gattimela arthi

ಅನುಷ್ಕಾ ಶೆಟ್ಟಿ ಫೈಟ್ ಮಾಸ್ಟರ್ನಿಂದ ಹೊಗಳಿಸಿಕೊಂಡ ” ಗಟ್ಟಿಮೇಳ ” ಧಾರಾವಾಹಿಯ ನಟಿ..

in ಮನರಂಜನೆ/ಸಿನಿಮಾ 505 views

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರವನ್ನು ಮಾಡುತ್ತಿರುವ ನಟಿ ಅಶ್ವಿನಿ ಅವರು ಸದ್ಯ ಟಾಲಿವುಡ್ ನಲ್ಲಿ ಮನೆ ಮಾತಾಗಿದ್ದಾರೆ.ಈಗ ಇವರು ಆರತಿ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.ಕಲಾವಿದರು ತೆರೆ ಮೇಲೆ ಅವರ ಪಾತ್ರಗಳಿಂದ ಮಿಂಚಬಹುದು.ಆದರೆ ಒಂದು ಪಾತ್ರ ಗಳಿಸಲು ಆಮೇಲೆ ಜೀವ ತುಂಬಲು ತುಂಬಾ ಕಷ್ಟ ಪಡಬೇಕಾಗುತ್ತದೆ.ಗಟ್ಟಿಮೇಳ ಧಾರಾವಾಹಿಗೆ ಬರುವ ಮೊದಲು ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ರಾಧಾ ರಮಣ ‘ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆ ಪಾತ್ರ ಮಾಡುವುದಕ್ಕಿಂತ ಮುಂಚೆ ನಟಿ ಅಶ್ವಿನಿ 200 ಕ್ಕೂ ಹೆಚ್ಚು ಆಡಿಷನ್ ಕೊಟ್ಟಿದ್ದರಂತೆ.ಇವರು ಆವಾಗ ತಾಳ್ಮೆಯಿಂದ ಮತ್ತು ಆಶಾಭಾವನೆಯಿಂದ ಒಳ್ಳೆಯ ಪಾತ್ರ ಸಿಗುತ್ತದೆ ಎಂದು ನೀರೀಕ್ಷೆಯಲ್ಲಿದ್ದರು. ಆ ಸಮಯದಲ್ಲಿಯೇ ಇವರಿಗೆ ‘ ಗಟ್ಟಿ ಮೇಳ ‘ ಹಾಗೂ ‘ ನಾಗ ಬೈರವಿ ‘ ಧಾರವಾಹಿಯಲ್ಲಿ ಇವರಿಗೆ ಅಭಿನಯಿಸುವ ಅವಕಾಶ ಸಿಕ್ಕಿತು.ಈಗ ಅಶ್ವಿನಿ ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಅದರಲ್ಲೂ ” ನಾಗಬೈರವಿ ” ಧಾರವಾಹಿಯಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿ ಶೇಡ್ ಅಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

Advertisement

Advertisement

ಈ ಪಾತ್ರ ಮಾಡುವಾಗ ಕಾಡಿನಲ್ಲಿ ಅನೇಕ ಕಷ್ಟಗಳ ಮದ್ಯೆ ಶೂಟಿಂಗ್ನಲ್ಲಿ ಮುಂದುವರೆಯುತ್ತಿದ್ದರಂತೆ.ನಾಗದೇವತೆ ಪಾತ್ರ ಇವರದು ಅದರಲ್ಲಿ. ಆ ಪಾತ್ರದ ಶೂಟಿಂಗ್ ಮಾಡುತ್ತಿರುವಾಗ ಆ ಕಾಡಿನಲ್ಲಿ ಹುಲಿಗಳು ಇದ್ದವಂತೆ. ಆ ಜಾಗದಲ್ಲಿ ಫೈಟಿಂಗ್ ಸೀನ್ ಮಾಡಿದ್ದರಂತೆ.ಅನುಷ್ಕಾ ಶೆಟ್ಟಿಗೆ ‘ ಅರುಂಧತಿ ‘ ಮುಂತಾದ ಸಿನಿಮಾಕ್ಕೆ ಫೈಟ್ ಹೇಳಿಕೊಟ್ಟಿದ್ದ ಜಾಶ್ವಾ ಅವರು ಇವರಿಗೆ ಫೈಟ್ ಹೇಳಿಕೊಡುವವರು.

