ಮೊದ ಮೊದಲು ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅನುಷ್ಕ ಶೆಟ್ಟಿ : ಯಾವುದು ಆ ಧಾರಾವಾಹಿ ?

in ಮನರಂಜನೆ/ಸಿನಿಮಾ 1,100 views

ಯಾವುದೇ ದೇಶ ಅಥವಾ ರಾಜ್ಯಕ್ಕೆ ಹೋಗಿ ಅಲ್ಲಿಯೇ ನೆಲೆಸಿದರೂ ಜನಿಸಿದ ತಾಯ್ನಾಡು ಹಾಗೂ ಮಾತೃ ಭಾಷೆಯನ್ನು ಮರೆಯಬಾರದು ಅಲ್ಲವೇ..?  ಇದು  ನಿಜ ಎಂಬಂತೆ ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು  ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ . ಆಗಾಗ ಕನ್ನಡ ಬಗ್ಗೆಗಿನ ತಮ್ಮ ಒಲವನ್ನು ತೋರಿಸುತ್ತಾ ಕನ್ನಡಿಗರಿಂದ ಅಪಾರ ಜನಮಣ್ಣನೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಆಕೆಯ ವಿವಾಹದ ಬಗ್ಗೆ ಸಾಕಷ್ಟು ಸುದ್ದಿಯಲ್ಲಿದ್ದು ಯಾರನ್ನು ವಿವಾಹವಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ಈ ವಂದಂತಿಗಳಿಗೆ ತೆರೆ ಎಳೆದ ಅವರು ಯಾರನ್ನು ಇನ್ನು ಆಗತ್ತಿಲ್ಲ ಎಂದು ಹೇಳಿದ್ದಾರೆ.ಕಳೆದ ಹದಿನೈದು ವರ್ಷಗಳಿಂದ  ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನುಷ್ಕಾ ಅವರು ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಅಕ್ಷರಶಃ ಆಳಿದವರು. ಅವರ ಹುಟ್ಟಿದ ಹೆಸರು ಸ್ವೀಟಿ ಶೆಟ್ಟಿ ಎಂದು. ಹುಟ್ಟಿದ್ದು ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರಿನಲ್ಲಿ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದ ಅನುಷ್ಕಾ, 2005 ರಲ್ಲಿ ‘ಸೂಪರ್’ ಎಂಬ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಇಲ್ಲಿಯ ತನಕ ತೆಲುಗು ಹಾಗೂ ತಮಿಳಿನಲ್ಲಿ 50 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Advertisement

ಇನ್ನು ಅನುಷ್ಕಾ ಅವರು ಸಿನಿಮಾರಂಗ ಸೇರುವ ಮುನ್ನ ಯೋಗ ಶಿಕ್ಷಕಿಯಾಗಿದ್ದರು. ತೆಲುಗಿನ ಸೂಪರ್ ಎಂಬ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಅವರ ಹೆಸರು ಬದಲಾಯಿಸಿದ್ದು ನಟ ನಾಗಾರ್ಜುನ್ ಅವರು. ಹೌದು  ಅವರು ಮೊದಲ ಸಿನಿಮಾ ‘ಸೂಪರ್‌’ ಗೆ ಆಯ್ಕೆ ಆದಾಗ, ಸಿನಿಮಾದ ನೇಮ್‌ ಕಾರ್ಡ್‌ಗಾಗಿ ಹೆಸರನ್ನು ಬದಲಾಯಿಸುವ ಸಲಹೆ ನೀಡಿದ್ದು, ಮೊದಲಿಗೆ ಅನುಷ್ಕಾ ಅವರ ನಿಜ ಹೆಸರು ಸ್ವೀಟಿ ಎಂಬುದನ್ನು ನಂಬಿರಲಿಲ್ಲವಂತೆ ನಾಗಾರ್ಜುನ ಮತ್ತು ನಿರ್ದೇಶಕ ಪುರಿ ಜಗನ್ನಾಥ್, ನಂತರ ಅನುಷ್ಕಾ ಅವರ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ನೋಡಿದ ನಂತರವೇ ನಿಜ ಗೊತ್ತಾಗಿದ್ದಂತೆ.

Advertisement

Advertisement

ಕನ್ನಡದಲ್ಲಿ ಒಂದು ಸಿನಿಮಾವನ್ನು ಮಾಡದೇ ಹೋದರೂ, ಅನುಷ್ಕಾ ಕನ್ನಡವನ್ನು ಮರೆತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವರುಷ  ಅನುಷ್ಕಾ ಶೆಟ್ಟಿ ಅವರ ಅಮ್ಮನ ಹುಟ್ಟಿದ  ಹಬ್ಬದಂದು ತಮ್ಮಇನ್ಸ್ಟ್ರಾಗ್ರಾಂ ‍ ನಲ್ಲಿ  ಅನುಷ್ಕಾ ‘ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ’ ಎಂದು ವಿಶ್ ಮಾಡಿದ್ದಾರೆ. ಹಾಗೂ ಎಷ್ಟೋ ಬಾರಿ ತೆಲುಗು ಚಿತ್ರರಂಗದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮ್ಮ ವೃತ್ತಿ ಜೀವನಕ್ಕೋಸ್ಕರ ಆಂಧ್ರದಲ್ಲಿ ನೆಲೆಸಿದ್ದರೂ, ಕರ್ನಾಟಕ ಹಾಗೂ ಕನ್ನಡ ಭಾಷೆಯನ್ನು ಇಂದಿಗೂ  ಮರೆತಿಲ್ಲ.! ಅನುಷ್ಕಾ ಶೆಟ್ಟಿ ಅವರ  ಟ್ವೀಟ್ ಗೆ ಕನ್ನಡದ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.


