ಬಿಗ್ ಬಾಸ್ ಖ್ಯಾತಿಯ ಅನುಪಮಾ ಅವರು ಆ ತಪ್ಪು ಮಾಡಿದ್ದರಾ!

in News 90 views

ಕಲರ್ಸ್ ವಾಹಿನಿಯು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ವಿಶೇಷ ಹಾಗೂ ವಿಶಿಷ್ಟ ಕಥೆಗಳುಳ್ಳ ಧಾರಾವಾಹಿಗಳನ್ನು ನೀಡುತ್ತ ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆ ಧಾರಾವಾಹಿಯಲ್ಲಿ ನಟಿಸುವ ಕಲಾವಿದರು ಕೂಡ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದು, ಸಿನಿಮಾ ಹಾಗೂ ಬೇರೆ ಬೇರೆ ರಿಯಾಲಿಟಿ ಕಾರ್ಯಕ್ರಮಗಳಿಗೆ ಹೋಗಿ ತಮ್ಮ ಬದುಕನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇನ್ನು ಜನ ಮೆಚ್ಚಿದ ಧಾರಾವಾಹಿ ಅಕ್ಕ ಎಂಬ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಖ್ಯಾತರಾದವರು ನಟಿ ಅನುಪಮಾ. ನಂತರ ದಕ್ಷಿಣಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡಿಗರಿಗೆ ಬಹಳ ಹತ್ತಿರವಾದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಹಲವು ನೋವು ನಲಿವು, ಕಷ್ಟ ಸುಖ ಹಾಗೂ ಲವ್ ಬ್ರೇಕಪ್ ಎಲ್ಲಾ ವಿಚಾರಗಳನ್ನು ಹೇಳಿಕೊಂಡು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಹತ್ತಿರವಾದರು. ಇದೀಗ ಅವರ ಮತ್ತೊಂದು ಗುಟ್ಟನ್ನು‌ ಬಯಲು ಮಾಡಿದ್ದು, ಎಲ್ಲರೂ ಬೆರಗಾಗುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಅಂದೇನೆಂದರೆ ಸುಮಾರು ಒಂದುವರೆ ವರ್ಷದ ಹಿಂದೆ ನಟಿ ಅನುಪಮಾ ಗೌಡ ಅವರು ಸಾಯಲು ಯತ್ನಿಸಿದ್ದರಂತೆ.

Advertisement

ಒಂದುವರೆ ವರ್ಷದ ಹಿಂದೆ ಕೆಲವು ಕಾರಣಗಳಿಂದಾಗಿ ಅನುಪಮಾ ಅವರಿಗೆ ಬಹಳ ಬೇಸರವಾಗಿದ್ದು, ಬದುಕಲೇ ಬಾರದು ಎಂದು ನಿರ್ಧರಿಸಿ ಟ್ಯಾಬ್ಲೆಟ್ಸ್ ತೆಗೆದುಕೊಂಡಿದ್ದೆ ಎಂಬ ಜೀವನದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. ಆ ಸಮಯದಲ್ಲಿ ಅವರಿಗೆ ತನಗೆ ಯಾರೂ ಇಲ್ಲ, ಯಾವುದೂ ಇಲ್ಲ ಅಂತ ಅನಿಸಲು ಶುರು ಆಗಿತ್ತಂತೆ. ಅಲ್ಲದೇ ಆ ಸಮಯದಲ್ಲಿ ಅವರು ತುಂಬಾ ಅಸಹಾಯಕಳಾಗಿದ್ದರು. ಆದ ಕಾರಣ ಅಂತಹ ಒಂದು ನಿರ್ಧಾರವನ್ನ ತೆಗೆದುಕೊಂಡಿದ್ದರಂತೆ.ಇನ್ನು ಅನುಪಮಾ ಅವರು ಪ್ರತಿ ಬಾರಿ ಎಲ್ಲೇ ಹೋದರೂ ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ಅಲಿಯಾಸ್ ನೇಹ ಅವರನ್ನು ಯಾವಾಗಲು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಯಾಕಂದರೆ, ಅಂದು ಅನುಪಮಾ ಆ ರೀತಿಯಾದ ಒಂದು ಪ್ರಯತ್ನ ಮಾಡಿದಾಗ ಆಕೆಯ ಜೊತೆ ಇಡೀ ದಿನ ಇದ್ದದ್ದು, ಮತ್ತು ಆಕೆಯನ್ನು ನೇಹ ನೋಡಿಕೊಂಡಿದ್ದರಂತೆ.

Advertisement

ಅನುಪಮಾ ಅವರಿಗೆ ಎರಡನೇ ಲೈಫ್ ಸಿಗಲು ನೇಹ ಅವರೇ ಪ್ರಮುಖ ಕಾರಣ. ಹೀಗಾಗಿ ನೇಹ ಕಂಡ್ರೆ ನನಗೆ ತುಂಬಾ ಗೌರವ ಎಂದು ಅನುಪಮಾ ಗೌಡ ಹೇಳಿಕೊಂಡಿದ್ದಾರೆ. ಆದರೆ ಇದೀಗ ಅವರು ಆ ತರಹ ಇಲ್ಲವಂತೆ. ಪ್ರೇಕ್ಷಕರಿಗೂ ಕೂಡ ಸಲಹೆ ನೀಡಿದ್ದು, ನಿಮಗೇನಾದರು ಈ ತರಹದ ಯೋಚನೆ ಬಂದರೆ, ದಯವಿಟ್ಟು ಅದನ್ನು ಮನಸ್ಸಿನಿಂದ ತೆಗೆದು ಹಾಕಿ. ನಿಮ್ಮನ್ನು ನೀವೆ ಪ್ರೀತಿಸಲು ಶುರು ಮಾಡಿ. ಮೊದಲು ನೀವು ನಿಮ್ಮನ್ನ ಪ್ರೀತಿಸಿ. ಇದೇ ನನ್ನ ಸೀಕ್ರೆಟ್ ಎಂದು ಅನುಪಮಾ ತಿಳಿಸಿದ್ದಾರೆ.

Advertisement
Advertisement

Advertisement
Share this on...