ಮೂರ್ನಾಲ್ಕು ದಿನದಿಂದ ದೆವ್ವದ ಜೊತೆ ಜೂಟಾಟ ಆಡುತ್ತಿರುವ ಅನಿತಾ ಭಟ್ !

in ಮನರಂಜನೆ/ಸಿನಿಮಾ 160 views

ಸೈಕೋ ಎಂಬ ವಿಶಿಷ್ಟ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಅನಿತಾ ಭಟ್ ಅವರು  ತನ್ನ ಗ್ಲಾಮರಸ್ ಲುಕ್ ಹಾಗೂ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನು ಹದಿಮೂರು ವರ್ಷದ ಸಿನಿ ಜರ್ನಿಯಲ್ಲಿ ಹತ್ತಾರು ಚಿತ್ರಗಳಲ್ಲಿ ಕಾಣಿಸಿಕೊಂಡ ಈ ಹಾಟ್ ಬ್ಯೂಟಿ, ಟಗರು ಚಿತ್ರದಲ್ಲಿ ಡಾಲಿ  ಜೊತೆಗಿನ ಹಾಟ್  ಸೀನ್ ಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದ್ದಂತೂ ಸತ್ಯ. ಸಿನಿಮಾಗಳನ್ನು ಹೊರತು ಪಡಿಸಿ ಸದಾ ಫಿಟ್ನೆಸ್ ವಿಚಾರವಾಗಿ ಗಮನ ಸೆಳೆಯುತಿದ್ದ ಅನಿತಾ ಭಟ್, ಈ ವರ್ಷ ಬರೋಬ್ಬರಿ ನಾಲ್ಕು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವರ್ಷದ ಪ್ರಾರಂಭದಲ್ಲಿ ಬೆಂಗಳೂರು 69 ಎಂಬ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಹಾಟ್ ಮತ್ತು ತುಟಿಯ ಚುಂಬನ ಸೀನ್ ಗಳಿಂದ ಯುವಪೀಳಿಗೆಗಳ ಗಮನ ಸೆಳೆದಿದ್ದರು. ಈ ಸಿನಿಮಾ ಅವರ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾ ಅಂತ ಹೇಳಬಹುದು..

Advertisement

 

Advertisement

Advertisement

 

Advertisement

ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ  ಜೂಟಾಟ ಎಂಬ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ನಾಗೇಂದ್ರ ಕಾರ್ತಿಕ್  ಅವರು. ಈ ಹಿಂದೆ ನಾಗೇಂದ್ರ ಕಾರ್ತಿಕ್ ಅವರು ಸಹ ನಿರ್ದೇಶಕರಾಗಿ ಕರಿಯಾ ೨ , ದೇವ್ರಾಣೆ, ಕಾಂಚನ ಹೀಗೆ ೨೫ ಸಿನಿಮಾಗಳಲ್ಲಿ ಕೆಲಸ ಮಾಡುತ್ತ, ಸುಮಾರು ಹತ್ತು ವರುಷದಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ಇದೀಗ ಮೊದಲ ಬಾರಿಗೆ  ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಜೂಟಾಟ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಮನು, ದಡಿಯ ಗಿರಿ, ಮೋಹನ್ ಹೀಗೆ ಕಲಾವಿದರ ದಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ವಿಶೇಷ ಅಂದರೆ ಅನಿತಾ ಭಟ್ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 


