ನಿಮಗೆ ಇಷ್ಟವಿಲ್ಲದಿದ್ದರೂ ನೀವು ಆ ಕೆಲಸ ಮಾಡಬೇಕು…ಅನುಷ್ಕಾ ಹೀಗೆ ಹೇಳಿದ್ದೇಕೆ..?

in ಕನ್ನಡ ಮಾಹಿತಿ/ಸಿನಿಮಾ 80 views

ಟಾಲಿವುಡ್​ ಸ್ಟಾರ್​​​ ಹೀರೋಯಿನ್​​​​​​​​​​​​​​​​​​​​​, ಕರ್ನಾಟಕದ ಚೆಲುವೆ ಅನುಷ್ಕಾ ಶೆಟ್ಟಿ ನಟಿ ಮಾತ್ರವಲ್ಲ, ಅವರದ್ದು ಕಷ್ಟಕ್ಕೆ ಮಿಡಿಯುವ ಹೃದಯ. ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ತಮ್ಮ ಕೈಲಾದ ಸಹಾಯ ಮಾಡುವ ಗುಣ ಅವರದ್ದು. ಆ ಸಹಾಯ ಯಾವ ರೂಪದಲ್ಲಾದರೂ ಆಗಿರಬಹುದು. ಇನ್ನು ಮೊನ್ನೆಯಷ್ಟೇ ಬಾಲಿವುಡ್ ಯುವನಟ​​ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಮಾತ್ರವಲ್ಲ ಜನಸಾಮಾನ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅವರ ಬಳಿ ಹಣವಿತ್ತು. ನಟನಾಗಿ ಒಳ್ಳೆ ಹೆಸರಿತ್ತು. ಆದರೂ ಖಿನ್ನತೆ ಕಾರಣದಿಂದ ಅವರು ಆ ಕೆಲಸಕ್ಕೆ ಕೈ ಹಾಕಿದರು. ಎಷ್ಟು ಹಣ, ಹೆಸರು ಇದ್ದರೂ ಅದರಿಂದ ಮಾನಸಿಕ ಸಂತೋಷವನ್ನು ಕೊಳ್ಳಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು.

Advertisement

 

Advertisement

Advertisement

‘ಇನ್ನು ಇದೇ ವಿಚಾರವಾಗಿ ಬೇಸರ ವ್ಯಕ್ತಪಡಿಸಿರುವ ಸ್ವೀಟಿ, ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಸುಧೀರ್ಘ ಪೋಸ್ಟ್ ಹಾಕಿದ್ದಾರೆ. ಅವರ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿಮಗೆ ಏನೇ ನೋವಿದ್ದರೂ ಅದನ್ನು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನೀವೂ ಕೂಡಾ ನಿಮಗೆ ಇಷ್ಟವಿಲ್ಲದಿದ್ದರೂ ಜೊತೆಗಿರುವವರ ಸಂತೋಷಕ್ಕಾಗಿ ಅವರ ಮಾತು ಕೇಳಿ. ಈ ಪ್ರಪಂಚದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ, ನಮಗೆ ಯಾವುದು ಸರಿ ಎನ್ನಿಸುತ್ತದೆಯೋ ಹಾಗೆ ನಡೆದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಕೆಲವರು ಆ ಸಮಸ್ಯೆಗಳಿಗೆ ತಾವೇ ಸೂಕ್ತ ದಾರಿ ಹುಡುಕುತ್ತಾರೆ, ಮತ್ತೆ ಕೆಲವರು ಇತರರ ಸಹಾಯ ಕೇಳುತ್ತಾರೆ, ಮತ್ತೆ ಕೆಲವರು ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’.

Advertisement

‘ನಾವು ಒಗ್ಗಟ್ಟಿನಿಂದ ಸಮಸ್ಯೆಗಳಿಗೆ ದಾರಿ ಹುಡುಕಬೇಕು. ಈಗಿರುವುದಕ್ಕಿಂತ ಉತ್ತಮ ಜೀವನ ಬದುಕಬೇಕು. ಇನ್ನೊಬ್ಬರನ್ನು ಕಂಡರೆ ದಯೆ ಇರಬೇಕು. ತಾಳ್ಮೆಯಿಂದ ನಿಮ್ಮೊಂದಿಗೆ ಇರುವವರ ಮಾತು ಕೇಳಿ. ನಿಮ್ಮ ಒಂದು ಪುಟ್ಟ ನಗು, ಒಂದು ಸಮಾಧಾನದ ಮಾತು, ನಿನ್ನೊಂದಿಗೆ ನಾನಿದ್ದೇನೆ ಎಂದು ಧೈರ್ಯ ಹೇಳುವಂತ ಸ್ಪರ್ಶ ನಿಮ್ಮ ಸ್ನೇಹಿತರ ತೊಂದರೆಯನ್ನು ಮರೆಸಬಹುದು. ಅವರು ನಿಮ್ಮಿಂದಲೇ ಖಿನ್ನತೆಯಿಂದ ಹೊರ ಬರಬಹುದು. . ಆದ್ದರಿಂದ ಇನ್ನೊಬ್ಬರ ಬಗ್ಗೆ ಎಂದಿಗೂ ನಿರ್ಲಕ್ಷ್ಯ ವಹಿಸಬೇಡಿ’ ಎಂದು ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ಸಲಹೆ ನೀಡಿದ್ದಾರೆ

Advertisement
Share this on...