ಬಣ್ಣದ ಜಗತ್ತಿನಲ್ಲಿ ಮೋಡಿ ಮಾಡುತ್ತಿರುವ ಈ ಅಕ್ಕ ತಂಗಿಯರು ಯಾರು?

in ಮನರಂಜನೆ/ಸಿನಿಮಾ 101 views

ಬಣ್ಣದ ಲೋಕವೇ ಹಾಗೇ! ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಅದೇ ಕಾರಣಕ್ಕಾಗಿಯೇ ಬಣ್ಣದ ಲೋಕಕ್ಕೆ ಅದೆಷ್ಟೋ ಜನ ಬರುತ್ತಾರೆ. ಒಂದೇ ಕುಟುಂಬದವರು ಕೂಡಾ ನಟನಾ ರಂಗಕ್ಕೆ ಬಂದುದು ಇದೆ. ಡಾ. ರಾಜ್ ಕುಮಾರ್ ಅವರು ಕುಟುಂಬವೇ ಒಂದು ಉದಾಹರಣೆ. ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹೀಗೆ ಒಂದೇ ಕುಟುಂಬದ ಸದಸ್ಯರೆಲ್ಲಾ ನಟನಾ ಲೋಕದಲ್ಲಿ ಮಿಂಚುತ್ತಿರುವುದು ಮಾಮೂಲಿ. ಇದಕ್ಕೆ ಹೊರತಾಗಿಲ್ಲ ಈ ಅಕ್ಕ ತಂಗಿ. ಅಕ್ಕ ಈ ಮೊದಲೇ ಬಣ್ಣದ ಜಗತ್ತಿಗರ ಬಂದು ನಟನಾ ಕಂಪನ್ನು ಪಸರಿಸಿದ್ದಾರೆ, ತಂಗಿ ಆಗಷ್ಟೇ ಅಂಬೆಗಾಲಿಡುತ್ತಿದ್ದಾಳೆ. ಅಂದ ಹಾಗೇ ಆ ಅಕ್ಕ ತಂಗಿಯ ಹೆಸರು ಅನುಪಮಾ ಗೌಡ ಮತ್ತು ತೇಜಸ್ವಿನಿ ಆನಂದ್ ಕುಮಾರ್. ಹಳ್ಳಿ ದುನಿಯಾ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಅನುಪಮಾ ಗೌಡ ಚಿ.ಸೌ.ಸಾವಿತ್ರಿ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ಬಣ್ಣದ ಜಗತ್ತಿಗೆ ಪರಿಚಿತರಾದರು. ತದ ನಂತರ ಅಣ್ಣ ತಂಗಿ ಧಾರಾವಾಹಿಯಲ್ಲಿಯೂ ನಟಿಸಿದ ಅನುಪಮಾ ಗೌಡ ಮೊದಲ ಬಾರಿಗೆ ನಾಯಕಿಯಾಗಿದ್ದು ಅಕ್ಕ ಧಾರಾವಾಹಿಯಲ್ಲಿ! ಅದು ದ್ವಿಪಾತ್ರದಲ್ಲಿ!

Advertisement

Advertisement

ಏಕ ಕಾಲಕ್ಕೆ ಎರಡು ತದ್ವಿರುದ್ಧ ಪಾತ್ರಗಳಿಗೆ ಜೀವ ತುಂಬಿದ್ದ ಅನುಪಮಾ ಗೌಡ ದೇವಿಕಾ ಮತ್ತು ಭೂಮಿಕಾ ಆಗಿ ಕಾಣಿಸಿಕೊಂಡರು. ಮಾತ್ರವಲ್ಲ ಅದು ಅವರಿಗೆ ತುಂಬಾನೇ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಮುಂದೆ ಕನ್ನಡದ ಜನಪ್ರಿಯ ರಿಯಾಲಟಿ ಶೋ ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಅಲ್ಲೂ ಕೂಡಾ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

Advertisement

ಕಿರುತೆರೆಗೂ ಬರುವ ಮೊದಲೇ ನಗಾರಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅನುಪಮಾ ಗೌಡ ಮುಂದೆ ಕಿರುತೆರೆಯಲ್ಲಿ ಮಿಂಚಿದ್ದೇ ಹೆಚ್ಚು. ಮುಂದೆ ಬಿಗ್ ಬಾಸ್ ನಿಂದ ಹೊರಬಂದ ನಂತರ ಬೆಳ್ಳಿತೆರೆಯತ್ತ ಮುಖ ಮಾಡಿದ್ದ ಅನುಪಮಾ ಆ ಕರಾಳ ರಾತ್ರಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತದ ನಂತರ ತ್ರಯಬಂಕಂ ಹಾಗೂ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾಗಳಲ್ಲಿ ಅನುಪಮಾ ನಟಿಸುತ್ತಿದ್ದಾರೆ.

Advertisement

ಅನುಪಮಾ ಪ್ರತಿಭೆ ಕೇವಲ ನಟನೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಅವರು ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಕಲರ್ಸ್ ಸೂಪರ್ ವಾಹಿನಿಯ ಮಜಾಭಾರತ ಕಾರ್ಯಕ್ರಮದ ನಿರೂಪಕಿಯಾಗಿದ್ದ ಆಕೆ ಮುಂದೆ ಕನ್ನಡ ಕೋಗಿಲೆಯ ನಿರೂಪಕಿಯಾಗಿಯೂ ಗಮನ ಸೆಳೆದಿದ್ದರು. ಇದರ ಜೊತೆಗೆ ಹಿಂದಿಯ ಕಿರುಚಿತ್ರ ದಿ ಫಾಲನ್ ನಲ್ಲಿಯೂ ಅವರು ನಟಿಸಿದ್ದರು.

ಇದೀಗ ಅನುಪಮಾ ತಂಗಿ ತೇಜಸ್ವಿನಿ ಸರದಿ! ಅಕ್ಕನಂತೆಯೇ ನಟನಾ ಲೋಕವನ್ನು ಮೆಚ್ಚಿಕೊಂಡಿರುವ ತೇಜಸ್ವಿನಿ ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ನ ತಂಗಿಯಾಗಿ ಅಭಿನಯಿಸಿದ್ದ ತೇಜಸ್ವಿನಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾಗಿದ್ದರು. ತದ ನಂತರ ಇದೀಗ ನಾಗಿಣಿ 2 ಧಾರಾವಾಹಿಯಲ್ಲಿ ನಾಯಕ ತ್ರಿವಿಕ್ರಮ್ ತಂಗಿಯಾಗಿ ತೇಜಸ್ವಿನಿ ಅಭಿನಯಿಸುತ್ತಿದ್ದಾರೆ.

ಈಗಷ್ಟೇ ನಟನಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಾ ಹೆಜ್ಜೆ ಹಾಕುತ್ತಿರುವ ತೇಜಸ್ವಿನಿ ಅನುಪಮಾ ಗೌಡ ಅವರ ತಂಗಿ ಎಂಬುದು ಹಲವರಿಗೆ ತಿಳಿದಿಲ್ಲ! ಒಟ್ಟಿನಲ್ಲಿ ಮನೋಜ್ಞ ನಟನೆಯ ಮೂಲಕ ಈ ಅಕ್ಕ ತಂಗಿಯರು ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಿಸುತ್ತಿರುವುದಂತೂ ದಿಟ.
– ಅಹಲ್ಯಾ

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...