ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

in Uncategorized/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 2,273 views

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದು ಗಾದೆ ಮಾತು. ಆದರೆ ಕೆಲವೊಂದು ವಿಚಾರದಲ್ಲಿ ಇದು ತುಂಬಾ ನಿಜವೆಸಿಸುತ್ತದೆ. ಅದಕ್ಕೆ ಪ್ರಕೃತಿದತ್ತವಾಗಿ ಸಿಗುವ ನೆಲ್ಲಿಕಾಯಿಯೂ ಉತ್ತಮ ಉದಾಹರಣೆ. ಕಾಣಲು ಚಿಕ್ಕದಾಗಿರುವ ನೆಲ್ಲಿಕಾಯಿಯ ಮಹಿಮೆ ಅಪಾರ. ಆಯುರ್ವೇದದಲ್ಲಿ ಔಷಧವಾಗಿ ಬಳಸಲ್ಪಡುವ ನೆಲ್ಲಿಕಾಯಿಯಿಂದ ಉಪ್ಪಿನಕಾಯಿ, ಚಟ್ನಿ ,ತಂಬುಳಿ ,ಮುರಬ್ಬಸ್ ಇತ್ಯಾದಿ ತಯಾರಿಸಬಹುದು ಎಂಬುದು ಅನಾದಿ ಕಾಲದಿಂದಲೂ ತಿಳಿದಿರುವ ವಿಚಾರ. ಇದರ ಜೊತೆಗೆ ಇಂದು ನೆಲ್ಲಿಕಾಯಿಯನ್ನು ಔಷಧಿ, ಆಹಾರಗಳಲ್ಲಿ ಮಾತ್ರವಲ್ಲದೇ ಕಾಸ್ಮೆಟಿಕ್ಸ್ ಗಳಲ್ಲಿಯೂ ಬಳಸಲಾಗುತ್ತಿದೆ. ನೆಲ್ಲಿಕಾಯಿಯನ್ನು ಬಳಸಿ ತಯಾರಿಸಿದ ಹಲವು ಉತ್ಪನ್ನಗಳು ಇಂದು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಇದರಲ್ಲಿರುವ ಔಷಧೀಯ ಗುಣಗಳು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಸಹಕಾರಿ. ಉತ್ತಮ ಉದಾಹರಣೆ ಎಂದರೆ ಕೂದಲಿನ ಆರೈಕೆಗೆ ಬಳಸಲ್ಪಡುವ ಶ್ಯಾಂಪೂಗಳಲ್ಲಿ ನೆಲ್ಲಿಕಾಯಿ ಉಪಯೋಗಿಸಲಾಗುತ್ತಿದ್ದು ಕೂದಲಿನ ಆರೋಗ್ಯ ಕ್ಕೂ ಇದು ಬಳಕೆಯಾಗುತ್ತಿದೆ.

Advertisement

Advertisement

ಸಂಸ್ಕ್ರತದಲ್ಲಿ ಆಮ್ಲಕಿ ಎಂದು ಕರೆಯಲ್ಪಡುವ ನೆಲ್ಲಿಕಾಯಿಯನ್ನು ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ನೆಲ್ಲಿಕಾಯಿ ಸೇವಿಸುವುದರಿಂದ ಪ್ರಯೋಜನಗಳು ಹಲವು. ನೆಲ್ಲಿಕಾಯಿಯಲ್ಲಿ ಇರುವ ಕ್ರೋಮಿಯಂ ಅಂಶ ಮಧುಮೇಹಿಗಳಿಗೆ ಉತ್ತಮವಾದುದು. ರಕ್ತದಲ್ಲಿನ ಸಕ್ಕರೆ ಮಟ್ಟ ಕಮ್ಮಿ ಮಾಡುವ ಶಕ್ತಿ ಇರುವ ಇದು ದೇಹದಲ್ಲಿರುವ ಗ್ಲುಕೋಸ್ ಅಂಶವನ್ನು ಬಳಸುವಂತೆ ಉತ್ತೇಜನ ನೀಡುವುದು. ಇದರ ಜೊತೆಗೆ ನೆಲ್ಲಿಕಾಯಿಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವ ಕಾರ್ಯ ಮಾಡುತ್ತದೆ.