ಇನ್ನು ಈ ನಟಿಯ ಬಗ್ಗೆ ಹಲವು ವಿಚಾರಗಳು ಜನರಿಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ಅವರು ಕನ್ನಡದ ಧಾರಾವಾಹಿಯೊಂದರಲ್ಲಿ ನಟಿಸಿದ್ದರು ಎಂಬುದು ಕುತೂಹಲವಾದ ವಿಚಾರ. ಅನುಷ್ಕಾ ಶೆಟ್ಟಿ ಅವರ ತಂದೆ ಎ ಎನ್‌ ವಿಠ್ಠಲ್ ಶೆಟ್ಟಿ ಅವರು  ಇಂಜಿನಿಯರ್ ಆಗಿದ್ದರು. ಆದ ಕಾರಣ ಅನುಷ್ಕಾ ಶೆಟ್ಟಿಯ  ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿತ್ತು.ಅಲ್ಲದೇ ಅವರಿಗೆ  ಗುಣರಂಜನ್ ಮತ್ತು ರಮೇಶ್ ಎಂಬ ಇಬ್ಬರು ಸಹೋದರರಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಅವರು ನೋಡಲು ಬಹು ಸುಂದರವಾಗಿದ್ದ ಕಾರಣ ಅವರ ಕುಟುಂಬದವರಿಗೆ ಒತ್ತಾಯ ಮಾಡಿ ಅವರನ್ನು ಕನ್ನಡದ ‘ಬಣ್ಣ’ ಧಾರಾವಾಹಿಯಲ್ಲಿ ನಟಿಸುವಂತೆ ಹೇಳಲಾಗಿತ್ತು. ಈ ಧಾರಾವಾಹಿಯಲ್ಲಿ ಅವರು ತನಿಖಾಧಿಕಾರಿ ಪಾತ್ರ ಮಾಡಿದ್ದರು.

ಇನ್ನು ಅನುಷ್ಕಾ ಅವರ ಜೊತೆಗೆ ನಟಿ ನಿಶಿತಾ ಗೌಡ ಕೂಡ ಬಣ್ಣ ಧಾರಾವಾಹಿಯಲ್ಲಿ ನಟಿಸಿದ್ದರು. ಅನುಷ್ಕಾ ಅವರ ಅಭಿನಯದ ಮೊದಲ ಸಿನಿಮಾ ‘ಸೂಪರ್’ ಸಿನಿಮಾ ಬಿಡುಗಡೆಯಾಗುವವರೆಗೂ ನಿಶಿತಾ,  ಅನುಷ್ಕಾ ಜೊತೆಗೆ ಸಂಪರ್ಕದಲ್ಲಿದ್ದರು. ಅಲ್ಲದೇ ಆಶ್ಚರ್ಯಕರ ವಿಚಾರವೇನೆಂದರೆ ಕನ್ನಡದಲ್ಲಿ ಅನುಷ್ಕಾ ಶೆಟ್ಟಿ ಅವರು ಸಿಕ್ಕಾಪಟ್ಟೆ ಆಡಿಶನ್ ಕೊಟ್ಟಿದ್ದರಂತೆ . ಆದರೆ ರಿಜೆಕ್ಟ್ ಆಗಿದ್ದರು ಎಂಬುದು ಬೇಸರದ ವಿಚಾರ. ಅನುಷ್ಕಾಗೆ ಕನ್ನಡದಲ್ಲಿ ಅವಕಾಶ ಸಿಗಲೇ ಇಲ್ಲ, ಹೀಗಾಗಿ ಅವರು ತೆಲುಗಿಗೆ ಹೋದರು ಎಂದು ಹೇಳಲಾಗುತ್ತದೆ.‘ಬಣ್ಣ’ ಧಾರಾವಾಹಿಯಲ್ಲಿ ಅನುಷ್ಕಾ ನಟಿಸುವಾಗ ಅವರಿಗೆ ಸಹನಾ ಶೆಟ್ಟಿ ಎಂದು ಕರೆಯಲಾಗುತ್ತಿತ್ತಂತೆ. ಯಾವಾಗಲೂ ಪಾಸಿಟಿವ್ ಯೋಚನೆ ಮಾಡುವ ಅನುಷ್ಕಾ, ಪ್ರೊಫೆಶನಲ್ ಲೈಫ್‌ನಲ್ಲಿ ತುಂಬ ಸ್ಟ್ರಿಕ್ಟ್ ಆಗಿದ್ದರು.

Advertisement
Share this on...