ನಟ ಸಾರ್ವಭೌಮ ನಾಯಕಿ ಅನುಪಮಾ ಸದ್ಯ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ, ಏಕೆ?

in ಮನರಂಜನೆ/ಸಿನಿಮಾ 79 views

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ನಟ ಸಾರ್ವಭೌಮ’ ಚಿತ್ರದಲ್ಲಿ ಸಹಜವಾಗಿ ನಟಿಸಿ ಕನ್ನಡಿಗರ ಮನಗೆದ್ದ ಕೇರಳ ಸುಂದರಿ ಅನುಪಮಾ ಪರಮೇಶ್ವರನ್ ಆ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಕಳೆದ ವರ್ಷ ಬೆಲ್ಲಂಕೊಂಡ ಶ್ರೀನಿವಾಸ್ ಅವರ ತೆಲುಗಿನ ‘ರಾಕ್ಷಸುಡು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅನುಪಮಾ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರಲಿಲ್ಲ. ಆದರೆ ಅಭಿನಯದ ವಿಚಾರಕ್ಕೆ ಬಂದರೆ ಅವರು ಉತ್ತಮವಾಗಿ ಪರ್ ಫಾರ್ಮ್ ಮಾಡಿದ್ದರು.
‘ರಾಕ್ಷಸುಡು’ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂತು. ಆ ನಂತರ ಅನುಪಮಾ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದುವರೆಗೂ ಯಾವುದೇ ತೆಲುಗು ಚಿತ್ರಗಳಲ್ಲಿಯೂ ನಟಿಸಿಲ್ಲ. ಯಾವುದೇ ತೆಲುಗು ಚಿತ್ರಗಳಿಗೆ ಸಹಿ ಹಾಕಿಲ್ಲ ಅಥವಾ ಘೋಷಿಸಿಲ್ಲ. ಈ ಮಧ್ಯೆ ಅನುಪಮಾ ದುಲ್ಕರ್ ಪ್ರೊಡಕ್ಷನ್ ವೆಂಚರ್ಸ್ ಗಾಗಿ ಕ್ಯಾಮೆರಾದ ಹಿಂದೆ ಕೆಲಸ ಮಾಡುತ್ತಿದ್ದಾರೆ.

Advertisement

Advertisement

ಪ್ರೇಕ್ಷಕರನ್ನು ಹೆಚ್ಚು ರಂಜಿಸುವ ಇಂತಹ ಬಬ್ಲಿ ಹುಡುಗಿ ಕೈಯ್ಯಲ್ಲಿ ಪ್ರಸ್ತುತ ಯಾವುದೇ ಚಲನಚಿತ್ರಗಳು ಇಲ್ಲದಿರುವುದು ಈಗ ಎಲ್ಲರಿಗೂ ಆಶ್ಚರ್ಯಕರವಾಗಿದೆ. ಅನುಪಮಾ ಅವರು ಕಳೆದ ವರ್ಷ ಕೇವಲ ಎರಡು ಚಿತ್ರಗಳನ್ನು ಮಾಡಿದ್ದಾರೆ. ಒಂದು ‘ರಾಕ್ಷಸುಡು’ ಮತ್ತು ಇನ್ನೊಂದು ‘ನಟ ಸರ್ವಭೌಮ’. ಈ ವರ್ಷ ‘ಮಣಿಯರೈಲ್ ಅಶೋಕನ್’ ಎಂಬ ಮಲಯಾಳಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದಲ್ಲದೇ, ಇದಕ್ಕೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ, ‘ನಿನ್ನು ಕೋರಿಯ’ ತಮಿಳು ರಿಮೇಕ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರು ಪಲ್ಲವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Advertisement

ಸದ್ಯ ಅನುಪಮಾ ಕೈಯ್ಯಲ್ಲಿ ಯಾವುದೇ ಚಿತ್ರಗಳು ಇರದಿದ್ದರೂ, ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಲು ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತಿದೆ. ಏನಿದ್ದರೂ ಮುಂದೆ ಕಾದುನೋಡಬೇಕಿದೆಯಷ್ಟೇ. ಅನುಪಮಾ ಪರಮೇಶ್ವರನ್ ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ.ಕೇರಳ ಮೂಲದ ಈ ನಟಿ ನಿವಿನ ಪೌಲಿ ಅಭಿನಯದ `ಪ್ರೇಮಂ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೇರಿ’ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ಈ ಚಿತ್ರದ ನಂತರ ಮೂರು ತೆಲಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. 1996 ರಲ್ಲಿ ಜನಿಸಿದ ಅನುಪಮಾ ಓದಿದ್ದು ಕೊಟ್ಟಾಯಂನ `ಸಿಎಮ್ಎಸ್’ ಕಾಲೇಜಿನಲ್ಲಿ. ಸಂಹವನ ಆಂಗ್ಲಭಾಷೆಯಲ್ಲಿ ಪದವಿ ಪಡೆದ ಇವರು ಕೇವಲ 19 ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದರಿಂದ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

Advertisement
Share this on...