ಮಿಂಚಿನ ವೇಗದಲ್ಲಿ ಹೆಚ್ಚಾಗುತ್ತಿದೆ ಅನುಷ್ಕಾ ಫಾಲೋವರ್ಸ್ ಸಂಖ್ಯೆ, ಈಗ ಎಷ್ಟಿದೆ ಗೊತ್ತಾ ?

in ಮನರಂಜನೆ 192 views

ಸಸ್ಪೆನ್ಸ್ ಥ್ರಿಲ್ಲರ್, ರೊಮ್ಯಾಂಟಿಕ್, ಕಾಮಿಡಿ, ಪೌರಾಣಿಕ ಹೀಗೆ ಯಾವುದೇ ಚಿತ್ರವಾಗಲೀ ಅದರಲ್ಲಿ ವಿಶಿಷ್ಟವಾಗಿ ಅಭಿನಯಿಸುವ ಮೂಲಕ ತಾನೊಬ್ಬ ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸುತ್ತಾರೆ ಸೌತ್ ಬ್ಯೂಟಿ ಅನುಷ್ಕಾ ಶೆಟ್ಟಿ. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬಲ್ಲ ಕೆಲವೇ ಕೆಲವು ನಟಿಯರಲ್ಲಿ ಅನುಷ್ಕಾ ಕೂಡ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಅನುಷ್ಕಾ ಶೆಟ್ಟಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ಚಿತ್ರದಿಂದ ದೇವಸೇನಾ ಎಂದೇ ಖ್ಯಾತಿಯಾದ 38 ವರ್ಷದ ನಟಿ ಅನುಷ್ಕಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಹೌದು, ಅನುಷ್ಕಾ ಫೇಸ್ಬುಕ್’ನಲ್ಲಿ 20 ಮಿಲಿಯನ್ ಫಾಲೋವರ್ಸ್ ಪಡೆದಿದ್ದು, ಈ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ರಿಯೇಟಿವ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ತಿಳಿಸಿರುವ ಅನುಷ್ಕಾ “ಪ್ರೀತಿ ಮತ್ತು ಬೆಂಬಲ ಕೊಡುತ್ತಿರುವ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡಿರುವುದರ ಜೊತೆಗೆ “ಯಾವಾಗಲೂ ನಗುತ್ತಿರಿ, ಇಂತಿ ನಿಮ್ಮ ಅನುಷ್ಕಾ” ಎಂದು ಕೈ ಬರಹದ ಟಿಪ್ಪಣಿಯನ್ನು ಪೋಸ್ಟ್’ನಲ್ಲಿ ಹಾಕಿದ್ದಾರೆ.

Advertisement

 

Advertisement


ಪ್ರಸ್ತುತ ಅನುಷ್ಕಾ ಹೇಮಂತ್ ಮಧುಕರ್ ಅವರ ನಿಶಬ್ದಂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಮಂದಿರಗಳನ್ನು ಮತ್ತೆ ತೆರೆದ ನಂತರ ಈ ಚಿತ್ರ ಬಿಡುಗಡೆಯಾಗಲಿದೆ.
ಅಂದಹಾಗೆ ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಮೂರು ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ. ಟ್ವಿಟರ್ ಐಡಿ ಹೊಂದಿಲ್ಲದ ಅನುಷ್ಕಾ, ಹೆಚ್ಚಾಗಿ ಇನ್ಸ್ಟಾಗ್ರಾಮ್ ಪುಟವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ತಮ್ಮಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ. ‘ಅರುಂಧತಿ’, ‘ಬಾಹುಬಲಿ’ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, ಸ್ಟಾರ್ ನಟಿ ಪಟ್ಟ ಗಿಟ್ಟಿಸಿಕೊಂಡಿರುವ ಅನುಷ್ಕಾ, ಇಷ್ಟು ವರ್ಷಗಳ ನಂತರ ಚಿತ್ರಗಳಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿರುವುದಕ್ಕಿಂತ ಹೆಚ್ಚಾಗಿ ಉತ್ತಮ ವಿಷಯವಿರುವ ಚಿತ್ರಗಳ ಕಡೆ ಗಮನ ಕೊಡುತ್ತಿದ್ದು, ಅಂತಹ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

Advertisement

ಇತ್ತೀಚೆಗೆ ಅವರು ಸ್ಟಾರ್ ನಿರ್ದೇಶಕರ ಒಂದು ಕುತೂಹಲಕಾರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಚಿತ್ರೋದ್ಯಮದ ಮೂಲಗಳು ತಿಳಿಸಿವೆ. ಅನುಷ್ಕಾ ತಮ್ಮ ವಿನಮ್ರ ವರ್ತನೆಗೆ ಹೆಸರುವಾಸಿಯಾಗಿದ್ದು, ಚಿತ್ರೋದ್ಯಮದ ಯಾವ ವ್ಯಕ್ತಿಯು ಅನುಷ್ಕಾ ಬಗ್ಗೆ ದೂರು ನೀಡಿರುವುದನ್ನು ಯಾರೂ ನೋಡಿಯೇ ಇಲ್ಲ. ಬಹಳಷ್ಟು ಜನರು ಇಂದಿಗೂ ಅನುಷ್ಕಾರನ್ನು ‘ಸ್ವೀಟಿ’ ಎಂದೇ ಸಂಭೋಧಿಸುತ್ತಾರೆ.

Advertisement
Share this on...