Advertisement

ಜಾಶ್ವಾ ಮಾಸ್ಟರ್ ಆ ಸಮಯದಲ್ಲಿ ಅಶ್ವಿನಿ ಅವರಿಗೆ ಹೇಗೆ ಹೇಳಿದರಂತೆ.ಅನುಷ್ಕಾ ಶೆಟ್ಟಿ ನಂತರ ಶ್ರದ್ಧೆಯಿಂದ ಶ್ರಮ ಹಾಕಿ ಫೈಟ್ ಮಾಡಿದ್ದನ್ನು ನಾನು ನಿಮ್ಮಲ್ಲಿಯೇ ನೋಡಿದೆ ಎಂದು ಹೇಳಿದರಂತೆ.ಈ ಮಾತು ಕೇಳಿ ಅಶ್ವಿನಿ ಅವರಿಗೆ ಎಲ್ಲಿದ ಖುಷಿ ಆಯಿತು. ಒಮ್ಮೆ ಫೈಟ್ ಮಾಡುವಾಗ ಅವರಿಗೆ ಅವರ ಬೆರಳಿನ ಉಂಗುರ ತಗುಲಿ ರಕ್ತ ಬರಿಸಿಕೊಂಡಿದ್ದರಂತೆ.ಇನ್ನೊಂದು ಸಾರಿ ಬೇರೆಯವರ ಜೊತೆ ಮಾಡುವಾಗಲೂ ಹೀಗೆ ಆಗಿತ್ತಂತೆ.ಇವರು ಡಾನ್ಸ್ ಮತ್ತು ಫೈಟ್ ಮಾಡುವ ಸಮಯದಲ್ಲಿ ಈ ತರಹ ಸಾಕಷ್ಟು ಸಲ ಆಗಿದೆಯಂತೆ ಆದರೆ ಇವರು ಅದಕ್ಕೆಲ್ಲ ತಲೆಕೆಡಿಸಿ ಕೊಂಡಿಲ್ಲ.ಇವರ ತಲೆಯಲ್ಲಿ ಇದ್ದಿದ್ದು ಒಂದೇ ವಿಷಯ ಇವರಿಗೆ ಇವರ ಪಾತ್ರ ಚೆನ್ನಾಗಿರಬೇಕು ಎಂಬುದು ಮಾತ್ರ.ಕಾಡಿನಲ್ಲಿ ಫೈಟ್ ಮಾಡುವಾಗ ಗಾಯಗಳಾಗಿವೆ.ಕಲಾವಿದರು ಒಂದು ಪಾತ್ರಕ್ಕೆ ನ್ಯಾಯ ಒದಗಿಸಲು ಕಷ್ಟ ಪಡಬೇಕಾಗುತ್ತದೆ.ಇವರ ನಾಗದೇವತೆ ತಂಡ ಇವರಿಗೆ ಸಾಹಸ ದೃಶ್ಯಗಳನ್ನು ಮಾಡುವಾಗ ಸಾಕಷ್ಟು ಪ್ರೋತ್ಸಾಹ ಮಾಡಿದ್ದಾರೆ ಎಂದು ಅಶ್ವಿನಿ ಹೇಳುತ್ತಾರೆ.

Advertisement

ಈ ಧಾರವಾಹಿಯಲ್ಲಿ ಇವರಿಗೆ ಈ ಪಾತ್ರವನ್ನು ಕೊಟ್ಟಿದ್ದಕ್ಕೆ ತುಂಬಾ ಸಂತಸ ವ್ಯಕ್ತ ಪಡಿಸಿದ್ದಾರೆ.ಒಬ್ಬ ಕಲಾವಿದೆಯಾಗಿ ಇದಕ್ಕಿಂತ ಇನ್ನೇನು ಹೆಚ್ಚು ಬೇಕು ಎನ್ನುತ್ತಾರೆ. ನಾಗಬೈರವಿ ಧಾರವಾಹಿಯಲ್ಲಿ ಅಶ್ವಿನಿ ಪಾತ್ರ ನೋಡಿ ಆಂಧ್ರ ಜನ ಫುಲ್ ಫಿದಾ ಆಗಿದ್ದಾರಂತೆ.ಇವರಿಗೆ ತೆಲುಗು ಸಿನಿಮಾಗಳಿಗೆ ಆಫರ್ ಬರುತ್ತಿವೆಯಂತೆ.
ಇವರಿಗೆ ಡಿಫರೆಂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ.ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರು ಕೂಡಾ ಕನ್ನಡದಲ್ಲಿ ಹೆಸರು ಮಾಡಿದ ಹಾಗೆ ಆಗೋಲ್ಲ ಎನ್ನುತ್ತಾರೆ ಈ ನಟಿ.ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೆ ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ಹೆಚ್ಚು ಮಾಡುತ್ತೇನೆ ಎನ್ನುತ್ತಾರೆ.

Advertisement
Share this on...