ಅಂಜನಾಪುರ ಅಣೆಕಟ್ಟು ಮತ್ತು ಉದ್ಯಾನವನ

in News/ಕನ್ನಡ ಮಾಹಿತಿ 297 views

ಅಂಜನಾಪುರ ಆಣೆಕಟ್ಟು ಈ ಹೆಸರು ಪ್ರವಾಸಿಗರಿಗೆ ತುಂಬಾ ಆತ್ಮೀಯ ಎನಿಸುತ್ತದೆ. ಆದರೆ ಈಗ ಈ ಆಣೆಕಟ್ಟು ಕೇವಲ ಆಣೆಕಟ್ಟು ಮಾತ್ರವಲ್ಲದೆ ಉದ್ಯಾನವನವಾಗಿ ಕಂಗೊಳಿಸುತ್ತಿದೆ.ಪ್ರವಾಸಿಗರ ಮನಸೆಳೆಯುವ ಒಂದು ಸುಂದರ ತಾಣ ಇದಾಗಿದೆ. ಆಣೆಕಟ್ಟಿನ ಪಕ್ಕದಲ್ಲಿ 6.5 ಎಕರೆ ಪ್ರದೇಶವನ್ನು ಸಾರ್ವಜನಿಕ ಬಳಕೆಗೆ ಮುಕ್ತವೆಂದು ರಾಜ್ಯಸರ್ಕಾರ 6 ಕೋಟಿ ಮಂಜೂರು ಮಾಡಿತ್ತು. ಎತ್ತ ನೋಡಿದರೂ ನೀರೆ ಕಂಗೊಳಿಸುತ್ತಿದ್ದ ಆಣೆಕಟ್ಟಿನ ಪಕ್ಕದಲ್ಲಿ ಈ ಉದ್ಯಾನವನವನ್ನು ನಿರ್ಮಿಸಿರುವುದು ಇದರ ರಮಣೀಯ ನೋಟಕ್ಕೆ ಇನ್ನೊಂದು ಗರಿಯನ್ನು ಸೇರಿಸಿದಂತಾಗಿದೆ. ಈ ಉದ್ಯಾನವನವು 6.5 ಎಕರೆ ಪ್ರದೇಶದಲ್ಲಿದ್ದು ವಿಸ್ತಾರವಾದ ಹುಲ್ಲುಹಾಸುಗಳು,ಸಂಗೀತ ಕಾರಂಜಿ,ಪೆಗ್ರೋಲಾ, ವಾಕಿಂಗ್ ಪಥ ಮತ್ತು ಹಣ್ಣುಗಳನ್ನು ಹೊಂದಿರುವ ಮರಗಳಿವೆ. ಇದರ ಇನ್ನೊಂದು ವೈಶಷ್ಟ್ಯವೆಂದರೆ ಬ್ರಿಟಿಷ್ ಸರಕಾರದ ಅನ್ಯಾಯದ ನೀತಿಗಳ ವಿರುದ್ಧ 1942 ರಲ್ಲಿ ಈಸೂರು ಗ್ರಾಮದ ಜನರು ನಡೆಸಿದ ದಂಗೆ ಸಿಮೆಂಟ್ ಚಿತ್ರಣದ ಮೂಲಕ ಇಲ್ಲಿ ಮರುಸೃಷ್ಠಿಯಾಗಿದೆ.

