Kannada News ತಾಯ್ತನದ ಅನುಭವ ಹಂಚಿಕೊಂಡಿರುವ ಅನುಷ್ಕಾ ಅವರಿಗೆ ಕೊಹ್ಲಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?

in ಕ್ರೀಡೆ/ಮನರಂಜನೆ 61 views

ಹೆಣ್ಣೆಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ಹೆಣ್ಣು ಅಂದ್ರೆ ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು. ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ. ಹೀಗೆ ನಾನಾ ರೂಪದಲ್ಲಿ ಅವತರಿಸುವವಳೆ ಸ್ತ್ರೀ ಶಕ್ತಿ. ಆದಿ ಶಕ್ತಿಯಾಗಿ ವಿಶ್ವದೆಲ್ಲೆಡೆ ನೆಲೆಸಿರುವ ಮಹಿಳೆ, ಈ ಜಗತ್ತಿಗೆ ದೊರಕಿರುವ ಅಪೂರ್ವವಾದ ಕೊಡುಗೆ ಎಂದರೆ ತಪ್ಪಾಗಲಾರದು. ಮಹಿಳೆಯ ಹೃದಯ ಆಗಸದಷ್ಟು ಎತ್ತರ. ಮನಸ್ಸು ಸಾಗರದಷ್ಟೇ ವಿಶಾಲ. ಮಹಿಳೆ ನಿಜಕ್ಕೂ ಈ ಸೃಷ್ಟಿಯ ಸೃಷ್ಟಿಗೆ ಕಾರಣಳಾದವಳು.
ಮನೆಯಲ್ಲಿ ಸಂಸ್ಕಾರ ಕಲಿಸುವವಳು ಹೆಣ್ಣು, ಜಗತ್ತಿನಲ್ಲಿ ಗಂಡಿನ ಕ್ರೌರ್ಯಕ್ಕೆ ಬಲಿಯಾಗುವವಳು ಹೆಣ್ಣು. ನಾವು ದೇವರನ್ನು ನೋಡಿಲ್ಲ, ಆದರೆ ದೇವರೇ ನಮ್ಮ ತಾಯಿ ಎಂದರೆ ತಪ್ಪಾಗಲಾರದು. ಯಾಕೆಂದರೆ ನಮಗೆ ಜನ್ಮ ನೀಡಿದವಳು ಈ ತಾಯಿ, ಒಂಬತ್ತು ತಿಂಗಳು ತನ್ಮ ಹೊಟ್ಟೆಯಲ್ಲಿಟ್ಟುಕೊಂಡು ಜೋಪಾನವಾಗಿ ಈ ಭೂಮಿಗೆ ನಮ್ಮನ್ನು ಪರಿಚಯಿಸುತ್ತಾಳೆ.

Advertisement

Advertisement

‘ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಅಭ್ಬಾ ಎಷ್ಟು ಅರ್ಥಗರ್ಭಿತವಾದ ಸಾಲು ಅಲ್ಲವೇ? ನವಮಾಸಗಳೂ ನೋವನ್ನು ಅನುಭವಿಸಿ, ನಮ್ಮನ್ನು ಹೆತ್ತು, ಹೊತ್ತು, ಸಲಹುವ ತಾಯಿ, ಹಾಲುಣಿಸಿ, ಕೈತುತ್ತು ನೀಡಿ, ಅಂಬೆಗಾಲಿಡಿಸಿ, ಕೈಹಿಡಿದು ನಡೆಸಿ, ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿಯೇ ಅವಿರತ ಹಾಗೂ ಅನವರತ ಶ್ರಮಿಸುತ್ತಾಳೆ. ಇಂತಹ ಮಹಾನ್‌ ತಾಯಿಯ ಋಣವನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಭಾರತೀಯರು ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ವಿದ್ಯಾಧಿದೇವತೆಯಾದ ಸರಸ್ವತಿ ಹೆಣ್ಣು, ಧನದೇವತೆಯಾದ ಲಕ್ಷ್ಮೀ ಹೆಣ್ಣು, ನಮಗೆ ಜನ್ಮ ನೀಡಿದಾತೆ ತಾಯಿ ಹೆಣ್ಣು, ಭೂಮಿ ತಾಯಿ ಕೂಡ ಹೆಣ್ಣು. ಇನ್ನು ಒಂದು ಹೆಣ್ಣಿಗೆ ತಾನು ತಾಯಿಯಾಗುತ್ತಿರುವುದು ತಿಳಿದಾಗ ಅವಳ ಆನಂದ ಮುಗಿಲು ಮುಟ್ಟಿರುತ್ತದೆ. ತನ್ನ ಮಗುವನ್ನು ಹೇಗೆ ಲಾಲನೆ ಪೋಷಣೆ ಮಾಡಬೇಕು ಎಂದು ಪ್ರತಿನಿತ್ಯ ತಯಾರಾಗುತ್ತಿರುತ್ತಾರೆ. ತಾಯಿಯಾದಗಲೇ ಮಹಿಳೆಯ ಜೀವನ ಸಾರ್ಥಕವಾಗುತ್ತದೆ. ಇದೀಗ ಈ ರೀತಿಯಾದ  ಖುಷಿಯಲ್ಲಿ ತೇಲುತ್ತಿರುವವರು ಭಾರತ ಕ್ರಿಕೇಟ್ ತಂಡದ ನಾಯಕನ ಪತ್ನಿ,  ಹಾಗೂ ಬಾಲಿವುಡ್ ಚಿತ್ರರಂಗದ ಎವರ್ ಬ್ಯೂಟಿಫುಲ್ ಅನುಷ್ಕಾ ಶರ್ಮಾ ಅವರು.

