ಅನುಷ್ಕಾ ಶೆಟ್ಟಿ ಈ ಬಾರಿ ಸೆಲ್ಫಿ ತೆಗೆದುಕೊಂಡಿದ್ದು ಯಾರ ಜೊತೆ ಗೊತ್ತಾ?

in ಮನರಂಜನೆ 85 views

ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶೆಟ್ಟಿ ಸಂತೋಷದ ಮನಸ್ಥಿತಿಯಲ್ಲಿದ್ದಾರೆ ಎಂದು ತೋರುತ್ತಿದೆ. ಹೀಗೆ ಹೇಳುತ್ತಿರುವುದು ನಾವಲ್ಲ, ಅನುಷ್ಕಾ ಇನ್ ಸ್ಟಾಗ್ರಾಂ ಫಾಲೋವರ್ಸ್. ಹೌದು, ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿರುವ ಅನುಷ್ಕಾ ಕೆಲವು ದಿನಗಳಿಂದ ಒಳ್ಳೊಳ್ಳೆ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಇದೀಗ ಅನುಷ್ಕಾ ತಮ್ಮ ಪ್ರೀತಿಯ ಸಾಕು ನಾಯಿಯೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದರೆ ಸಾಕುಪ್ರಾಣಿಗಳ ಸಖ್ಯವನ್ನು ಅನುಷ್ಕಾ ಆನಂದಿಸುತ್ತಿದ್ದಾರೆ ಎಂದು ಅನಿಸುತ್ತದೆ.  ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟಿಯರಾದ ಕೀರ್ತಿ ಸುರೇಶ್ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಸಾಕುಪ್ರಾಣಿಗಳ ಮೇಲಿನ ಪ್ರೀತಿಯನ್ನು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

 

Advertisement

Advertisement

ಸಸ್ಪೆನ್ಸ್ ಥ್ರಿಲ್ಲರ್, ರೊಮ್ಯಾಂಟಿಕ್, ಕಾಮಿಡಿ, ಪೌರಾಣಿಕ ಹೀಗೆ ಯಾವುದೇ ಚಿತ್ರವಾಗಲೀ ಅದರಲ್ಲಿ ವಿಶಿಷ್ಟವಾಗಿ ಅಭಿನಯಿಸುವ ಮೂಲಕ ತಾನೊಬ್ಬ ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿರುವ ಅನುಷ್ಕಾ ಶೆಟ್ಟಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ಚಿತ್ರದಿಂದ ದೇವಸೇನಾ ಎಂದೇ ಖ್ಯಾತಿಯಾದ 38 ವರ್ಷದ ನಟಿ ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಮೈಲಿಗಲ್ಲು ಸಾಧಿಸಿದ್ದಾರೆ. ಅನುಷ್ಕಾ ಫೇಸ್ಬುಕ್’ನಲ್ಲಿ 20 ಮಿಲಿಯನ್ ಫಾಲೋವರ್ಸ್ ಪಡೆದಿದ್ದು, ಈ ಸಂತಸವನ್ನು ಅಭಿಮಾನಿಗಳೊಂದಿಗೆ ಈ ಹಿಂದೆ ಹಂಚಿಕೊಂಡಿದ್ದರು. ಕ್ರಿಯೇಟಿವ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ತಿಳಿಸಿದ್ದ ಅನುಷ್ಕಾ “ಪ್ರೀತಿ ಮತ್ತು ಬೆಂಬಲ ಕೊಡುತ್ತಿರುವ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡಿರುವುದರ ಜೊತೆಗೆ “ಯಾವಾಗಲೂ ನಗುತ್ತಿರಿ, ಇಂತಿ ನಿಮ್ಮ ಅನುಷ್ಕಾ” ಎಂದು ಕೈ ಬರಹದ ಟಿಪ್ಪಣಿಯನ್ನು ಪೋಸ್ಟ್’ನಲ್ಲಿ ಹಾಕಿದ್ದರು.

Advertisement

 

View this post on Instagram

 

??

A post shared by AnushkaShetty (@anushkashettyofficial) on


‘ಅರುಂಧತಿ’, ‘ಬಾಹುಬಲಿ’ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, ಸ್ಟಾರ್ ನಟಿ ಪಟ್ಟ ಗಿಟ್ಟಿಸಿಕೊಂಡಿರುವ ಅನುಷ್ಕಾ, ಇಷ್ಟು ವರ್ಷಗಳ ನಂತರ ಚಿತ್ರಗಳಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿರುವುದಕ್ಕಿಂತ ಹೆಚ್ಚಾಗಿ ಉತ್ತಮ ವಿಷಯವಿರುವ ಚಿತ್ರಗಳ ಕಡೆ ಗಮನ ಕೊಡುತ್ತಿದ್ದು, ಅಂತಹ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಸ್ಟಾರ್ ನಿರ್ದೇಶಕರ ಒಂದು ಕುತೂಹಲಕಾರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಚಿತ್ರೋದ್ಯಮದ ಮೂಲಗಳು ತಿಳಿಸಿವೆ. ಪ್ರಸ್ತುತ ಅನುಷ್ಕಾ ಹೇಮಂತ್ ಮಧುಕರ್ ಅವರ ನಿಶಬ್ದಂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಮಂದಿರಗಳನ್ನು ಮತ್ತೆ ತೆರೆದ ನಂತರ ಈ ಚಿತ್ರ ಬಿಡುಗಡೆಯಾಗಲಿದೆ.

Advertisement
Share this on...