Kannada News ಪತಿ ಮುತ್ತಪ್ಪ ರೈ ಹೋದ ಮೇಲೆ ಅವರ ಆಸ್ತಿಗಾಗಿ ಪತ್ನಿ ಮಾಡಿರುವ ಕೆಲಸ ನೋಡಿ !

in ಕನ್ನಡ ಮಾಹಿತಿ 287 views

ಒಂದು ಕಾಲದಲ್ಲಿ ಎನ್. ಮುತ್ತಪ್ಪ ರೈ ಹೆಸರು ಕೇಳಿದರೇ ನಡುಕ ಬರುವಂತಹ ಸನ್ನಿವೇಶ ಇತ್ತು. ಭೂಗತ ಲೋಕದಲ್ಲಿ ಬಹುಕಾಲ ಡಾನ್‌ ಆಗಿ ಮೆರೆದಿದ್ದ ರೈ, ಜೀವನದ ಕೊನೆಯ ಘಟ್ಟದಲ್ಲಿ ಆ ಎಲ್ಲ ಚಟುವಟಿಕೆಗಳನ್ನು ಕೈಬಿಟ್ಟು, ತಮ್ಮ ವಿರುದ್ಧದ ಕಾನೂನು ಪ್ರಕರಣಗಳನ್ನು ಜಯಿಸಿದ ಬಳಿಕ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಉದ್ಯಮಿಯಾಗಿ ಬದಲಾಗಿದ್ದರು. ಪುತ್ತೂರಿನ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಗಳ ಮಗನಾಗಿ ಮುತ್ತಪ್ಪ ರೈ ಜನಿಸಿದ್ದರು. ಇವರ ಪತ್ನಿ ರೇಖಾ ರೈ 2013ರಲ್ಲಿ ಮೃತಪಟ್ಟಿದ್ದರು. ಮುತ್ತಪ್ಪ ರೈಗೆ ರಾಖಿ ಮತ್ತು ರಿಕ್ಕಿ ರೈ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಪುತ್ರ ರಾಖಿ ರೈ ಕೆನಡಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಿರಿಯ ಪುತ್ರ ರಿಕ್ಕಿ ರೈ ತಂದೆಯ ಜತೆಗಿದ್ದಾರೆ.ಬಿ. ಕಾಂ ಪದವೀಧರರಾಗಿದ್ದ ಮುತ್ತಪ್ಪ ರೈ ಆರಂಭದಲ್ಲಿ ವಿಜಯ ಬ್ಯಾಂಕಿನ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.  ಅನಂತರ 1970 – 80 ರ ದಶಕದಲ್ಲಿ ಭೂಗತ ಲೋಕದಲ್ಲಿ ಸಕ್ರಿಯವಾಗಿದ್ದರು. ಅಂದಿನ ಕುಖ್ಯಾತ ಡಾನ್‌ ಜಯರಾಜ್ ಹತ್ಯೆ ಪ್ರಕರಣದಲ್ಲಿ ಮುತ್ತಪ್ಪ ರೈ ಮತ್ತು ಸಹಚರರು ಭಾಗಿಯಾಗಿದ್ದರು.

Advertisement

Advertisement

ಅನಂತರ ತನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬುದನ್ನು ಅರಿತು ಭಾರತ ಬಿಟ್ಟು ದುಬೈಗೆ ಸ್ಥಳಾಂತರಗೊಂಡಿದ್ದರು. ಬಳಿಕ ಅಲ್ಲಿಂದಲೇ ಭಾರತದಲ್ಲಿನ ಭೂಗತ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ರೈ ವಿರುದ್ಧ ರಿಯಲ್ ಎಸ್ಟೇಟ್‌ ಮಾಲೀಕ ಸುಬ್ಬರಾಜು ಹತ್ಯೆ ಪ್ರಕರಣದಲ್ಲಿ ರಾಜ್ಯ ಪೊಲೀಸರು ವಾರಂಟ್ ಹೊರಡಿಸಿದ್ದರು.ಮುತ್ತಪ್ಪ ರೈ ವಿರುದ್ಧ ಒಟ್ಟು 8 ಪ್ರಕರಣಗಳಿದ್ದವು. ಕೊನೆಗೆ ಮುತ್ತಪ್ಪ ರೈಯನ್ನು ದುಬೈ ಪೊಲೀಸರು 2002ರಲ್ಲಿ ಬಂಧಿಸಿ ಭಾರತಕ್ಕೆ ಗಡಿಪಾರು  ಮಾಡಿದ್ದರು. ಅಂದು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಎಚ್ . ಟಿ ಸಾಂಗ್ಲಿಯಾನ ಅವರು ಮುತ್ತಪ್ಪ ರೈಯನ್ನು ಬಂಧಿಸಿ ಕರ್ನಾಟಕಕ್ಕೆ ಕರೆತಂದಿದ್ದರು. ಮುತ್ತಪ್ಪ ರೈ ಮತ್ತು ರವಿ ಪೂಜಾರಿ ಆಗ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸಹಚರರಾಗಿದ್ದರು.

