ಅನುಷ್ಕಾ ಬಳಸುವ ಹ್ಯಾಂಡ್ ಬ್ಯಾಗ್ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ!

in ಮನರಂಜನೆ 30 views

ಬಾಲಿವುಡ್ ನಟಿ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಯಾವಾಗಲೂ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಅದು ಏರ್ ಪೋರ್ಟ್ ಲುಕ್ ಆಗಿರಬಹುದು ಅಥವಾ ರೆಡ್ ಕಾರ್ಪೆಟ್ ಆಗಿರಬಹುದು ಎಲ್ಲೆಡೆ ಅನುಷ್ಕಾ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಅಂದಹಾಗೆ ಅನುಷ್ಕಾ ಬಳಿ ಅನೇಕ ಐಷಾರಾಮಿ ಬ್ರಾಂಡ್ ಹ್ಯಾಂಡ್ ಬ್ಯಾಗ್’ಗಳು ಸಹ ಇವೆ. ಇವುಗಳಲ್ಲಿ ಕೆಲವು ಬ್ಯಾಗ್’ಗಳು ನೋಡಲು ಕಾಮನ್ ಬ್ಯಾಗ್ ಅಂತೆ ಕಂಡರೂ, ವಾಸ್ತವವಾಗಿ ಅವುಗಳ ಬೆಲೆ ನೀವು ಅಂದಾಜು ಮಾಡಲು ಸಾಧ್ಯವಾಗದಷ್ಟು ಇದೆ. ಇಲ್ಲಿ ಅನುಷ್ಕಾ ಅವರ ಕೆಲವು ಹ್ಯಾಂಡ್ ಬ್ಯಾಗ್’ ಬಗ್ಗೆ ಮಾಹಿತಿ ಕೊಡಲಾಗಿದೆ ಓದಿ….

Advertisement

 

Advertisement

Advertisement

ಸೇಂಟ್ ಲಾರೆಂಟ್ಸ್ ರೈವ್ ಗೌಚೆ ಟೊಟೆ ಬ್ಯಾಗ್
ಅನುಷ್ಕಾ ಬಳಿ ಸೇಂಟ್ ಲಾರೆಂಟ್ಸ್ ರೈವ್ ಗೌಚೆ ಟೊಟೆ ಬ್ಯಾಗ್ ಇದೆ. ಇದು ಅತ್ಯಂತ ಜನಪ್ರಿಯ ಬ್ಯಾಗ್’ಗಳಲ್ಲಿ ಒಂದಾಗಿದೆ. ಅನುಷ್ಕಾ ಹೆಚ್ಚಾಗಿ ಈ ಬಿಳಿ ಬ್ಯಾಗ್ ಅನ್ನು ತೆಗೆದುಕೊಂಡು ಹೋಗುವುದನ್ನು ನೀವು ಕಾಣಬಹುದು. ಅಂದಹಾಗೆ ಈ ಬ್ಯಾಗ್ ಬೆಲೆ ಸುಮಾರು 1,08,718 ರೂ. ಚನೆಲ್ನ ಡೌವಿಲ್ಲೆ ಡೆನಿಮ್ ಬ್ಲೂ ಟೊಟೆ ಬ್ಯಾಗ್
ಅನುಷ್ಕಾ ಬಳಿ ಡೆನಿಮ್ ಬ್ಯಾಗ್ ಜೊತೆಗೆ ಕ್ಯಾನ್ವಾಸ್, ಲೆದರ್ ಸಹ ಇದೆ. ಇನ್ನು ಚನೆಲ್ನ ಡೌವಿಲ್ಲೆ ಡೆನಿಮ್ ಬ್ಲೂ ಟೊಟೆ ಬ್ಯಾಗ್ ಪಟ್ಟಿಯ ಮೇಲೆ ಚೈನಿನ ಸರಪಳಿ ಇದ್ದು, ಇದು ಬ್ಯಾಗ್’ಗೆ ವಿಶೇಷ ಲುಕ್ ನೀಡಿದೆ. ಬ್ಯಾಗ್ ಮೇಲೆ ಬ್ರಾಂಡ್ ಲೋಗೊ ಮುದ್ರಣವಿದೆ. ಈ ಬ್ಯಾಗ್ ಬೆಲೆ ಸುಮಾರು 2,80,000 ರೂ.

