ಆಂಜನೇಯನಿಂದ ಭಾರತಕ್ಕೆ ಬಂದ ಮಾವು : ರಾಮಾಯಣಕ್ಕೂ ಮಾವಿಗೂ ಇರುವ ನಂಟು ಇಲ್ಲಿದೇ ನೋಡಿ..

in ಕನ್ನಡ ಮಾಹಿತಿ 46 views

ಹಣ್ಣುಗಳ ರಾಜ ಎಂದರೆ ಅದು ಸಿಹಿ ಬರಿತವಾದಂತಹ ಮಾವಿನ ಹಣ್ಣು. ಇನ್ನು ರಾಮಾಯಣದಲ್ಲೂ ಕೂಡ ಈ ಮಾವಿನ ಹಣ್ಣಿನ ಬಗ್ಗೆ ಉಲ್ಲೇಖವಾಗಿರುವುದು ವಿಶೇಷ‌. ಹೌದು ವಾಯುಪುತ್ರನೇ ಭಾರತಕ್ಕೆ ಮಾವಿನ ಹಣ್ಣನ್ನು ತಂದಿದ್ದು ಎಂಬ ಒಂದು ರೋಚಕವಾದ ಕಥೆಯಿದೆ‌. ಮಾವು ಹಣ್ಣುಗಳ ರಾಜನಾಗಿದ್ದು ಹೇಗೆ? ಎಂಬುದನ್ನು ಕಥೆಯ ಮೂಲಕ ತಾವು ತಿಳಿದುಕೊಳ್ಳಬಹುದು. ರಾಮ ಸೀತಾ ಮತ್ತು ಲಕ್ಷಣನು ವನವಾಸದಲ್ಲಿದ್ದಾಗ  ಲಂಕೇಶ್ವರ ರಾವಣನು, ಸೀತೆ ಮಾತೆಯನ್ನು ಅಪಹರಿಸಿ ಅಶೋಕವನದಲ್ಲಿ ಇರಿಸಿರುತ್ತಾರೆ. ಸೀತೆಯ ಜಾಡು ಅರಸುತ್ತಾ ಬಂದ ರಾಮನಿಗೆ ನೆರವು ನೀಡಲು ಜೊತೆಯಾದವರು ರಾಮಭಕ್ತ ಹನುಮ ಮತ್ತು ಅವನ ವಾನರ ಸೇನೆ‌.ಮಾತೆ ಸೀತಾದೇವಿಯನ್ನು ಹುಡುಕುತ್ತಾ ಸಾಗರವನ್ನೇ ದಾಟಿ ಹನುಮಂತನು ಲಂಕಾ ನಗರವನ್ನು ಸೇರುತ್ತಾನೆ. ನಂತರ ಅಶೋಕವನದಲ್ಲಿದ್ದ ಸೀತಾದೇವಿಯನ್ನು ಭೇಟಿಯಾದ ಈ ರಾಮ ಭಕ್ತನಿಗೆ ತಾಳಲಾರದ ಹಸಿವಾಗುತ್ತದೆ. ತನ್ನ ಹಸಿವನ್ನು ನೀಗಿಸಿಕೊಳ್ಳಲು ಹನುಮ ಬಯಸಿದಾಗ, ಅಶೋಕವನದಲ್ಲಿ ರಸಭರಿತ ಹಣ್ಣುಗಳನ್ನು ನೋಡುತ್ತಾನೆ.

Advertisement

Advertisement

ನಂತರ ಆ ಹಣ್ಣುಗಳು ಹನುಮನ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಮಾವಿನ ಹಣ್ಣನ್ನು ತಿಂದ ಹನುಮಂತನಿಗೆ ಅದರ ಸ್ವಾದ ಅಧ್ಬುತ ಎನಿಸಿತು. ನಂತರ ಹನುಮನೂ ಮನಸ್ಸಿನಲ್ಲಿಯೇ ಇಂತಹ ಅದ್ಭುತವಾದ ರುಚಿಯ ಹಣ್ಣನ್ನು ಶ್ರೀರಾಮಚಂದ್ರನಿಗೆ ಉಡುಗೊರೆಯಾಗಿ ನೀಡಬೇಕು ಎಂದು ಕೊಳ್ಳುತ್ತಾನೆ.ನಂತರ ಸೀತಾ ದೇವಿಯನ್ನು ಭೇಟಿ ಮಾಡಿ ಹಿಂತಿರುಗುವಾಗ, ಆ ಮಧುರ ಫಲವನ್ನು ಲಂಕೆಯಿಂದ ಹನುಮಂತನು ತನ್ನೊಂದಿಗೆ ತರುತ್ತಾರೆ. ಬಳಿಕ ಶ್ರೀರಾಮಚಂದ್ರನಿಗೆ ಸೀತದೇವಿಯ ಬಗ್ಗೆ ಎಲ್ಲಾ ವಿಚಾರವನ್ನು ತಿಳಿಸಿ, ಭಕ್ತಿಯಿಂದ ತಾನು ತಂದಿದ್ದ ಹಣ್ಣನ್ನು ಶ್ರೀ ರಾಮಚಂದ್ರನಿಗೆ ಸಮರ್ಪಿಸುತ್ತಾನೆ.

Advertisement

 

Advertisement


ರಾಮ ಲಕ್ಷ್ಮಣರು ಹನುಮನು ನೀಡಿದ ಹಣ್ಣುಗಳನ್ನು ತಿಂದು ಅದರ ರುಚಿಗೆ ಮನಸೋತರು. ಹಾಗೆ ಅವರು ತಿಂದು ಎಸೆದ ಮಾವಿನ ವಾಟೆಗಳು ಕಾಡಿನಲ್ಲಿ ಮರಗಳಾಗಿ ಬೆಳೆದವು‌. ಹೀಗೆ ಮಾವಿನ ಮರಗಳು ದಿನಕಳೆದಂತೆ ಎಲ್ಲೆಲ್ಲೂ ಹರಡುತ್ತಾ ಹೋಯಿತು. ಇದೇ ಕಾರಣದಿಂದಾಗಿಯೇ ಮಾವಿ‌ನ ಹಣ್ಣನ್ನು ಶ್ರೀ ರಾಮಚಂದ್ರನ ಪ್ರಸಾದ ಎಂದೂ ಕರೆಯಲಾಗುತ್ತದೆ. ಮಾವಿನ ಮರ ಫಲ ನೀಡುವಾಗ ಅದನ್ನು ಹನುಮನ ಸ್ಥಾನ ವೆಂದು ಹಲವು ಕಡೆಗಳಲ್ಲಿ ಹೇಳುತ್ತಾರೆ. ಶ್ರೀರಾಮಚಂದ್ರನ ಪೂಜೆಗೆ ಮಾವಿನ ಹಣ್ಣನ್ನು ಇಡುವುದು ಕೂಡಾ ಕೆಲವೊಂದು ಸಂಪ್ರದಾಯವಾಗಿದೆ. ಹನುಮನ ನಿವಾಸವಾದ ಮಾವಿನ ಮರಗಳಲ್ಲಿ ದುಷ್ಟ ಶಕ್ತಿಗಳ ಬಾಧೆಯಿರುವುದಿಲ್ಲ ಎಂದು ಕೂಡಾ ಹೇಳಲಾಗುತ್ತದೆ.
All Rights Reserved Namma Kannada.

Advertisement
Share this on...