Advertisement

Advertisement

ಅನಂತರ ಕಾನೂನು, ಕೋರ್ಟ್‌ ಪ್ರಕ್ರಿಯೆಗಳು ನಡೆದು ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ರೈ ಎಲ್ಲಾ ಪ್ರಕರಣಗಳಲ್ಲಿ ದೋಷಮುಕ್ತಿ ಪಡೆದಿದ್ದರು. ಅನಂತರ ಜಯ ಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.  ಹೀಗೆ ಭೂಗತ ಲೋಕದಲ್ಲಿ ಡಾನ್ ಆಗಿ ಮೆರದಿದ್ದ ಅವರು ಎರಡು ವರ್ಷಗಳಿಂದ  ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಆರೋಗ್ಯ ಸ್ಥಿತಿ ತೀವ್ರ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ 30ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆಯುತ್ತಾರೆ.

ಇನ್ನು ಮುತ್ತಪ್ಪ ರೈ ಅವರು ತಾವು ಇಹಲೋಕ ತ್ಯಜಿಸಿದ ನಂತರ ತಮ್ಮ ಆಸ್ತಿಯನ್ನು, ಇಬ್ಬರು ಪತ್ನಿಯರ ಮಕ್ಕಳು ಮತ್ತು ಆಸ್ತಿಯ ಒಂದು ಭಾಗವನ್ನು ಅವರ ಜೊತೆ ಬಹಳ ವರ್ಷಗಳಿಂದ  ಸೇವೆ ಮಾಡುತ್ತಿದ್ದ ಕೆಲಸಗಾರರಿಗೂ ದೊರೆಯುವುದಾಗಿ ವಿಲ್ ಮಾಡಿದ್ದರು‌.  ಆದರೆ ಇದೀಗ ಮುತ್ತಪ್ಪ ರೈ ಅವರ ಆಸ್ತಿ ಹಂಚಿಕೆಯ ವಿಚಾರದಲ್ಲೊಂದು ಸಮಸ್ಯೆ ಉಂಟಾಗಿದೆ‌. ಮುತ್ತಪ್ಪ  ಅವರ ಎರಡನೇ ಧರ್ಮಪತ್ನಿ ಅನುರಾಧ  ಅವರು ತನಗೆ ಆಸ್ತಿಯಲ್ಲಿನ ಮೂರನೇ ಒಂದು ಭಾಗ ಹಂಚಿಕೆ ಮಾಡಿಕೊಡಬೇಕು ಎಂದು  ಒತ್ತಾಯಿಸಿ ಸಿವಿಲ್ ನ್ಯಾಯಾಲಕ್ಕೆ ಮೊರೆ ಹೋಗಿ ಅರ್ಜಿ ಸಲ್ಲಿಸಿದ್ದಾರೆ. ಮುತ್ತಪ್ಪ ರೈ ಅವರ ಮಕ್ಕಳಾದ ರಾಕಿ ರೈ, ರಿಕ್ಕಿ ರೈ ಸೇರಿದಂತೆ ಒಟ್ಟು ಹದಿನೇಳು ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಸಿವಿಲ್ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 4 ಕ್ಕೆ ಮುಂದೂಡಲಾಗಿದೆ.
All Rights Reserved Namma Kannada.

Advertisement
Share this on...