವಾದರು. ಆದರೆ ಆ ಸಮಯದಲ್ಲಿ ರೇಖಾ ಅಮಿತಾಬ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಅಮಿತಾಬ್ ಮಾತ್ರ ರೇಖಾ ಪ್ರೀತಿಯನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಅಮಿತಾಬ್ ಮದುವೆಯಾದರೂ ರೇಖಾ-ಅಮಿತಾಬ್ ಸಂಬಂಧದ ಬಗ್ಗೆ ಕಥೆಗಳು ಅಮಿತಾಬ್ ಮನೆವರೆಗೆ ತಲುಪಿದವು.

Advertisement

 

Advertisement


ಒಂದು ದಿನ ಆ ಘಟನೆ ನಡೆಯುತ್ತದೆಯೆಂದು ಯಾರೂ ಊಹಿಸಿರಲಿಲ್ಲ. ಹೌದು, ಜಯಾ ಬಚ್ಚನ್ ರೇಖಾ ಅವರಿಗೆ ಅಮಿತಾಬ್ ಬಚ್ಚನ್ ಎದುರೇ ಕಪಾಳಮೋಕ್ಷ ಮಾಡಿದರು. ಅದು ಏಕೆ ಎಂಬುದು ಇದುವರೆಗೂ ಬಹುತೇಕರಿಗೆ ತಿಳಿದಿಲ್ಲ. ಆದ್ದರಿಂದ ನಾವಿಲ್ಲಿ ಜಯಾ ಬಚ್ಚನ್ ರೇಖಾ ಅವರಿಗೆ ಹೀಗೆ ಏಕಾ ಏಕಾಏಕಿ ಕಪಾಳಮೋಕ್ಷ ಮಾಡಲು ಕಾರಣವೇನೆಂದು ತಿಳಿಯೋಣ. ವಾಸ್ತವವಾಗಿ ಜಯಾ ಬಚ್ಚನ್ ಅವರಿಗೆ ಅಮಿತಾಬ್ ಮತ್ತು ರೇಖಾ ಒಟ್ಟಿಗೆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಹೀಗಿರುವಾಗ ನಿರ್ಮಾಪಕ ಟಿಟೊ ರೇಖಾ ಮತ್ತು ಅಮಿತಾಬ್ ಅವರನ್ನು ಹಾಕಿಕೊಂಡು ‘ರಾಮ್ ಬಲರಾಮ್’ ಚಿತ್ರವನ್ನು ನಿರ್ಮಿಸಲು ಹೊರಟರು. ಆದರೆ ಆ ಸಮಯದಲ್ಲಿ ಟಿಟೊ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಜಯಾಗೆ ಈ ವಿಷಯವನ್ನು ಸ್ವತಃ ಟಿಟೊ ತಿಳಿಸಿದರು. ಆಗ ರೇಖಾ ಬದಲಿಗೆ ಜೀನತ್ ಅಮಾನ್ ಅವರನ್ನು ಚಿತ್ರದಲ್ಲಿ ಹಾಕಿಕೊಳ್ಳುವಂತೆ ಟಿಟೊ ಅವರನ್ನು ಜಯಾ ಕೇಳಿಕೊಂಡರು.

Advertisement

 

Advertisement


ಈ ಘಟನೆಯ ನಂತರ ಟಿಟೊ ಜಯಾ ಮಾತನ್ನು ಒಪ್ಪಿಕೊಂಡು ರೇಖಾಳನ್ನು ಚಿತ್ರದಿಂದ ಹೊರಹಾಕಿದರು. ಆದರೆ ಈ ಸುದ್ದಿ ತಿಳಿದ ರೇಖಾ ಚಿತ್ರದ ನಿರ್ದೇಶಕರಾದ ವಿಜಯ್ ಆನಂದ್ ಅವರೊಂದಿಗೆ ಮಾತನಾಡಿ, ಚಿತ್ರದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ ನಿರ್ದೇಶಕರು ಚಿತ್ರದ ನಿರ್ಮಾಪಕ ಟಿಟೊ ಜೊತೆ ಮಾತನಾಡಬೇಕಾಗುತ್ತದೆ ಎಂದು ರೇಖಾಗೆ ತಿಳಿಸಿದರು. ನಂತರ ರೇಖಾ ಟಿಟೊ ಜೊತೆ ಮಾತನಾಡಿ “ಯಾವುದೇ ಹಣ ತೆಗೆದುಕೊಳ್ಳದೆ ತಾನು ಈ ಚಿತ್ರದಲ್ಲಿ ಕೆಲಸ ಮಾಡುತ್ತೇನೆ” ಎಂದು ಹೇಳಿದಾಗ ಟಿಟೊ ಒಪ್ಪಿಕೊಂಡರು. ರೇಖಾ ಅವರಿಗೆ ಮತ್ತೆ ಅಮಿತಾಬ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಕೊನೆಗೆ ‘ರಾಮ್ ಬಲರಾಮ್’ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು. ಆದರೆ ರೇಖಾ ಈ ಚಿತ್ರದಲ್ಲಿ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಯಾಗೆ ತಿಳಿಸಿದಾಗ, ಇದನ್ನು ಸಹಿಸಲಾಗಲಿಲ್ಲ. ಒಂದು ದಿನ ಜಯಾ ಸದ್ದಿಲ್ಲದೆ ಅಮಿತಾಬ್’ಗೆ ಹೇಳದೆ ಚಿತ್ರದ ಸೆಟ್ ತಲುಪಿದರು.

 

ಸೆಟ್’ನಲ್ಲಿ ರೇಖಾ ಮತ್ತು ಅಮಿತಾಬ್ ಅವರು ಖಾಸಗಿಯಾಗಿ ಮಾತನಾಡುತ್ತಿರುವುದನ್ನು ಜಯಾ ನೋಡಿದಾಗ, ಅದನ್ನು ಅವರು ಸಹಿಸಲಿಲ್ಲ. ಕೊನೆಗೆ ಜಯಾ ಅವರು ಸೆಟ್’ನಲ್ಲಿದ್ದ ಎಲ್ಲರ ಮುಂದೆ ರೇಖಾ ಅವರ ಕೆನ್ನೆಗೆ ಹೊಡೆದರು. ಆ ಸಮಯದಲ್ಲಿ ಅಮಿತಾಬ್’ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅರ್ಥವಾಗಲಿಲ್ಲ. ಅವರು ಸೆಟ್ ಅನ್ನು ಸದ್ದಿಲ್ಲದೆ ಬಿಟ್ಟು ಮನೆಗೆ ಹೋದರು. ಅದರ ನಂತರ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಲಾಗುತ್ತದೆ.

Advertisement
Share this on...