ಕೋರೋನಾ ವಾರಿಯರ್ಸ್ ಸುರಕ್ಷತೆಗೆ ಮುಂದಾದ ಅಮೂಲ್ಯ- ಜಗದೀಶ್..!

in Kannada News 50 views

ಸಾಮಾಜಿಕ ಕಾರ್ಯಗಳ ಮೂಲಕವೇ ಗುರುತಿಸಿಕೊಂಡಿರುವ ನಟಿ ಅಮೂಲ್ಯ- ಜಗದೀಶ್ ಚಂದ್ರ ದಂಪತಿ ಈ ಹಿಂದೆ RSS ಮೂಲಕ ಅಸಹಾಯಕರಿಗೆ ಒಂದು ಟನ್ ಅಕ್ಕಿ ನೀಡಿದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು ಕೋರೋನಾ ವಾರಿಯರ್ಸ್ ಸುರಕ್ಷತೆಗೆ ಮುಂದಾಗಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಡವರಿಗೆ, ವೈದ್ಯರ ಸುರಕ್ಷತೆಗೆ, ಪೊಲೀಸರಿಗೆ ಕೈಲಾದಷ್ಟು ಸಹಾಯ ಮಾಡಿ ಅವರನ್ನ ಗೌರವಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಅಮೂಲ್ಯ- ಜಗದೀಶ್ ದಂಪತಿ ಈ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಕರೆಗೆ ಓಗೊಟ್ಟು ನಟಿ ಅಮೂಲ್ಯ- ಜಗದೀಶ್ ದಂಪತಿ ಮಹತ್ತರ ಕೆಲಸಕ್ಕೆ ಕೈಹಾಕಿದ್ದು ವೈದ್ಯರು, ಪೊಲೀಸರು, ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವವರಿಗಾಗಿ ಒಟ್ಟು 10 ಸಾವಿರ ಮಾಸ್ಕ್ ಗಳನ್ನ ತಯಾರಿಸುತ್ತಿದ್ದಾರೆ.

Advertisement

 

Advertisement

Advertisement

 

Advertisement

ಇನ್ನೂ ವಿಶೇಷವೆಂದರೆ ಇವುಗಳನ್ನ ಯಾವುದೇ ಫ್ಯಾಕ್ಟರಿ ಅಥವಾ ಅಂಗಡಿಗಳಿಂದ ತರಿಸದೆ 25 ಕ್ಕೂ ಹೆಚ್ಚು ಜನ ಬಡ ಮಹಿಳಾ ಕಾರ್ಮಿಕರಿಂದ ಹೋಲಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರಿಗೂ ಕೆಲಸ ನೀಡಿ ಸಂಬಳ ಕೊಟ್ಟು ನೆರವಾಗುತ್ತಿದ್ದಾರೆ. ಹೀಗೆ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಕುರಿತು ನಟಿ ಅಮೂಲ್ಯ ಪತಿ ಜಗದೀಶ್ ರವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳಿಂದ ಸ್ಪೂರ್ತಿ ಹೊಂದಿ ಈ ಕೆಲಸ ಮಾಡುತ್ತಿದ್ದೇವೆ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ಕೋರೋನಾ ವಾರಿಯರ್ಸ್ ಗಳಾದ ವೈದ್ಯಕೀಯ, ಪೊಲೀಸ್, ಸ್ವಚ್ಛತಾ ಕೆಲಸ ಮಾಡುವವರು, ಸ್ವಯಂಸೇವಕರಿಗೆ ಸಹಾಯಮಾಡಲು ಇರುವುದು ಒಂದೇ ದಾರಿ ಅದು ಅವರ ಸುರಕ್ಷತೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಅಗತ್ಯವಿದೆ.

 

 

ಜಪಾನ್ ಸೇರಿದಂತೆ ಕೆಲವು ದೇಶಗಳು ಈ ಮಹಾಮಾರಿಯಿಂದ ಜಾಸ್ತಿ ತೊಂದರೆ ಅನುಭವಿಸುತ್ತಿಲ್ಲ, ಕಾರಣ ಅಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ. ನಮ್ಮ ಸರ್ಕಾರ ಸಹ ಮಾಸ್ಕ್ ಧರಿಸುವಂತೆ ಅರಿವು ಮೂಡಿಸುತ್ತಿದೆ. ಹೀಗಾಗಿ ಕೊರೋನಾ ವಾರಿಯರ್ಸ್ ಸುರಕ್ಷತೆ ದೃಷ್ಟಿಯಿಂದ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ. ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಸುಮಾರು 25 ಕ್ಕೂ ಹೆಚ್ಚು ಮಹಿಳೆಯರನ್ನ ನಾವು ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಅವರೆಲ್ಲರೂ ಅವರ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ಅವರು ಸಹ ಒಂದೆರಡು ತಿಂಗಳು ಕುಟುಂಬ ನಿರ್ವಹಿಸಬಹುದು ಎಂದಿದ್ದಾರೆ.

 

 

ಇವರು ತಯಾರಿಸಿದ ಬಟ್ಟೆ ಮಾಸ್ಕ್ ಗಳನ್ನ ಕೋರೋನಾ ವಾರಿಯರ್ಸ್ ಗೆ ಹಾಗೂ ಅಗತ್ಯವಿರುವವರಿಗೆ ನೀಡುತ್ತೇವೆ. ಈ ಮೂಲಕ ನಮ್ಮ ತಂಡದಿಂದ ಅಳಿಲು ಸೇವೆ ಮಾಡುತ್ತಿದ್ದೇವೆ. ನೀವು ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಎಂದು ಅವರು ಮನವಿ ಮಾಡಿದ್ದಾರೆ. ಸದಾ ಒಂದಲ್ಲಾ ಒಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ದಂಪತಿ ಇದೀಗ ಕೊರೊನಾ ವಾರಿಯರ್ಸ್ ಗಾಗಿ ಮಾಸ್ಕ್ ತಯಾರಿಸಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಬೆಂಗಳೂರು ಸಿಟಿ ಪೊಲೀಸ್ ಖಾತೆಯಿಂದ ಟ್ವೀಟ್ ಮಾಡಿ ‘ಹೀರೋ ಆಫ್ ದಿ ಡೇ’ ಎಂದು ಹಾಡಿ ಹೊಗಳಿದ್ದಾರೆ.

– ಸುಷ್ಮಿತಾ

Advertisement
Share this on...