ಚಿತ್ರರಂಗಕ್ಕೆ ಬರುವ ಮುನ್ನ ಅನುಷ್ಕಾ ಶೆಟ್ಟಿ ನಟಿಸಿದ ಕನ್ನಡ ಸೀರಿಯಲ್ ಯಾವುದು ಗೊತ್ತಾ..?

in ಮನರಂಜನೆ/ಸಿನಿಮಾ 5,583 views

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಅದೇಷ್ಟೋ ನಟ-ನಟಿಯರು ಬೇರೆ ಭಾಷೆಗಳ ಚಿತ್ರಗಳಲ್ಲಿ ಫೇಮಸ್ ಆಗಿದ್ದಾರೆ. ಅದರಲ್ಲೂ ಹೆಚ್ಚಾಗಿ ನಟಿಯರು ಮಾತ್ರ ಬೇರೆ ಭಾಷೆಯ ಚಿತ್ರಗಳಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ರಶ್ಮಿಕಾ ಮಂದಣ್ಣ ಇನ್ನು ಮುಂದಾದ ನಟಿಯರೂ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಕ್ಕತ್ ಫೇಮಸ್ ಹೀರೋಯಿನ್ ಗಳಾಗಿ ಮಿಂಚಿದ್ದಾರೆ. ಇನ್ನೂ ಅದೇ ಸಾಲಿಗೆ ಸೇರಿರುವ ಮತ್ತೊಬ್ಬ ಅದ್ಬುತ ಹಾಗೂ ಸುಂದರವಾದ ನಟಿಯೆಂದರೆ ಅದು ಅನುಷ್ಕಾ ಶೆಟ್ಟಿ. ನಟಿ ಅನುಷ್ಕಾ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನವೆಂಬರ್ 7, 1981 ರಂದು ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಅನುಷ್ಕಾ ಶೆಟ್ಟಿ ಬೆಂಗಳೂರಿನಲ್ಲಿ ಮುಗಿಸಿದರು. ಮೊದಲು ಮಾಡೆಲ್ ಆಗಿದ್ದ ಅನುಷ್ಕಾ ಶೆಟ್ಟಿ ಅವರು ಸಿನಿಮಾಗಳಲ್ಲಿ ನಟಿಸುವ ಸಲುವಾಗಿ ಕನ್ನಡದಲ್ಲಿ ಹಲವಾರು ಆಡಿಶನ್ ಗಳನ್ನು ಕೊಟ್ಟು ರಿಜೆಕ್ಟ್ ಆಗಿದ್ದರು. ಆಡಿಷನ್ ಗೂ ಮುಂಚೆ ಅನುಷ್ಕಾ ಶೆಟ್ಟಿ ಅವರು ನೋಡಲು ತುಂಬಾ ಸುಂದರವಾಗಿದ್ದ ಕಾರಣ ಕನ್ನಡದ ಧಾರಾವಾಹಿ ಒಂದರಲ್ಲಿ ನಟಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಆ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡ ಅನುಷ್ಕಾ ಶೆಟ್ಟಿ ಅವರು ಬಣ್ಣ ಎಂಬ ಧಾರವಾಹಿಯಲ್ಲಿ ಅನುಷ್ಕಾ ಶೆಟ್ಟಿ ಅವರು ತನಿಖಾ ಅಧಿಕಾರಿಯ ಪಾತ್ರವನ್ನು ಮಾಡಿದರು.

Advertisement


ನಂತರದಲ್ಲಿ ಕನ್ನಡ ಸಿನಿಮಾಗಳಿಗೆ ಆಡಿಶನ್ ಕೊಟ್ಟು ರಿಜೆಕ್ಟ್ ಆದ ನಂತರ ಅನುಷ್ಕಾ ಶೆಟ್ಟಿ ಅವರು ಯೋಗ ಪಟುವಾಗಿದ್ದ ಕಾರಣದಿಂದ ಯೋಗ ತರಬೇತಿ ನೀಡುತ್ತಿದ್ದರು. ಇದೇ ಸಮಯದಲ್ಲಿ ತೆಲುಗಿನ ಸೂಪರ್ ಸಿನಿಮಾಗಾಗಿ ಅನುಷ್ಕಾ ಅವರಿಗೆ ಆಫರ್ ಬಂತು. ಅನುಷ್ಕಾ ಅವರ ಪೋಷಕರು ಕೂಡ ಅನುಷ್ಕಾ ಶೆಟ್ಟಿ ಅವರಿಗೆ ಅಭಿನಯಿಸಲು ಒತ್ತಾಯ ಮಾಡಿದರು. ನಟಿಸಲು ಒಪ್ಪಿಕೊಂಡೆ ಅನುಷ್ಕಾ ಶೆಟ್ಟಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ತೆಲುಗು ಪ್ರೇಕ್ಷಕರ ಮನಗೆದ್ದು ತೆಲುಗಿನಲ್ಲಿ ಟಾಪ್ ನಟಿಯಾಗಿ ಬೆಳೆದರು.

Advertisement

ನಂತರದಲ್ಲಿ ನಟಿ ಅನುಷ್ಕಾ ಶೆಟ್ಟಿ ಅವರು ಅರುಂಧತಿ, ಬಿಲ್ಲ, ಸಿಂಗಂ, ಧಮರುಕಂ, ಪಂಚಾಕ್ಷರಿ, ಮಿರ್ಚಿ, ಬಾಹುಬಲಿ, ರುದ್ರಮದೇವಿ, ಭಾಗಮತಿ, ಸೈಜ್ ಝೀರೋ, ಶೌರ್ಯಂ, ಕಿಂಗ್, ಕೆಡಿ, ನಾಗವಲ್ಲಿ, ಲಿಂಗ, ನಿಶಬ್ದಂ ಸೇರಿದಂತೆ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Advertisement

ನಟಿ ಅನುಷ್ಕಾ ಶೆಟ್ಟಿ ಅವರು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಹೀಗೆ ಎಲ್ಲಾ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ಇನ್ನು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಕನ್ನಡವನ್ನು ಮರೆತೆ ಹೋಗಿರುವ ನಟಿಯರ ಮಧ್ಯೆ ನಟಿ ಅನುಷ್ಕಾ ಶೆಟ್ಟಿ ಅವರು ಭಿನ್ನವಾಗಿ ನಿಲ್ಲುತ್ತಾರೆ. ಕರ್ನಾಟಕಕ್ಕೆ ಬಂದರೆ ಅನುಷ್ಕಾ ಶೆಟ್ಟಿ ಅವರು ಮಾಧ್ಯಮಗಳ ಮುಂದೆ ಹಾಗೂ ಅಭಿಮಾನಿಗಳೊಂದಿಗೆ ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವುದನ್ನು ಕಂಡರೆ ತುಂಬಾ ಖುಷಿಯಾಗುತ್ತದೆ.

Advertisement

– ಸುಷ್ಮಿತಾ

Advertisement
Share this on...