ಅನಂತ್ ನಾಗ್-ಗಾಯಿತ್ರಿಯವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ…?

in ಮನರಂಜನೆ 394 views

ಆಲದ ಮರದಂತೆ ಆರ್ಭಟಿಸಿ ಹಬ್ಬದೆ ತೆಂಗಿನ ಮರದಂತೆ ಸರಳವಾಗಿ, ನೇರವಾಗಿ ತುಂಬಾ ಎತ್ತರಕ್ಕೆ ಕನ್ನಡ ಚಿತ್ರರಂಗದಲ್ಲಿ ಬೆಳೆದ ಅದ್ಭುತ ನಟ ನಮ್ಮ ಶಂಕರಣ್ಣನ ಅಣ್ಣ ಅನಂತ್ ನಾಗರಕಟ್ಟೆ ಎಂಬ ಮೂಲ ಹೆಸರಿನ ಕನ್ನಡ ಚಿತ್ರರಂಗದ ನಟ ಅನಂತ್ ನಾಗ್. ಬಿಸಿಲಾದರೇನು ಮಳೆಯಾದರೇನು ಎಂದು ಸುಮ್ಮನೆ ತನ್ನ ಪಾಡಿಗೆ ತಾನು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಸಾಗಿದರೂ ಸಾಧನೆಯ ದಾರಿ ಸವೆಸಿದ್ದರು. ಒಂದು ಕಾಲದಲ್ಲಿ ಅನಂತ್ ನಾಗ್ ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ಚಾಕಲೇಟ್ ಹೀರೋ ಆಗಿದ್ದರು. ನಿನ್ನ ಗಂಡ ಹೇಗಿರಬೇಕು ಅಂತ ಆಗಿನ ಕಾಲದ ಹುಡುಗಿರಿಗೆ ಕೇಳಿದರೆ ಅದೆಷ್ಟೋ ಅಂದಿನ ಯುವತಿಯರು ಅನಂತನಾಗ್ ತರ ಇರಬೇಕು ಅಂತ ಹೇಳುತ್ತಿದ್ದರು. ನವರಸಗಳನ್ನು ನಾಜೂಕಾಗಿ ಹೆಚ್ಚು-ಕಡಿಮೆ ಇಲ್ಲದೆ ಬ್ಯಾಲೆನ್ಸ್ ಮಾಡಿಕೊಂಡು ನಟಿಸುತ್ತಿದ್ದ ನಟರಲ್ಲಿ ಅನಂತನಾಗ್ ಕೂಡ ಒಬ್ಬರು. ಅವರ ಕನ್ನಡ ಭಾಷೆಯ ಸ್ಪಷ್ಟತೆ ಹಾಗೂ ಡೈಲಾಗ್ ಡಿಲಿವರಿ ಅಂತೂ ಅದ್ಭುತ. ಇಂದಿನ ಅದೆಷ್ಟೋ ಯುವ ನಟರಿಗೆ ಸ್ಪೂರ್ತಿ ಆಗುತ್ತಾರೆ ಅನಂತನಾಗ್. ಅವರ ಅದೆಷ್ಟೋ ಸಿನಿಮಾಗಳಲ್ಲಿ ಜನರನ್ನು ಕಣ್ಣು ತುಂಬಿ ಅಳಿಸಿದ್ದಾರೆ, ಹೊಟ್ಟೆ ತುಂಬಾ ನಗಿಸಿದ್ದಾರೆ.

Advertisement

 

Advertisement

Advertisement

ಅನಂತ್ ನಾಗ್ ‘ಹಂಸಗೀತೆ’ ಅಂತಹ ಚಿತ್ರದಲ್ಲಿ ನಟಿಸಿ ಜನರ ಮನಸ್ಸನ್ನು ಜಾಗೃತಿ ಗೊಳಿಸಿದ್ದಾರೆ. ಇಂತಹ ಅನಂತನಾಗ್ ರವರಂತಹ ಅನಂತನಾಗ್ ರವರಿಗೂ ಒಂದು ಸಣ್ಣ ಲವ್ ಸ್ಟೋರಿ ಇದೆ. ಅನಂತ್ ನಾಗ್ ರವರು ಯಾವುದೋ ಸಿನಿಮಾ ಶೂಟಿಂಗ್ ಗಾಗಿ ನಂದಿಬೆಟ್ಟಕ್ಕೆ ಹೋಗಿದ್ದರು. ಶೂಟಿಂಗ್ ಮುಗಿಸಿಕೊಂಡು ವಾಪಸು ಬರುವಾಗ ನಟಿ ಗಾಯಿತ್ರಿಯವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡರು. ವಾಪಾಸು ಬರುವಾಗ ಕಾರಿನಲ್ಲಿಯೇ ಗಾಯಿತ್ರಿಯವರನ್ನು ಲವ್ ಎನ್ನದೆ ನೀವು ನನ್ನನ್ನು ಮದುವೆಯಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಡೈರೆಕ್ಟಾಗಿ ಮದುವೆ ಮ್ಯಾಟರ್ ಗೆ ಬಂದು ಬಿಟ್ಟರು ಅನಂತ್ ನಾಗ್. ನಂತರ ಇಬ್ಬರು ಪರಸ್ಪರ ಒಪ್ಪಿ 1977 ರಲ್ಲಿ ನಟಿ ಗಾಯಿತ್ರಿಯವರನ್ನು ಅನಂತ್ ನಾಗ್ ಮದುವೆಯಾದರು.

Advertisement

 


ಮದುವೆಯಾದ ಮೇಲೆಯೆ ಗಾಯತ್ರಿ ಅವರನ್ನು ಅನಂತ್ ನಾಗ್’ರವರು ಪ್ರೀತಿಸಲು ಕಲಿತಿದ್ದು. ಮದುವೆಯಾದ ಮೇಲೆ ನನ್ನನ್ನು ಸಿನಿಮಾಗಳಲ್ಲಿ ನಟಿಸು ಎಂದು ಒತ್ತಾಯ ಮಾಡಬಾರದು ಎಂದು ಗಾಯತ್ರಿಯವರು ಅನಂತ್ ನಾಗ್ ಅವರಲ್ಲಿ ಕೇಳಿಕೊಂಡಿದ್ದರು. ಮದುವೆಯ ನಂತರ ನಟಿ ಗಾಯಿತ್ರಿ ಯಾವುದೇ ಚಿತ್ರದಲ್ಲೂ ನಟಿಸಲಿಲ್ಲ. ಅನಂತ್ ನಾಗ್ ರವರನ್ನು ಗಾಯಿತ್ರಿಯವರು ತುಂಬಾ ಪ್ರೀತಿಸುತ್ತಾರಂತೆ. ಅನಂತ್ ನಾಗ್ ರವರಿಗೆ ಎಂತಹ ಪರಿಸ್ಥಿತಿಯಲ್ಲೂ ಬೆಂಬಲವಾಗಿ ನಿಲ್ಲುತ್ತಾರಂತೆ ಪತ್ನಿ ಗಾಯಿತ್ರಿ. ಈ ಎಲ್ಲಾ ವಿಷಯಗಳನ್ನು ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು ನಟ ಅನಂತ್ ನಾಗ್.

– ಸುಷ್ಮಿತಾ

Advertisement
Share this on...