ನಗು ಮುಖದ ಈ ಚೆಲುವೆಯ ಹೊಸತನ

in ಮನರಂಜನೆ/ಸಿನಿಮಾ 270 views

ಅನುಪಮ ಗೌಡ ಎಲ್ಲರಿಗೂ ಗೊತ್ತಿರುವ ಹೆಸರು.ಇವರ ಬಗ್ಗೆ ಕೇಳಿಯೇ ಕೇಳಿರುತ್ತೀರಾ.ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ನಟಿ ಅನುಪಮ ಗೌಡ.ಮೊದಲು ಧಾರಾವಾಹಿಗಳಲ್ಲಿ ನಟಿಸಿದ ನಂತರ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ” ಕರಾಳ ರಾತ್ರಿ ” ಸಿನಿಮಾದ ಮೂಲಕ ಚಂದನ ವನಕ್ಕೆ ಬಂದರು.ಇದೀಗ ಅವರು ಹೊಸ ಸಿನಿಮಾವನ್ನು ಮಾಡಲು ಒಪ್ಪಿಕೊಂಡಿದ್ದಾರೆ.ಇದೊಂದು ಕ್ರೈಂ ಥ್ರಿಲ್ಲರ್ ರೀತಿಯ ಸಿನಿಮಾ ಆಗಿದ್ದು,ಇದರ ಶೀರ್ಷಿಕೆ ಇಂದಲೇ ನೋಡುಗರ ಗಮನ ಸೆಳೆಯುತ್ತದೆ ಎನ್ನುತ್ತಾರೆ ಅನುಪಮ ಗೌಡ.ಕಳೆದ ವರ್ಷ ತೆರೆಕಂಡ ರಾಜ್ ಬಿ ಶೆಟ್ಟಿ,ಕವಿತಾ ಗೌಡ ,ಪ್ರಮೋದ್ ಶೆಟ್ಟಿ ಇನ್ನೂ ಕೆಲವರು ನಟಿಸಿದ್ದ ” ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ” ಸಿನಿಮಾಗೆ ನಿರ್ದೇಶನ ಮಾಡಿದ ಸುಜಯ್ ಶಾಸ್ತ್ರಿ ಇದೀಗ ಅನುಪಮ ಗೌಡ ಅಭಿನಯಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದಾರೆ.ಇದು ಇವರ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು,ಇವರು ಈ ಸಿನಿಮಾದ ಕೆಲಸದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ.

Advertisement

Advertisement

ಈ ಸಿನಿಮಾದ ಶೀರ್ಷಿಕೆ ಈಗಾಗಲೇ ಲಾಂಚ್ ಆಗಿದ್ದು,ಇದರ ಹೆಸರಿನಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ.ಅನುಪಮ ಗೌಡ ಅವರು ನಟಿಸಿರುವ ‘ ಆ ಕರಾಳ ರಾತ್ರಿ ‘ ತರಹದ ಸಸ್ಪೆನ್ಸ್ ಮತ್ತು ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು.ಅನುಪಮ ಅವರಿಗೆ ಮತ್ತೆ ಅದೇ ರೀತಿಯ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಮತ್ತೊಮ್ಮೆ ಒದಗಿ ಬಂದಿದೆ.ಈ ಚಿತ್ರದ ಕಥೆ ಬರೆದಿದ್ದು ಟಿ.ಕೆ ದಯಾನಂದ್.ಈ ಹಿಂದೆ ‘ ಬೆಲ್ ಬಾಟಮ್ ‘ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದರು. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಕಾಂಬಿನೇಷನ್ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿತ್ತು.ಇದೀಗ ಇವರು ಸುಜಯ್ ನಿರ್ದೇಶನದ ಸಿನಿಮಾಗೂ ಕಥೆ ಬರೆದಿದ್ದಾರೆ.

Advertisement

ಹಾಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ. ಸಿನಿಮಾದ ನಾಯಕಿ ಅನುಪಮ ಗೌಡ ಎಂಬುದು ಮಾತ್ರ ಬಹಿರಂಗ ಆಗಿದೆ.ಆದರೆ ಈ ಸಿನಿಮಾದ ಹೀರೋ ಮತ್ತು ಯಾರೆಲ್ಲಾ ಇರುತ್ತಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ. ವಿಶ್ವಜಿತ್ ಛಾಯಾ ಗ್ರಹಣ ಮಾಡಲಿದ್ದು,ಆಶಿಕ್ ಕುಸುಗೊಳ್ಳಿ ಸಂಕಲನ ಮಾಡಲಿದ್ದಾರೆ. ರಾಹುಲ್ ಶಿವಕುಮಾರ್ ಮತ್ತು ರೊನಾಡ ಬಕ್ಕೇಶ್ ಸಂಗೀತ ನೀಡಲಿದ್ದಾರೆ.’

Advertisement

ಲಂಕೇಶ್ ಪತ್ರಿಕೆ ‘ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಅನುಪಮ, ನಗಾರಿ ಅನ್ನೋ ಸಿನಿಮಾದಲ್ಲಿ ನಟಿಸಿದ್ದರೂ ಆ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಆದರೆ ಅವರು ನಟಿಸಿದ ದಯಾಳ್ ನಿರ್ದೇಶನದ ಆ ಕರಾಳ ರಾತ್ರಿ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತ್ತು.ಅದರ ಜೊತೆಗೆ ಪ್ರಶಸ್ತಿಯನ್ನೂ ಕೂಡಾ ತಂದು ಕೊಟ್ಟಿತ್ತು.
ಅನುಪಮ ಗೌಡ ಅವರು ಕಲರ್ಸ್ ಕನ್ನಡಲ್ಲಿ ಪ್ರಸಾರ ಆಗುತ್ತಿದ್ದ ‘ ಅಕ್ಕ ” ಧಾರವಾಹಿಯಲ್ಲಿ ನಾಯಕಿಯಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ ಇನ್ನೂ ಹಲವು ಧಾರವಾಹಿಯಲ್ಲಿ ನಟಿಸಿದ್ದಾರೆ.

ಪ್ರಮುಖವಾಗಿ ಹೆಚ್ಚು ಜನಪ್ರಿಯವಾದ ಮತ್ತು ಜನರನ್ನು ನಕ್ಕು ನಗಿಸಿದ ಕಲರ್ಸ್ ಸುಪರ್ನಲ್ಲಿ ಪ್ರಸಾರ ಆಗುತ್ತಿದ್ದ ” ಮಜಾ ಭಾರತ ” ದಲ್ಲಿ ನಿರೂಪಕಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತು ನಂಬರ್ ಒನ್ ರಿಯಾಲಿಟಿ ಶೋ ಆದ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ನಗು ಮುಖದ ಈ ಚೆಲುವೆ ಹೊಸತನದ ಇನ್ನೊಂದು ಚಿತ್ರದಲ್ಲಿ ಈಗ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಕೋ’ರೋನಾ ಕಾರಣದಿಂದ ಈ ಪ್ರಾಜೆಕ್ಟ್ ಅಲ್ಲಿಯೇ ನಿಂತಿದೆ ಇನ್ನೇನೂ ಮುಂದಿನ ದಿನಗಳಲ್ಲಿ ಶೂಟಿಂಗ್ ಪ್ರಾರಂಭ ಆಗಲಿದೆ.

Advertisement
Share this on...