‘ಸ್ವೀಟಿ’ ಅನುಷ್ಕಾ ಶೆಟ್ಟಿ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಿದೆ ಗೊತ್ತಾ?

in ಮನರಂಜನೆ 88 views

ಸಿಜ್ಲಿಂಗ್ ಬ್ಯೂಟಿ ಅನುಷ್ಕಾ ಶೆಟ್ಟಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ನಾಯಕಿ ಕೇಂದ್ರಿತ ಚಿತ್ರ ‘ಅರುಂಧತಿ’ ಅದ್ಭುತ ಯಶಸ್ಸು ಅನುಷ್ಕಾ ಅವರನ್ನು ಹೆಚ್ಚು ಬೇಡಿಕೆಯ ನಟಿಯನ್ನಾಗಿ ಮಾಡಿತು. ‘ಅರುಂಧತಿ’ ಚಿತ್ರದಲ್ಲಿ ಜೆಜಮ್ಮ, ‘ವೇದಂ’ ನಲ್ಲಿ ಸರೋಜಾ, ರಾಣಿ ರುದ್ರಮಾದೇವಿ ಅವರ ಪಾತ್ರಗಳು ಅನುಷ್ಕಾ ಅವರನ್ನು ಟಾಲಿವುಡ್ ‘ನ ನಂಬರ್ ಒನ್ ನಟಿಯನ್ನಾಗಿ ಮಾಡಿದವು. ಇದೀಗ ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಹೌದು, ಅನುಷ್ಕಾ ಇನ್ಸ್ಟಾಗ್ರಾಮ್’ನಲ್ಲಿ ಮೂರು ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ. ಟ್ವಿಟರ್ ಐಡಿ ಹೊಂದಿಲ್ಲದ ಅನುಷ್ಕಾ, ಹೆಚ್ಚಾಗಿ ಇನ್ಸ್ಟಾಗ್ರಾಮ್ ಪುಟವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ತಮ್ಮಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಅನುಷ್ಕಾ ಅವರು ತಮ್ಮ ಮುಂಬರುವ ಚಿತ್ರ ‘ನಿಶಬ್ದಂ’ ಫೋಟೋವನ್ನು ತಮ್ಮ ಅಧಿಕೃತ ಪುಟದಲ್ಲಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. “ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿರುವ ಅನುಷ್ಕಾ, ನೀವೆಲ್ಲರೂ ಮನೆಯಲ್ಲಿ ಸುರಕ್ಷಿತವಾಗಿ ಮತ್ತು ಜವಾಬ್ದಾರಿಯಿಂದ ಇರುತ್ತೀರಿ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

Advertisement

 

Advertisement

Advertisement

ಅಂದಹಾಗೆ ‘ಅರುಂಧತಿ’, ‘ಬಾಹುಬಲಿ’ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, ಸ್ಟಾರ್ ನಟಿ ಪಟ್ಟ ಗಿಟ್ಟಿಸಿಕೊಂಡಿರುವ ಅನುಷ್ಕಾ, ಇಷ್ಟು ವರ್ಷಗಳ ನಂತರ ಚಿತ್ರಗಳಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿರುವುದಕ್ಕಿಂತ ಹೆಚ್ಚಾಗಿ ಉತ್ತಮ ವಿಷಯವಿರುವ ಚಿತ್ರಗಳ ಕಡೆ ಗಮನ ಕೊಡುತ್ತಿದ್ದು, ಅಂತಹ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಸ್ಟಾರ್ ನಿರ್ದೇಶಕರ ಒಂದು ಕುತೂಹಲಕಾರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಚಿತ್ರೋದ್ಯಮದ ಮೂಲಗಳು ತಿಳಿಸಿವೆ.ಸ್ಟೈಲಿಶ್ ಚಿತ್ರಗಳಿಗೆ ಹೆಸರುವಾಸಿಯಾದ ಸ್ಟಾರ್ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ ಚಿತ್ರಕ್ಕೆ ಅನುಷ್ಕಾ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅನುಷ್ಕಾ ಇದೇ ನಿರ್ದೇಶಕರೊಂದಿಗೆ ಈ ಹಿಂದೆ ಅಲ್ಟಿಮೇಟ್ ಸ್ಟಾರ್ ನಟ ಅಜಿತ್ ಅಭಿನಯದ ‘ಯೆನ್ನೈ ಅರಿಂದಾಲ್’, ‘ಯೆಂತಾ ವಾಡು ಗಣಿ’ ಚಿತ್ರದಲ್ಲಿ ಕೆಲಸ ಮಾಡಿದ್ದು, ಈ ಚಿತ್ರಗಳು ಅಜಿತ್ ಮತ್ತು ಅನುಷ್ಕಾ ಅವರಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿದ್ದವು.

Advertisement

 

ಅನುಷ್ಕಾ ತಮ್ಮ ವಿನಮ್ರ ವರ್ತನೆಗೆ ಹೆಸರುವಾಸಿಯಾಗಿದ್ದು, ಚಿತ್ರೋದ್ಯಮದ ಯಾವ ವ್ಯಕ್ತಿಯು ಅನುಷ್ಕಾ ಬಗ್ಗೆ ದೂರು ನೀಡಿರುವುದನ್ನು ಯಾರೂ ನೋಡಿಯೇ ಇಲ್ಲ. ಬಹಳಷ್ಟು ಜನರು ಇಂದಿಗೂ ಅನುಷ್ಕಾರನ್ನು ‘ಸ್ವೀಟಿ’ ಎಂದೇ ಸಂಭೋಧಿಸುತ್ತಾರೆ.

Advertisement
Share this on...