ನಿಮ್ಮ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ ಎಂದು ಅನು ಪ್ರಭಾಕರ್ ಯಾರಿಗೆ ಹೇಳಿದ್ದು ಗೊತ್ತಾ?

in ಮನರಂಜನೆ/ಸಿನಿಮಾ 1,121 views

ಸ್ಯಾಂಡಲ್ ವುಡ್ ನ ಈ ಚೆಂದದ ನಟಿಯೆಂದರೆ ಇಷ್ಟ ಪಡದವರಿಲ್ಲ. ಮನೋಜ್ಞ ಅಭಿನಯದ ಮೂಲಕ ಸಿನಿ ಪ್ರಿಯರ ಮನ ಸೆಳೆದಿರುವ ಅನು ಪ್ರಭಾಕರ್ ಬಾಲ ಕಲಾವಿದೆಯಾಗಿ ನಟನಾ ರಂಗಕ್ಕೆ ಕಾಲಿಟ್ಟ ಬೆಡಗಿ. ಚಪಲ ಚನ್ನಿಗರಾಯ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಅನು ಪ್ರಭಾಕರ್ ಮುಂದೆ ಶಾಂತಿ ಕ್ರಾಂತಿಯಲ್ಲಿಯೂ ನಟಿಸಿದ್ದರು. ಜೊತೆಗೆ ಇಂಗ್ಲೀಷ್ ಸಿನಿಮಾ ದಿ ಮಿಸ್ಟರಿಸ್ ಆಫ್ ದಿ ಡಾರ್ಕ್ ಜಂಗಲ್ ನಲ್ಲಿ ನಟಿಸಿದ ಅನು ಪ್ರಭಾಕರ್ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಹೃದಯಾ ಹೃದಯಾ ಸಿನಿಮಾದಲ್ಲಿ. ತದ ನಂತರ ಸ್ನೇಹಲೋಕ, ಹೂ ಅಂತೀಯಾ ಊಹೂಂ ಅಂತೀಯಾ, ಸೂರಪ್ಪ, ಶ್ರೀರಸ್ತು ಶುಭಮಸ್ತು, ಯಾರಿಗೆ ಸಾಲುತ್ತೆ ಸಂಬಳ, ಅಂಜಲಿ ಗೀತಾಂಜಲಿ, ಶಾಪ, ಕನಸುಗಾರ, ಮಿ.ಹರಿಶ್ಚಂದ್ರ, ವಿಶಾಲಕ್ಷಮ್ಮನ ಗಂಡ, ಶಿವಪ್ಪ ನಾಯಕ, ಜಮೀನ್ದಾರು, ಅಣ್ಣಯ್ಯ ತಮ್ಮಯ್ಯ, ತವರಿಗೆ ಬಾ ತಂಗಿ, ಪ್ರೀತಿ ಪ್ರೇಮ ಪ್ರಣಯ, ಓಳು ಸಾರ್ ಬರೀ ಓಳು, ಹೃದಯವಂತ, ಬಿಸಿಬಿಸಿ, ಕನಕಾಂಬರಿ, ವರ್ಷ, ಮುಸ್ಸಂಜೆ ಮಾತು, ಆಟಗಾರ, ಸಕ್ಕರೆ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅನು ಪ್ರಭಾಕರ್ ಬರೋಬ್ಬರಿ ಎರಡು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಚೆಲುವೆ.

Advertisement

Advertisement

ಹಿರಿತೆರೆಯ ಜೊತೆಗೆ ಕಿರುತೆರಗೂ ಕಾಲಿಟ್ಟಿರುವ ಅನು ಪ್ರಭಾಕರ್ ನಿತೂಪಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಬಾಳೇ ಬಂಗಾರ, ಹೋಂ ಮಿನಿಸ್ಟರ್, ಶ್ರೀಮತಿ ಕರ್ನಾಟಕ ಕಾರ್ಯಕ್ರಮದ ನಿರೂಪಕಿಯಾಗಿ ಮನೆ ಮಾತಾಗಿರುವ ಅನು ಪ್ರಭಾಕರ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತದ ನಂತರ ಮದುವೆ, ಮಗು ಎಂದು ನಟನೆಗೆ ಪುಲ್ ಸ್ಟಾಪ್ ಹಾಕಿದ್ದ ಅನು ಪ್ರಭಾಕರ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

Advertisement

ಅನುಕ್ತ ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಅನು ಪ್ರಭಾಕರ್ ಅಕ್ಕ ಸಿನಿಮಾದ ಜೊತೆಗೆ ಸಾರಾವಜ್ರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದಲ್ಲಿ ಅನು ನಟಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹೃದಯ ಹೃದಯ ಸಿನಿಮಾದಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಭಡ್ತಿ ಪಡೆದ ಅನು ಮುಂದೆ ಅದೆಷ್ಟೋ ನಟರ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸುವ ಅವಕಾಶ ಅನು ಪ್ರಭಾಕರ್ ಗೆ ಸಿಕ್ಕಿದ್ದು ಆ ಸಮಯದಲ್ಲಿ ಅನು ಹಳೆಯ ಸುಮಧುರ ನೆನಪುಗಳನ್ನು ಶೇರ್ ಮಾಡಿದ್ದಾರೆ.

Advertisement

“ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ ತಾಯಿ ನನ್ನನ್ನು ಕನ್ನಡಿಗರಿಗೆ ನಿಮ್ಮ ಅಣ್ಣ ಶಿವಣ್ಣ ಅವರ ಜೋಡಿಯಾಗಿ ಪರಿಚಯಿಸಿದರು. ಇಪ್ಪತ್ತೊಂದು ವರುಷಗಳ ನಂತರ ಇದೀಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಉತ್ಸುಕಳಾಗಿದ್ದೇನೆ ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ‌. ಮತ್ತು ಆ ಮೂಲಕ ಆಕೆ ಸುದ್ದಿಯಲ್ಲಿದ್ದಾರೆ.

ಉಪಕಾರ ಮಾಡುವವರನ್ನು ಮರೆತುಬಿಡುವ ಈ ಕಾಲದಲ್ಲಿ ಅನು ತನ್ನನ್ನು ಸಿನಿರಂಗದಲ್ಲಿ ಪರಿಚಯಿಸಿದವರನ್ನು ನೆನೆಯುವ ಮೂಲಕ ಇಂದಿನವರಿಗೆ ಮಾದರಿಯಾಗಿದ್ದಾರೆ. ಸಿನಿಮಾ ಹಿಟ್ ಆದ ತಕ್ಷಣ ಅವಕಾಶ ಕೊಟ್ಟವರನ್ನು ಮರೆಯುವ ನಟಿಮಣಿಯರ ನಡುವೆ ಅನು ವಿಭಿನ್ನವಾಗಿ ನಿಲ್ಲುವುದಂತೂ ದಿಟವೆನ್ನಿ!
– ಅಹಲ್ಯಾ

Advertisement
Share this on...