ಮಕ್ಕಳೊಂದಿಗೆ ಅನಿರುಧ್ ಟಿಕ್​​ಟಾಕ್​​​​…ವೈರಲ್ ಆಯ್ತು ಡಾ. ವಿಷ್ಣು ಮೊಮ್ಮಕ್ಕಳ ಡ್ಯಾನ್ಸ್ ವಿಡಿಯೋ..!

in ಮನರಂಜನೆ 47 views

‘ಜೊತೆ ಜೊತೆಯಲಿ’ ಧಾರಾವಾಹಿ ವೀಕ್ಷಕರು ಈಗ ಆರ್ಯವರ್ಧನ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. 45 ವರ್ಷ ವಯಸ್ಸಿನ ಖ್ಯಾತ ಉದ್ಯಮಿ ಆರ್ಯವರ್ಧನ್ , 22 ವರ್ಷದ ಮಧ್ಯಮ ವರ್ಗದ ಯುವತಿ ನಡುವಿನ ಪ್ರೇಮಕಥೆಯನ್ನು ಜನರು ಬಹಳ ಮೆಚ್ಚಿದ್ದಾರೆ. ಆದರೆ ಲಾಕ್​ಡೌನ್​ ಪರಿಣಾಮ ಧಾರಾವಾಹಿಯ ಫ್ರೆಷ್ ಎಪಿಸೋಡ್​​​​ಗಳು ಮುಗಿದಿದ್ದರಿಂದ ಸದ್ಯಕ್ಕೆ ಜನರು ಈ ಧಾರಾವಾಹಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.ಆದರೆ ಅನಿರುಧ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ನಿನ್ನೆ ಅನಿರುಧ್ ತಮ್ಮ ಮಕ್ಕಳಾದ ಜ್ಯೇಷ್ಠ ಹಾಗೂ ಶ್ಲೋಕ ಇಬ್ಬರೊಂದಿಗೆ ಮಾಡಿರುವ ಟಿಕ್​​​ಟಾಕ್ ವಿಡಿಯೋವೊಂದು ಬಹಳ ವೈರಲ್ ಆಗುತ್ತಿದೆ. ಅಮಿತಾಬ್ ಬಚ್ಚನ್​, ಗೋವಿಂದ, ಮಾಧುರಿ ದೀಕ್ಷಿತ್ ನಟಿಸಿರುವ ‘ಬಡೆ ಮಿಯಾ, ಚೋಟೆ ಮಿಯಾ’ ಚಿತ್ರದ ‘ಮೆರಾ ಪ್ಯಾರ್​​​​​ ಕಾ ರಸ್​​​ ಜರಾ ಚಖಣಾ’ ಹಾಡಿಗೆ ಟಿಕ್​ ಟಾಕ್​ ಮಾಡಿದ್ದಾರೆ. ಅನಿರುಧ್ ಹಾಗೂ ಪುತ್ರ ಜ್ಯೇಷ್ಠ, ಬ್ಲಾಕ್ ಆ್ಯಂಡ್​ ಬ್ಲಾಕ್​​​​​​​​​​​ ಕಾಸ್ಟ್ಯೂಮ್​​ನಲ್ಲಿದ್ದರೆ, ಪುತ್ರಿ ಶ್ಲೋಕ ಬ್ಲ್ಯಾಕ್ ಅ್ಯಂಡ್​ ಗೋಲ್ಡ್ ಮಿಶ್ರಿತ ಒನ್ ಪೀಸ್ ಡ್ರೆಸ್​​​​​​ನಲ್ಲಿ ಮಿಂಚಿದ್ದಾರೆ.

Advertisement

 

Advertisement

 

Advertisement

Advertisement

 

ಈ ಟಿಕ್​​ಟಾಕ್​​ನಲ್ಲಿ ಅಪ್ಪ-ಮಕ್ಕಳ ಕೆಮಿಸ್ಟ್ರಿ ಸಖತ್ ಚೆನ್ನಾಗಿದೆ. ಒಮ್ಮೆ ವಿಡಿಯೋ ನೋಡಿದವರು ಮತ್ತೆ ಮತ್ತೆ ರಿಪೀಟ್ ಮಾಡುತ್ತಾ ನೋಡುತ್ತಿದ್ದಾರೆ. ಅನಿರುಧ್ ಪತ್ನಿ ಕೀರ್ತಿ ಈ ವಿಡಿಯೋವನ್ನು ರೆಕಾರ್ಡ್​ ಮಾಡಿದ್ದಾರೆ. ವಿಡಿಯೋವನ್ನು ಅನಿರುಧ್ ತಮ್ಮ ಫೇಸ್​​ಬುಕ್​​ನಲ್ಲಿ ಅಪ್​​ಲೊಡ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ 28 ಸಾವಿರ ಲೈಕ್ಸ್, 2 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ಸ್ ಸಿಕ್ಕಿದೆ, 1800 ಮಂದಿ ವಿಡಿಯೋವನ್ನು ಷೇರ್ ಮಾಡಿದ್ದಾರೆ. ವಿಡಿಯೋ ನೋಡಿದವರು ಪುತ್ರಿ ಶ್ಲೋಕ ಒಳ್ಳೆಯ ಡ್ಯಾನ್ಸರ್ ಎಂದು ಕಾಂಪ್ಲಿಮೆಂಟ್ಸ್​​​​​​​​​ ನೀಡಿದ್ದಾರೆ. ಅಲ್ಲದೆ ಪುತ್ರ ಜ್ಯೇಷ್ಠ ತಾತ ಡಾ. ವಿಷ್ಣುವರ್ಧನ್ ಅವರಂತೆ ಒಳ್ಳೆ ನಟನಾಗಿ ಹೆಸರು ಮಾಡುತ್ತಾರೆ ಎಂದು ಜನರು ಕಮೆಂಟ್ ಮಾಡಿದ್ದಾರೆ.

 

‘ಚಿಟ್ಟೆ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಅನಿರುಧ್ ಜತ್ಕರ್ ನಂತರ ತುಂಟಾಟ, ನೀನೆಲ್ಲೋ ನಾನಲ್ಲಿ, ತಮಾಷೆಗಾಗಿ, ನಲಿ ನಲಿಯುತ, ರಾಜಾಸಿಂಹ ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವರಿಗೆ ಯಾವ ಚಿತ್ರಗಳೂ ಬ್ರೇಕ್ ನೀಡಿರಲಿಲ್ಲ. ತಾಳ್ಮೆಯಿಂದ ಕಾಯುತ್ತಿದ್ದ ಅನಿರುಧ್ ಅವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದೇ ತಡ ಅವರು ರಾಜ್ಯಾದ್ಯಂತ ಮನೆ ಮಾತಾಗಿ ಹೋದರು. ಅದರಲ್ಲೂ ಅವರಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ಇದೀಗ ಈ ವಿಡಿಯೋ ಅವರಿಗೆ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ.

Advertisement
Share this on...