ಸಂಬಳ ಊಟ ಕೊಡದೆ ದುಡಿಸಿಕೊಳ್ಳುವವರ ವಿರುದ್ಧ ಅನುಷ್ಕಾ ಬೇಸರ…!

in News 55 views

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ವಾರೆಂಟೈನ್ ದಿನಗಳನ್ನ ಸಖತ್ ಎಂಜಾಯ್ ಮಾಡುತ್ತಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಖುಷಿ ವಿಚಾರಗಳ ಜೊತೆಗೆ ಇದೀಗ ಒಂದು ಅಸಮಾಧಾನದ ಸಂಗತಿಯನ್ನು ಸಹ ಅನುಷ್ಕ ಹಂಚಿಕೊಂಡಿದ್ದಾರೆ. ಬೇಸರ ವ್ಯಕ್ತಪಡಿಸಿದ್ದಾರೆ. ಕುಟುಂಬದೊಂದಿಗೆ ಸಮಯ ಕಳೆಯುವುದರ ಜೊತೆಗೆ ಅಭಿಮಾನಿಗಳನ್ನ ಮಾತನಾಡಿಸಲು ಅನುಷ್ಕಶರ್ಮಾ ಲೈವ್ ವಿಡಿಯೋ ಮಾಡಿದ್ದರು. ಈ ವೇಳೆ ತಮಗಾದ ಬೇಸರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಫೇಸ್ಬುಕ್ನಲ್ಲಿ ಈ ಕುರಿತಂತೆ ಪೋಸ್ಟ್ ಸಹ ಹಾಕಿದ್ದಾರೆ. ಅರೆ ಅವರಿಗೆ ಯಾರ ಮೇಲೆ ಬೇಸರವಾಯಿತು ಅಂತೀರಾ..?

Advertisement

 

Advertisement

 

Advertisement
View this post on Instagram

 

Advertisement

I thought he must be missing being on the field. Along with the love he gets from millions of fans, he must be especially missing this one particular type of fan too. So I gave him the experience ???

A post shared by AnushkaSharma1588 (@anushkasharma) on

 

ಲಾಕ್ ಡೌನ್ ಸಮಯದಲ್ಲಿ ಆಹಾರವಿಲ್ಲದೆ ಬಳಲುತ್ತಿರುವವರ ಕಷ್ಟ ತಿಳಿದು ಅನುಷ್ಕ ತೀವ್ರ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಕೋರೊನಾ ಸೋಂಕಿನಿಂದಾಗಿ ದಿನನಿತ್ಯ ವೈದ್ಯರು ಹಾಗೂ ರೋಗಿಗಳು ಕಷ್ಟಪಡುತ್ತಿದ್ದಾರೆ. ಇದನ್ನ ಕಂಡ ಎಂಥಹವರಿಗೂ ಬೇಸರವಾಗುತ್ತದೆ. ಕೋರೊನಾ ಸೋಂಕಿತರನ್ನ ತುಂಬಾ ಕೀಳಾಗಿ ನೋಡಲಾಗುತ್ತಿದೆ. ವೈದ್ಯರ ಸ್ಥಿತಿ ಕೂಡ ಕಷ್ಟಕರವಾಗಿದೆ. ಈ ಸುದ್ದಿ ಕೇಳಿ ತುಂಬಾ ನೋವಾಗುತ್ತೆ. ಇಂತಹ ಸಂದರ್ಭದಲ್ಲಿ ನಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಅಲ್ಲದೆ ಇದು ಎಲ್ಲರೂ ಒಗ್ಗಟ್ಟಾಗಿ ಇರುವ ಸಮಯ ಎಂದಿದ್ದಾರೆ.

 

 

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅನುಷ್ಕಾ ಶರ್ಮಾ ನಿಯಮಿತವಾಗಿ ಲೈವ್ ಗೆ ಬರುತ್ತಿದ್ದು. ಅಭಿಮಾನಿಗಳ ಜೊತೆ ಮಾತನಾಡುತ್ತಾ ಕೋರೊನಾ ವಿರುದ್ಧ ಹೋರಾಡುವ ಕುರಿತು ಸಲಹೆ ನೀಡಿದ್ದಾರೆ. ಅಲ್ಲದೆ ಎಚ್ಚರಿಕೆಯಿಂದ ಇರುವಂತೆ ಧೈರ್ಯ ತುಂಬುತ್ತಿದ್ದಾರೆ. ಕೆಲವೆಡೆ ಕಾರ್ಮಿಕರಿಗೆ ದಿನಗೂಲಿ ನೀಡುದೆ ಊಟ ಹಾಕದೆ ಹಿಂಸೆ ನೀಡುತ್ತಿರುವುದರ ಕುರಿತು ಅನುಷ್ಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರೋನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ವಹಿಸುತ್ತಿದೆ.

 

 

ಇದಕ್ಕೆ ಹಲವರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸಿನಿತಾರೆಯರು ಹಾಗೂ ಧನಿಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಇನ್ನೂ ಕೆಲವರು ವೈದ್ಯ ವೃತ್ತಿ, ನರ್ಸ್ ವೃತ್ತಿ ಮಾಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಇತ್ತೀಚೆಗೆ ಪಿ.ಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

– ಸುಷ್ಮಿತಾ

Advertisement
Share this on...