Advertisement

ಜೀರ್ಣಕ್ರಿಯೆಯಲ್ಲಿಯೂ ನೆಲ್ಲಿಕಾಯಿ ಶ್ರಮಿಸುವುದು. ಕರುಳಿನ ಕೆಲಸ ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಇದರಲ್ಲಿರುವ ನಾರಿನಾಂಶವು ಮಲಬದ್ಧತೆಯನ್ನು ನಿವಾರಿಸುವುದರ ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇನ್ನು ಬೇಧಿಯ ಸಮಸ್ಯೆಗೂ ಇದು ಉತ್ತಮ ಮದ್ದು ಹೌದು. ಎಲ್ಲದಕ್ಕಿಂತಲೂ ಮುಖ್ಯವಾಗಿ ಜೀರ್ಣಕ್ರಿಯೆ ಸುಗಮವಾಗಿ ನಡೆಯುವಂತೆ ಇದು ಮಾಡುತ್ತದೆ.

Advertisement

ನೆಲ್ಲಿಕಾಯಿ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಅರ್ಥಾತ್ ಮೂಳೆ ,ಹಲ್ಲು ,ಉಗುರುಗಳಿಗೆ ಅಗತ್ಯವಿರುವಂತಹ ಕ್ಯಾಲ್ಸಿಯಂನ್ನು ಆಹಾರಗಳಿಂದ ಹೀರಿಕೊಳ್ಳುವ ಕಾರ್ಯ ಮಾಡುವುದು. ಇನ್ನು ನೆಲ್ಲಿಕಾಯಿ ಜ್ಯೂಸ್ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ನೀರಿನಂಶ ಅಧಿಕವಾಗಿರುವುದರಿಂದ ಇದು ಮೂತ್ರವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ದೇಹದಲ್ಲಿನ ಹೆಚ್ಚಿನ ಪ್ರಮಾಣದ ನೀರು, ಯೂರಿಕ್ ಆಮ್ಲ ,ಕಲ್ಲನ್ನು ಹೊರಹಾಕುತ್ತದೆ. ಇದು ಕಿಡ್ನಿ ಹಾಗೂ ಮೂತ್ರನಾಳಗಳಿಗೆ ಆರೋಗ್ಯಕ್ಕೂ ಇದು ಸಹಕಾರಿ. ಮೂತ್ರಕೋಶದ ಸೋಂಕನ್ನು ನಿವಾರಣೆ ಮಾಡುವ ಶಕ್ತಿ ಪುಟ್ಟ ನೆಲ್ಲಿಕಾಯಿಯಲ್ಲಿದೆ.

ನೆಲ್ಲಿಕಾಯಿ ಸೇವನೆಯಿಂದಾಗಿ ಬಿಳಿರಕ್ತಕಣ ವೃದ್ಧಿಸುತ್ತದೆ. ದೇಹದಲ್ಲಿ ಬಾಧಿಸುವಂತಹ ಕಣಗಳ ವಿರುದ್ಧ ಹೋರಾಡಿ ದೇಹದ ರಕ್ಷಣೆ ಮಾಡುತ್ತದೆ. ಇನ್ನು ತೂಕ ಇಳಿಕೆಗೂ ನೆಲ್ಲಿಕಾಯಿ ಪ್ರಯೋಜನಕಾರಿ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿ ಕೊಬ್ಬನ್ನು ಕರಗಿ ಹೋಗುತ್ತದೆ. ಕೊಲೆಸ್ಟ್ರಾಲ್ ನ್ನು ತಗ್ಗಿಸಿ ನಿಯಂತ್ರಣದಲ್ಲಿಡುವ ನೆಲ್ಲಿಕಾಯಿಯು ದೇಹದಲ್ಲಿನ ಪ್ರೊಟೀನ್ ಅಂಶವನ್ನು ಹೆಚ್ಚಿಸುವುದು. ಒಟ್ಟಿನಲ್ಲಿ ಪುಟ್ಟದಾದ ನೆಲ್ಲಿಕಾಯಿಯಲ್ಲಿ ಬೆಟ್ಟದಷ್ಟು ಗುಣಗಳು ಇರುವುದಂತೂ ದಿಟ. ಇನ್ನು ಮೇಲೆ ನೆಲ್ಲಿಕಾಯಿ ದೊರೆತಾಗ ತಿನ್ನಲು ಮರೆಯದಿರಿ.
– ಅಹಲ್ಯಾ

Advertisement
Share this on...