Advertisement

 

ಲೂಯಿಸ್ ವಿಟಾನ್ ಕ್ರಾಸ್ ಬಾಡಿ ಬ್ಯಾಗ್
ಅನುಷ್ಕಾ ಶರ್ಮಾ ವಿಶ್ವದ ಪ್ರಸಿದ್ಧ ಐಷಾರಾಮಿ ಬ್ರಾಂಡ್ ಲೂಯಿಸ್ ವಿಟಾನ್ ಪರ್ಸ್ ಸಹ ಹೊಂದಿದ್ದಾರೆ. ಜೊತೆಗೆ ಮಲ್ಟಿ ಪೊಚೆಟ್ ಕ್ರಾಸ್ ಬಾಡಿ ಬ್ಯಾಗ್ ಕೂಡ ಇದೆ, ಅದು ಸೂಪರ್ ಕೂಲ್ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. ಈ ಪರ್ಸ್ನ ಬೆಲೆ ಸುಮಾರು 1,15,000 ರೂ.

 

 


ಬರ್ಬೆರಿಯ ಬ್ಯಾಗ್
ಬ್ರಿಟಿಷ್ ಐಷಾರಾಮಿ ಬ್ರಾಂಡ್ ಬರ್ಬೆರಿಯ ಬ್ಯಾಗ್ ಅನುಷ್ಕಾ ಅವರ ನೆಚ್ಚಿನ ಬ್ಯಾಗ್’ಗಳಲ್ಲಿ ಒಂದಾಗಿದೆ. ಅವರು ಅದನ್ನು ಹಲವು ಬಾರಿ ಧರಿಸಿದ್ದಾರೆ. ಈ ಕ್ಯಾನ್ವಾಸ್ ಬ್ಯಾಗ್ ಸೂಪರ್ ಸ್ಟೈಲಿಶ್ ಆಗಿದ್ದು, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಬ್ಯಾಗ್ ಬೆಲೆ ಸುಮಾರು ರೂ. 1,00,000.

 


ಫೆಂಡಿ ಬ್ಯಾಗ್
ಫೆಂಡಿಯ ಲೋಗೋ ಇರುವ ಟೂಟ್ ಬ್ಯಾಗ್ ಸಾಕಷ್ಟು ಜನಪ್ರಿಯವಾಗಿದ್ದು, ಇಂದಿಗೂ ಇದು ಫ್ಯಾಷನ್ನಿಂದ ಹೊರಗುಳಿದಿಲ್ಲ, ಈ ಕಾರಣದಿಂದಾಗಿ ಅನೇಕ ಖ್ಯಾತನಾಮರು ಇದನ್ನು ತೆಗೆದುಕೊಂಡು ಹೋಗುತ್ತಾರೆ. ಈ ಬ್ಯಾಗ್ನಲ್ಲಿ ಲಗೇಜ್’ಗೆ ಸಾಕಷ್ಟು ಸ್ಥಳವಿದೆ ಮತ್ತು ಒಳಭಾಗದಲ್ಲಿ ದೊಡ್ಡ ಪಾಕೆಟ್ ಕೂಡ ಇದೆ, ಇದರಲ್ಲಿ ಕ್ಲಚ್, ಕೀ, ಸನ್ ಗ್ಲಾಸ್ ಇತ್ಯಾದಿಗಳನ್ನು ಇಡಬಹುದು. ಈ ಬ್ಯಾಗ್ ಬೆಲೆ ಸುಮಾರು 1,55,000 ರೂ.

 

ಡಿಯೊರ್ ಬ್ಯಾಗ್

ವಿಮಾನ ನಿಲ್ದಾಣದಲ್ಲಿ ಈ ಬ್ಯಾಗ್ ಅನ್ನು ಅನುಷ್ಕಾ ತೆಗೆದುಕೊಂಡು ಹೋಗಿರುವುದನ್ನು ನೀವು ನೋಡಿರಬಹುದು. ಇದರ ಗಾತ್ರ ದೊಡ್ಡದಾಗಿರುವುದರಿಂದ ಹೆಚ್ಚಿನ ಸಾಮಾನುಗಳನ್ನು ಸಾಗಿಸುವ ಪ್ರಯಾಣ-ಸ್ನೇಹಿ ಚೀಲಗಳಲ್ಲಿ ಒಂದಾಗಿದೆ. ಈ ಟಾಟ್ ಬ್ಯಾಗ್ ಅನ್ನು ಡಿಯೊರ್ ಕಲೆಕ್ಷನ್’ನಲ್ಲಿ ಖರೀದಿಸಿದ್ದು, ಇದರ ಬೆಲೆ ಸುಮಾರು 2,50,000 ರೂ.

Advertisement
Share this on...