ಇನ್ನು ದೇಶದಲ್ಲಿ ಇದ್ದ ಲಾಕ್‌ಡೌನ್‌ ಇದೀಗ  ಸಡಿಲಗೊಂಡಿದ್ದು,  ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೋಗಿ, ಯಶಸ್ವಿಯಾಗಿ ಮುಗಿಸಿದ ಅವರು ಚಿತ್ರದ ಕೆಲವು ಇಂಟ್ರೇಸ್ಟಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಜೂಟಾಟ ಚಿತ್ರದ ಬಗ್ಗೆ ಹೇಳುವುದಾದರೆ  ಗ್ಲಾಮರ್‌, ಹಾರರ್‌ ಹಾಗೂ ಕಾಮಿಡಿ ಈ  ಮೂರು ಸಹ ಸಿನಿಮಾದ ಮುಖ್ಯ ಅಂಶಗಳು. ಕಳೆದ ವರುಷ ಕನ್ನಡದಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ಬಂದಿದ್ದು, ದೆವ್ವ ಮತ್ತು ಆತ್ಮಗಳು ಹೇಗೆಲ್ಲ ಬರುತ್ತವೆ ಎಂಬುದನ್ನು  ಪ್ರೇಕ್ಷಕರು ಈಗಾಗಲೇ ತೆರೆಯ ಮೇಲೆ ನೋಡಿರುತ್ತಾರೆ. ಆದರೆ, ಯಾರೂ ಊಹಿಸಿಕೊಳ್ಳದ  ಆತ್ಮವೊಂದು ಈ ಸಿನಿಮಾದಲ್ಲಿ ಹುಟ್ಟಿಕೊಳ್ಳುತ್ತದೆಯಂತೆ. ಅದು ಎಲ್ಲಿಂದ ಬಂತು, ಹೇಗೆ ಬಂತು ಎಂಬುದು ಚಿತ್ರದ ಕತೆಯಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಐದಾರು ದಿನಗಳ ಚಿತ್ರೀಕರಣ ಉಳಿದಿದ್ದು, ಅಂದುಕೊಂಡಂತೆ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

 

 

ಇನ್ನು ಲಾಕ್‌ಡೌನ್‌ಗೂ ಮೊದಲೇ ಜೂಟಾಟ ಸಿನಿಮಾದ  ಚಿತ್ರೀಕರಣ ಸೆಟ್ಟೇರಿತ್ತು. ಆದರೆ  ಕೊರೋನಾ ದಿಂದ ದೇಶವೇ ಲಾಕ್‌ಡೌನ್‌ ಆಗಿದ್ದು ಚಿತ್ರೀಕರಣವನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅರ್ಧಕ್ಕೆ ನಿಂತಿರುವಂತಹ ಚಿತ್ರಗಳ ಚಿತ್ರೀಕರಣವನ್ನು ಮಾಡಿಕೊಳ್ಳಬಹುದು ಎಂದು ಸರ್ಕಾರ ಅದೇಶ ಹೊರಡಿಸಿದ ಮೇಲೆ, ಕಳೆದ ಐದು ದಿನಗಳಿಂದ ಶೂಟಿಂಗ್‌ ಮಾಡುತ್ತಿದ್ದೇವೆ ಎಂದು ನಾಗೇಶ್ ತಿಳಿಸಿದ್ದಾರೆ. ಚಿತ್ರೀಕರಣ ಸೆಟ್‌ನಲ್ಲಿ ತಂತ್ರಜ್ಞರು, ನಿರ್ದೇಶನ ವಿಭಾಗ ಹಾಗೂ ಕಲಾವಿದರು ಸೇರಿ 15 ಜನ ಮಾತ್ರ ಇದ್ದು, ಸರ್ಕಾರ ಹೇಳಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಚಿತ್ರೀಕರಣ ಮಾಡುತ್ತಿದ್ದಾರೆ.  ಇಲ್ಲಿವರೆಗೂ  ಯಾವುದೇ ರೀತಿಯ ತೊಂದರೆಯನ್ನು ಚಿತ್ರತಂಡ ಹೆದರಿಸಿಲ್ಲವಂತೆ. ಮೆಡಿಕಲ್‌ ಚೆಕಪ್‌, ಪಿಪಿಇ ಕಿಟ್‌, ಒಂದಿನಕ್ಕೆ ಒಬ್ಬರಿಗೆ ಮೂರು ಅಥವಾ ನಾಲ್ಕು ಮಾಸ್ಕ್‌ಗಳು, ಸ್ಯಾನಿಟೈಸರ್‌  ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಬಜೆಟ್‌ ಹೆಚ್ಚಾಗಿದೆ. ಇದು ಅನಿವಾರ್ಯ ಕೂಡ ‘ಎನ್ನುತ್ತಾರೆ ನಾಗೇಶ್ ಕಾರ್ತಿಕ್‌.

Advertisement
Share this on...