Advertisement

Advertisement

ಇನ್ನೂ ಅನೇಕ ರೀತಿಯ ವ್ಯಕ್ತಿಗತ ಚಿತ್ರಣಗಳು ಇಲ್ಲಿ ಜೀವಂತಿಕೆ ಇರುವಂತೆ ನಿಂತಿದೆ.ಮತ್ತು ಮಲೆನಾಡು ಪ್ರದೇಶದ ಕೃಷಿ ಕಾರ್ಯಗಳ ಕುರಿತಾದ ಸಿಮೆಂಟ್ ಶಿಲ್ಪಗಳಿಂದ ಉದ್ಯಾನವನವು ಅಲಂಕೃತವಾಗಿದೆ.ಭತ್ತದ ಕಸಿ ಮತ್ತು ಆಕಾನಟ್ ಕೊಯ್ಲು ಸೇರಿದಂತೆ ಹಲವು ರೀತಿಯ ಚಿತ್ರಣಗಳು ಇಲ್ಲಿ ರೂಪಗೊಂಡಿದೆ. ಕುಮದ್ವತಿಗೆ ಅಡ್ಡಲಾಗಿರುವ ಈ ಆಣೆಕಟ್ಟು ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲವಾಗಿದೆ.4000 ಹೆಕ್ಟೇರ್ ಭೂಮಿಗೆ ನೀರಾವರಿ ಸೇವೆಯನ್ನು ಒದಗಿಸುತ್ತದೆ.

Advertisement

ಈಸೂರು ಗ್ರಾಮದಲ್ಲಿ ಭಜನೆ ಮತ್ತು ಖಾದಿ ನೇಯ್ಗೆ ಅಧಿವೇಶನಗಳನ್ನು ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಸಿಮೆಂಟ್ ಶಿಲ್ಪ ಮತ್ತು ಡೊಳ್ಳು ಕುಣಿತ ಕಲಾವಿದರ ಸಿಮೆಂಟ್ ಶಿಲ್ಪಗಳನ್ನು ಇಡಲಾಗಿದೆ. ಅಂಜನಾಪುರ ಆಣೆಕಟ್ಟಿನ ಹಿನ್ನೀರಿನಲ್ಲಿ ದೋಣಿ ವಿಹಾರವನ್ನು ಪರಿಚಯಿಸಲಾಗಿದೆ.ನೀರಿನ ಅಲೆಗಳ ಆ ಸಂಚಲನ ವರ್ಣಿಸಲಾಗದು ನೀರಿನ ಭೋರ್ಗರೆತದ ಆ ಸಪ್ಪಳ ನೋಡಲಿಕ್ಕೆ ಕಣ್ಣುಗಳೇರಡು ಸಾಲದು. ಈ ದೃಶ್ಯಾವಳಿಗಳನ್ನು ಕಣ್ತುಂಬಿ ಕೊಂಡರೆ ಸ್ವರ್ಗವೇ ಭೂಮಿಗಿಳಿದು ಬಂದ ಅನುಭವ ಆಗುತ್ತದೆ.

Advertisement

ಈ ಉದ್ಯಾನವನ ಪ್ರವಾಸಿಗರ ಮನಸೂರೆ ಮಾಡುವಂತಹ ಒಂದು ಪ್ರೇಕ್ಷಣೀಯ ಸ್ಥಳ ಇದಾಗಿದೆ.ಬರುವ ಪ್ರವಾಸಿಗರ ಮನಸ್ಸಿಗೆ ಮುದವನ್ನು ನೀಡುತ್ತದೆ. ಮೊದಲು ಬರಿ ಆಣೆಕಟ್ಟು ಮತ್ತು ದುಮ್ಮಿಕ್ಕುವ ಜಲಧಾರೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದ್ದ ಈ ಸ್ಥಳ ಇಂದು ಉದ್ಯಾನವನವಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ.ಅಪಾರ ಪ್ರಮಾಣದ ಪ್ರವಾಸಿಗರು ಎಲ್ಲೆಡೆಯಿಂದ ಬರುತ್ತಾರೆ.ಪ್ರವಾಸಿಗರ ಮನಸೆಳೆಯುವ ಈ ಆಣೆಕಟ್ಟು ಇರುವುದು ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿದೆ. ಒಮ್ಮೆ ಈ ಪ್ರೇಕ್ಷಣೀಯ ಸ್ಥಳಕ್ಕೆ ಬಂದು ನೋಡಿ..

Advertisement
Share this on...