ನಮ್ಮನೆ ಯುವರಾಣಿ ಸೌಂದರ್ಯ ಗೋಲ್ಡ್  ಮೆಡಲ್ ಪಡೆದಿರುವುದು ಯಾವುದರಲ್ಲಿ ಗೊತ್ತಾ ?

in ಮನರಂಜನೆ/ಸಿನಿಮಾ 507 views

ಕನ್ನಡ ಚಲನಚಿತ್ರ ಮತ್ತು ದೂರದರ್ಶನ ಉದ್ಯಮಗಳಲ್ಲಿ ಭಾರತೀಯ ನಟಿ ಅಂಕಿತಾ ಅಮರ್. ಮೊದಲ ಬಾರಿಗೆ ಪಣಿರಾಮಚಂದ್ರ ಅವರ ” ಜಗಳಗಂತಿಯರು” ಸಿನಿಮಾದಲ್ಲಿ ಅಂಕಿತಾ ಬಾಲನಟಿಯಾಗಿ ಅಭಿನಯಿಸಿದ್ದರು. ನಂತರ ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯ ಮೂಲಕ ಸಣ್ಣ ಪಾತ್ರದೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ಇವರು ಆಗಸ್ಟ್ 9, 1997 ರಲ್ಲಿ ಮೈಸೂರಿನಲ್ಲಿ ಇವರ ಜನನವಾಯಿತು. ಈಗ ಪ್ರಸ್ತುತ ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ “ನಮ್ಮನೆ ಯುವರಾಣಿ” ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ನಟನೆಯ ಹೊರತಾಗಿ , ಅವರು ಉತ್ತಮ ಗಾಯಕಿ ಮತ್ತು ಹಲವಾರು ಕನ್ನಡ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಮೀರಾ ರವರು ಸಂಗೀತ ಶಿಕ್ಷಕಿ. ಕಲರ್ಸ್ ಕನ್ನಡದ ಹಲವು ಕಾರ್ಯಕ್ರಮಗಳಲ್ಲಿ ಇವರು ಹಾಡಿದ್ದಾರೆ. ಅಂಕಿತಾ ಅಪ್ಪನಿಗೆ ಇವರು ಹಾಡುವುದೆಂದರೆ ತುಂಬಾ ಇಷ್ಟವಂತೆ.

Advertisement

Advertisement

“ನಮ್ಮನೆ ಯುವರಾಣಿ” ಧಾರಾವಾಹಿ ಟಿ ಆರ್ ಪಿಯಲ್ಲೂ ಕೂಡ ಟಾಪ್ ಟೆನ್ ಒಳಗಿದೆ. ಈ ಧಾರಾವಾಹಿಯಲ್ಲಿ ಇವರ ಮೀರಾ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಪಟಪಟನೆ ಮಾತನಾಡುತ್ತಾ, ಮನೆಯವರ ಬಗ್ಗೆ ಕಾಳಜಿ ತೋರುವ ಮೀರಾ ಕಂಡರೆ ಪ್ರೇಕ್ಷಕರಿಗೆ ತುಂಬಾ ಇಷ್ಟ. ಅಷ್ಟೇ ಅಲ್ಲದೆ ಮೀರಾ ಗಾಯನ ಕೂಡ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಆಕಸ್ಮಿಕವಾಗಿ ‘ ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅಂಕಿತಾ ರವರಿಗೆ  ಒದಗಿ ಬಂತು. ಕಥೆ ಇಷ್ಟವಾಗಿದ್ದರಿಂದ ಇವರು ಧಾರಾವಾಹಿ ಮಾಡಲು ಒಪ್ಪಿಕೊಂಡರಂತೆ.

Advertisement

ರಂಗಭೂಮಿಯಲ್ಲಿ ಪಳಗಿದ ಅಂಕಿತಾ ಗೆ ಕ್ಯಾಮೆರಾ ಮುಂದೆ ನಟಿಸೋದು ಕಷ್ಟವಾಗಿರಲಿಲ್ಲ. ಆದರೆ ಧಾರಾವಾಹಿಯಲ್ಲಿ ಮೀರಾ ಮಾತನಾಡುವಷ್ಟು ನಿಜ ಜೀವನದಲ್ಲಿ ಅಂಕಿತಾ ಮಾತನಾಡೋದು ಇಲ್ಲ. ಮೆಡಿಕಲ್ ಬಯೋ ಕೆಮಿಸ್ಟ್ರಿ ಯಲ್ಲಿ ಗೋಲ್ಡ್  ಮೆಡಲ್ ಪಡೆದಿದ್ದಾರೆ.ಜೊತೆಗೆ ಪಿಹೆಚ್ ಡಿ ಮಾಡುವ ಗುರಿಯನ್ನು ಹೊಂದಿದ್ದಾರೆ. ಆದರೆ ಧಾರಾವಾಹಿ, ಸಂಗೀತಗಳ, ಕಾರಣದಿಂದ ಅದನ್ನು ಅಲ್ಲಿಗೆ ನಿಲ್ಲಿಸಿದ್ದಾರೆ. ಇವರಿಗೆ ಭರತ ನಾಟ್ಯದಲ್ಲಿಯೂ ಆಸಕ್ತಿ ಇದೆ. ಕಲರ್ಸ್ ವಾಹಿನಿಯ ಹಲವು ಕಾರ್ಯಕ್ರಮಗಳಲ್ಲಿ ಅಂಕಿತಾ ಈಗಾಗಲೇ ಹಲವು ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ.

Advertisement

ಅನನ್ಯ ಎಂಬ ಸಹೋದರಿ ಇದ್ದು ಅವರು ಕೂಡಾ ಟಿಕ್ ಟಾಕ್ ಮೂಲಕ ಜನರಿಗೆ ಪರಿಚಯ ಆಗಿದ್ದಾರೆ. ಅಂಕಿತಾ ಅವರು ಬಹುಮುಖ ಪ್ರತಿಭೆಯುಳ್ಳ ಕಲಾವಿದೆಯಾಗಿದ್ದು ಮುಂದಿನ ದಿನಗಳಲ್ಲಿ ಕಿರಿತರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡುವ ಎಲ್ಲ ರೀತಿಯ ಪ್ರತಿಭೆಗಳು ಇವರಲ್ಲಿ ಇವೆ. ಅವರು ಮೈಸೂರಿನ ಜೆ .ಎಸ್. ಎಸ್ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಜೀವರಾಸಾಯನಿಕ ತೆಯಲ್ಲಿ ಎಸ್.ಎಸ್ಸಿ ಪೂರ್ಣಗೊಳಿಸಿದ್ದಾರೆ ಮತ್ತು ಅದನ್ನು ಅನುಸರಿಸಿ, ಪಿ.ಹೆಚ್. ಡಿ ಯನ್ನು ಮಾಡಲು ಆಸಕ್ತಿಯನ್ನು ವಹಿಸಿದ್ದಾರೆ. ಇತ್ತೀಚೆಗೆ ಅಂಕಿತಾ”ಶ್ರೀನಿವಾಸ ಕಲ್ಯಾಣ”ನಾಟಕದಲ್ಲಿ ಪದ್ಮಾವತಿ ಪಾತ್ರ ನಿರ್ವಹಿಸಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಳಿಸಿದ್ದರು. ಇವರು ಇನ್ನೂ ಚಿಕ್ಕ ವಯಸ್ಸಿನಲ್ಲೇ ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಇವರಿಗೆ ಇನ್ನೂ 23 ರ ಹರೆಯ.

Advertisement
Share this on...