ಅದು ನಕಲಿ ಅನುಪಮಾ, ನಟಸಾರ್ವಭೌಮ ಬೆಡಗಿ ಗರಂ…!

in Kannada News 49 views

ಸಿನಿಮಾ ತಾರೆಗಳ ಫೋಟೋಗಳನ್ನ ಎಡಿಟ್ ಮಾಡಿ ವಿಕೃತಗೊಳಿಸುವುದನ್ನ ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಹಲವು ನಟಿಯರು ಮುಜುಗರಕ್ಕೆ ಈಡಾಗಿರುವುದು ಉಂಟು. ಇದೀಗ ನಟಸಾರ್ವಭೌಮ ಬೆಡಗಿ ಸಹ ಇಂತಹದ್ದೇ ಕಷ್ಟಕ್ಕೆ ಸಿಲುಕಿಕೊಂಡಿದ್ದು ಬೇರೆ ಯುವತಿಯ ದೇಹಕ್ಕೆ ಅನುಪಮಾ ಪರಮೇಶ್ವರನ್ ಮುಖವನ್ನ ಜೋಡಿಸಲಾಗಿದೆ. ಇದನ್ನ ಕಂಡ ಅವರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ನೈಜ ಫೋಟೋಗಳಿಗಿಂತ ಫೇಕ್, ಎಡಿಟೆಡ್, ಮಾರ್ಫ್ ಮಾಡಿದ ಫೋಟೋಗಳು ಕಾಣುವುದೇ ಹೆಚ್ಚು. ಅದರಲ್ಲೂ ನಟ-ನಟಿಯರ ಫೋಟೋಗಳನ್ನ ಕಿಡಿಗೇಡಿಗಳು ಮನಬಂದಂತೆ ಎಡಿಟ್ ಮಾಡಿ ಅಪ್ಲೋಡ್ ಮಾಡಿರುತ್ತಾರೆ. ಇದರಿಂದ ಹಲವು ನಟಿಯರಿಗೆ ಮುಜುಗರ ಸಹ ಉಂಟಾಗಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನ ಸಹ ವ್ಯಕ್ತಪಡಿಸುತ್ತಿರುತ್ತಾರೆ.

Advertisement

 

Advertisement

Advertisement

 

Advertisement

ಎಷ್ಟು ಬಾರಿ ಈ ಕುರಿತು ಮನವಿ, ಜಾಗೃತಿಯನ್ನ ಮೂಡಿಸಿದರೂ ಆಗಾಗ ಈ ರೀತಿಯ ಫೋಟೋಗಳು ಕಾಣಿಸುತ್ತಲೇ ಇರುತ್ತವೇ. ಅದೇ ರೀತಿ ಇದೀಗ ಅನುಪಮ ಪರಮೇಶ್ವರನ್ ರವರ ಫೋಟೋವನ್ನ ಸಹ ಎಡಿಟ್ ಮಾಡಲಾಗಿದ್ದು ಯಾವುದೋ ಯುವತಿಯ ದೇಹಕ್ಕೆ ಅನುಪಮಾ ಮುಖವನ್ನ ಅಂಟಿಸಲಾಗಿದೆ. ಇದರಿಂದಾಗಿ ನಟಿ ತೀವ್ರ ಬೇಸರಕ್ಕೆ ಒಳಗಾಗಿದ್ದು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಫೇಸ್ಬುಕ್ ಖಾತೆ ಸಹ ಹ್ಯಾಕ್ ಆಗಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನ ಹೊರಹಾಕಿದ್ದಾರೆ.

 

Some idiot has hacked my account…. just alerting ಅಂತ ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಅವರ ಫೇಕ್ ಫೋಟೋ ಹಾಕಿ ಸಮಯ ಸಿಕ್ಕಿದೆ ಅಂತ ಇಂತಹ ನಾನ್ಸೆನ್ಸ್ ಕೆಲಸ ಮಾಡಿದ್ದೀರಾ? ನಿಮ್ಮ ಮನೆಯಲ್ಲಿ ತಾಯಿ, ಅಕ್ಕ-ತಂಗಿಯರು ಇಲ್ವಾ? ಯಾವುದಾದರೂ ಒಳ್ಳೆ ಕೆಲಸಗಳಿಗೆ ನಿಮ್ಮ ತಲೆಯನ್ನ ಉಪಯೋಗಿಸಿ ಇಂತಹ ಮೂರ್ಖತನದ ಕೆಲಸಗಳಿಗೆ ಅಲ್ಲ ಅಂತ ಕಿಡಿಕಾರಿದ್ದಾರೆ. ಅಲ್ಲದೆ ತಮ್ಮ ಫೇಕ್ ಫೋಟೋ ಹಾಕಿ ಈ ಕುರಿತು ಸ್ಪಷ್ಟ ಪಡಿಸಿದ್ದೇನೆ ಅಂತ ಹೇಳಿದ್ದಾರೆ.

 

ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ಮಾರ್ಫ್ ಫೋಟೋಗಳನ್ನ ಹಂಚಿಕೊಳ್ಳಬೇಡಿ. ಇದರಿಂದ ತುಂಬಾ ನೋವಾಗುತ್ತೆ ಅವಳು ಒಬ್ಬ ಹುಡುಗಿ ಮಾರ್ಫ್ ಮಾಡುವವರಿಗೆ ಈ ರೀತಿ ಮಾಡುವುದಕ್ಕೆ ಹೇಗಾದರೂ ಮನಸ್ಸು ಬರುತ್ತೆ ಕಾಮನ್ ಸೆನ್ಸ್ ಇಲ್ಲವೇ? ಇದು ನಕಲಿ ಚಿತ್ರ ಇನ್ನೊಂದು ಬಾರಿ ಈ ರೀತಿ ಮಾಡಬೇಡಿ ಅಂತ ಕಿಡಿಕಾರಿದ್ದಾರೆ. ಈ ಬಗ್ಗೆ ಅನುಪಮಾ ಪರಮೇಶ್ವರನ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಅಲ್ಲದೆ ಅನುಪಮಾ ಫೇಕ್ ಫೋಟೋವನ್ನ ಹಂಚಿಕೊಳ್ಳಬೇಡಿ ಎಂದು ಅವರ ಅಭಿಮಾನಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಟಸಾರ್ವಭೌಮ ನಂತರ ಅನುಪಮಾ ಪರಮೇಶ್ವರನ್ ತೆಲುಗಿನ ರಾಕ್ಷಸುಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಮಿಳಿನ ತಲ್ಲಿ ಪೋಗಟೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...