ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದ ಈಕೆ ಇಂದು ನಮ್ಮನೆಯ ಯುವರಾಣಿ !

in ಮನರಂಜನೆ/ಸಿನಿಮಾ 597 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ರಾಜ್ ಗುರು ಮನೆತನದ ಕಿರಿಸೊಸೆ, ಮುದ್ದು ಕೋಳಿ ಮರಿಯಾಗಿ ಅಭಿನಯಿಸುತ್ತರುವ ಮೀರಾ ಕಂಡರೆ ಇಷ್ಟಪಡದವರಾರು ಹೇಳಿ? ಮನೋಜ್ಞ ಅಭಿನಯದ ಮೂಲಕ ಮೀರಾ ಆಗಿ ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ಮುದ್ದು ಮುಖದ ಚೆಲುವೆಯ ಹೆಸರು ಅಂಕಿತಾ ಅಮರ್. ನಮ್ಮನೆ ಯುವರಾಣಿಯ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಈ ಕಣ್ಮಣಿ ಬಣ್ಣದ ಲೋಕಕ್ಕೆ ಬಂದುದು ಬಾಲನಟಿಯಾಗಿ! ಫಣಿ ರಾಮಚಂದ್ರ ಅವರ ನಿರ್ದೇಶನದ ಜಗಳಗಂಟಿಯರು ಧಾರಾವಾಹಿಯಲ್ಲಿ ಬಾಲಕಲಾವಿದೆಯಾಗಿ ಎಂಟ್ರಿ ಪಡೆದ ಈಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತುಂಟ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಜೊತೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನಾರಣ್ಯ ಧಾರಾವಾಹಿಯಲ್ಲಿ ಅಂಕಿತಾ ಅಭಿನಯಿಸಿದ್ದರು. ವಿಶೇಷ ಎಂದರೆ ಅದರಲ್ಲಿ ಅಂಕಿತಾ ತಂದೆ ಅವರು ನಟಿಸಿದ್ದು, ತೆರೆಯ ಮೇಲೂ ಅವರು ಅಪ್ಪ ಮಗಳಾಗಿ ಕಾಣಿಸಿಕೊಂಡಿದ್ದರು.

Advertisement

Advertisement

ತದ ನಂತದ ಒದಿನ ಸಲುವಾಗಿ ಅಭಿನಯಕ್ಕೆ ಬಾಯ್ ಹೇಳಿದ ಅಂಕಿತಾ ಇದೀಗ ಸ್ನಾತಕೋತ್ತರ ಪದವೀಧರೆ. ಮೆಡಿಕಲ್ ಬಯೋ ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈಕೆ ಎರಡು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ‌. ಶಾಲಾ ಕಾಲೇಜು ಸಮಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅಂಕಿತಾ ಅವರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದೂ ಇದೆ. ಅಶೋಕ, ಆಮ್ರಪಾಲಿ, ಕಿಸಾಗೌತಮಿ, ಕುನಾಲಿ, ಬೆಲ್ಲದ ದೋಣಿ ಮುಂತಾದ ನಾಟಕಗಳಲ್ಲಿ ನಟಿಸಿರುವ ಅಂಕಿತಾ ಗೆ ನಟನೆ ಎಂಬುದು ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾದರು. ಯಾಕೆಂದರೆ ಆಕೆಯೇ ತಂದೆ ಬಿ‌.ವಿ.ರಾಜರಾಮ್ ಅವರ ಕಲಾಗಂಗೋತ್ರಿ ತಂಡದ ಸದಸ್ಯರಾಗಿದ್ದು ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿರುತ್ತಾರೆ‌.

Advertisement

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ದೊಡ್ಡಪ್ಪನ ಮಗಳು ಸುಗುಣ ಆಗಿ ನಟಿಸಿರುವ ಅಂಕಿತಾಗೆ ಅದು ಪೋಷಕ ಪಾತ್ರವಾಗಿದ್ದರೂ ಹೆಸರು ತಂದುಕೊಟ್ಟಿತ್ತು. ತದ ನಂತರ ಕುಲವಧು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಅಂಕಿತಾ ಅಮರ್ ಸದ್ಯ ನಮ್ಮನೆ ಯುವರಾಣಿಯಾಗಿ ಬ್ಯುಸಿಯಾಗಿದ್ದಾರೆ.

Advertisement

ನಟನೆಯ ಹೊರತಾಗಿ ಅಂಕಿತಾ ಭರತನಾಟ್ಯ ಕಲಾವಿದೆಯೂ ಹೌದು, ಜೊತೆಗೆ ಸಂಗೀತಾ ಪ್ರಿಯರು ಕೂಡಾ. ಸಂಗೀತಾ ಮತ್ತು ಭರತನಾಟ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಅಂಕಿತಾ ಭರತನಾಟ್ಯದಲ್ಲಿ ಜ್ಯೂನಿಯರ್ ಗ್ರೇಡ್ ಪಾಸ್ ಆಗಿದ್ದಾರೆ. ಜೊತೆಗೆ ಒಂದಷದಟು ವೇದಿಕೆಗಳಲ್ಲಿ ತಮ್ಮ ಗಾನ ಸುಧೆ ಹರಿಸಿರುವ ಅಂಕಿತಾ ಅಮರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಹಾಡು ಹರಟೆ ಕಾರ್ಯಕ್ರಮದಲ್ಲಿಯೂ ಸುಮಧುರವಾಗಿ ಹಾಡಿ ಹಾಡಿದ್ದರು

ಉತ್ತಮ ಅವಕಾಶ, ಸೊಗಸಾದ ಕತೆ ದೊರೆತರೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ತಯಾರಿದ್ದೇನೆ ಎಂದು ಮುದ್ದು ಮುದ್ದಾಗಿ ಹೇಳುವ ಅಂಕಿತಾ ಅವರ ಬಣ್ಣದ ಪಯಣ ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.
– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...