Advertisement

ಬಹುಕಾಲ ಪ್ರೇಮದಲ್ಲಿ ತೇಲಾಡುತ್ತಿದ್ದ ಭಾರತದ ಹೆಮ್ಮೆಯ ಕ್ರೀಡಾ ಪಟು ವಿರಾಟ್ ಕೋಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ  ಅವರು ಇಟಲಿಯಲ್ಲಿ ೨೦‍೧೭, ಡಿಸೆಂಬರ್ ೧೧ ರಂದು ವಿವಾಹವಾಗುತ್ತಾರೆ. ನಂತರ  ವಿವಾಹದ ಆರತಾಕ್ಷತೆಯನ್ನು ದೆಹಲಿ ಮತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಸೆಲೆಬ್ರಿಟಿಗಳ ಸಮುಖದಲ್ಲಿ ನಡೆಸಿಕೊಳ್ಳುತ್ತಾರೆ. ಇನ್ನು ಈ ನವ ಜೋಡಿಗೆ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಸಿ ಶುಭಾಶಯ ತಿಳಿಸಿದ್ದರು. ವಿವಾಹವಾದ ಬಳಿಕ  ಅನುಷ್ಕಾ ಶರ್ಮಾ ಶಾರುಖ್ ಅವರ ಜೊತೆ ಝಿರೋ ಸಿನಿಮಾದಲ್ಲಿ ಬಿಟ್ಟರೆ ಅಷ್ಟಾಗಿ ಯಾವ ಸಿನಿಮಾದಲ್ಲೂ ಅಭಿನಯಿಸಲಿಲ್ಲ. ನಂತರ ಬುಲ್ ಬಿಲ್,  ಪಾತಾಳ್ ಲೋಕ್ ಎಂಬ ಸಿನಿಮಾಗಳಿಗೆ ಬಂಡವಾಳ ಹೂಡಿ ನಿರ್ಮಾಪಕಿಯಾಗುತ್ತಾರೆ. ನಂತರ ಪತಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ ಅನುಷ್ಕಾ, ತಾವು ತಾಯಿಯಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ತಾವು ತಂದೆ ತಾಯಿಯಾಗುತ್ತಿರುವ ವಿಚಾರವನ್ನು ಜುಲೈ ತಿಂಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದರು.

Advertisement

 

View this post on Instagram

 

Nothing is more real & humbling than experiencing creation of life in you . When this is not in your control then really what is ?

A post shared by AnushkaSharma1588 (@anushkasharma) on

ಈ ವಿಚಾರವನ್ನು ತಿಳಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೆ ಹರಿಸಿದ್ದು, ಕೆಲವರು ಟ್ರೋಲ್ ಕೂಡ ಮಾಡಿದ್ದರು. ಇದೀಗ ತಾನು ತಾಯಿಯಾಗುತ್ತಿರುವುದರ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿರುವ ಅನುಷ್ಕಾ ‘ನಿಮ್ಮಲ್ಲಿಯೇ ಒಂದು ಜೀವ ಸೃಷ್ಟಿಯಾಗುತ್ತಿರುವುದನ್ನು ಅನುಭವಿಸುವುದಕ್ಕಿಂತ ಬೇರೆ ನೈಜತೆ ಮತ್ತು ವಿನಮ್ರತೆ ಇಲ್ಲ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲವೆಂದರೆ ಏನು?’ ಎಂದು ಅನುಷ್ಕಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಾಯಕ ವಿರಾಟ್ ಕೊಹ್ಲಿ ಅವರು ‘ಒಂದೇ ಫ್ರೇಮ್‌ನಲ್ಲಿ ನನ್ನ ಜಗತ್ತು ಇದೆ’ ಎಂದಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.
All rights reserved Namma Kannada Banglore.

Advertisement
Share this on...