ಅನುಶ್ರೀ ಬಗ್ಗೆ ಯಾರಿಗೂ ಗೊತ್ತಿಲ್ಲದಂತಹ ಸಂಗತಿಗಳು..!

in ಮನರಂಜನೆ/ಸಿನಿಮಾ 386 views

ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂಬುದು ಅಂಕರ್ ಅನುಶ್ರೀ ಅವರ ಚಿಕ್ಕಂದಿನ ಆಸೆಯಾಗಿತ್ತು. ಆದರೆ ಅನುಶ್ರೀ ಅವರು ಚಿಕ್ಕವರಿದ್ದಾಗಲೇ ಅವರ ತಂದೆ-ತಾಯಿ ಹಲವು ಕಾರಣಾಂತರಗಳಿಂದ ಬೇರ್ಪಟ್ಟರು. ಅದಾಗಿಯೂ ಎದೆಗುಂದದ ಅನುಶ್ರೀ ಅವರ ತಾಯಿ ತಮ್ಮ ಮಗಳನ್ನು, ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದರು. ಅನುಶ್ರೀ ಪಿಯುಸಿ ಓದುತ್ತಿದ್ದಾಗ ತನ್ನ ತಾಯಿಯ ಕಷ್ಟವನ್ನು ನೋಡಲಾಗದೆ ತಾನು ದುಡಿಯಬೇಕು ಮನೆಯ ಜವಾಬ್ದಾರಿ, ತನ್ನ ತಾಯಿ ಹಾಗೂ ತಮ್ಮನ್ನ ಜವಾಬ್ದಾರಿಯನ್ನು ತಾನು ಹೊರಬೇಕು ಅನ್ನುವ ಮನಸ್ಸು, ಧೈರ್ಯ ಅನುಶ್ರೀ ಅವರಲ್ಲಿ ಹುಟ್ಟುತ್ತದೆ. ಆದರೆ ಏನು ಮಾಡಬೇಕು ಎಂದು ಅವರಿಗೆ ಗೊತ್ತಿಲ್ಲ. ತಮ್ಮ ಮಾತಿನ ಚಾತುರ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಮಂಗಳೂರಿನ ನಮ್ಮ ಟಿವಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ಪಿಯುಸಿ ಓದಿದ ಅನುಶ್ರೀ. ಅಲ್ಲಿ ಅನುಶ್ರೀಗೆ ಬರುತ್ತಿದ್ದದ್ದು ಸ್ವಲ್ಪ ಹಣ. ಆ ಹಣ ತಮ್ಮ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಆಗ ಬೆಂಗಳೂರಿನ ಬಸ್ಸು ಹತ್ತಿ ಆತಂಕ, ಭಯದ ಜೊತೆ ಹತ್ತಾರು ಕನಸುಗಳನ್ನ ಹೊತ್ತು ತನ್ನ ತಾಯಿಯನ್ನು ಸಂತೋಷವಾಗಿ ಇರಿಸಬೇಕು ಅನ್ನುವ ಛಲದಿಂದ ಬೆಂಗಳೂರಿಗೆ ಬಂದು ಇಳಿಯುತ್ತಾರೆ ಅನುಶ್ರೀ.

Advertisement

Advertisement

ತಮ್ಮ ಪ್ರತಿಭೆಯಿಂದ ಈಟಿವಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಒಂದು ಎಪಿಸೋಡ್ ಗೆ ಅನುಶ್ರೀ ಅವರಿಗೆ ಬರುತ್ತಿದ್ದದ್ದು ಕೇವಲ 250 ರೂಪಾಯಿ. ಆಂಕರ್ ಆಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕಷ್ಟ ಪಟ್ಟು ದುಡಿದು ಅನುಶ್ರೀ ಕೊನೆಗೆ ಒಂದು ದಿನ ಕನ್ನಡಿಗರ ಮನೆ ಮಾತಾಗುತ್ತಾರೆ. ನೂರಾರು ಪ್ರತಿಭಾವಂತರ ಜೊತೆ ಪೈಪೋಟಿಗೆ ನಿಂತು ಕೊನೆಗೆ ಕನ್ನಡದ ಕಿರುತೆರೆಯಲ್ಲಿ ನಂ.1 ಆಂಕರ್ ಆಗಿ ಹೊರ ಹೊಮ್ಮುತ್ತಾರೆ. ಇನ್ನೊಂದು ಕಡೆ ತನ್ನ ತಮ್ಮನನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನನ್ನಾಗಿ ಮಾಡುತ್ತಾರೆ. ತನ್ನ ತಾಯಿಯನ್ನು ಹೂವಿನಲ್ಲಿಟ್ಟು ಸಾಕುತ್ತಾರೆ.

Advertisement

ತುಂಬಾ ಜನಕ್ಕೆ ಗೊತ್ತಿಲ್ಲದ ಇನ್ನೊಂದು ವಿಷಯ ಅಂದರೆ ಮೊದಲು ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟಿಸುವಂತೆ ನಿರ್ದೇಶಕ ಶಶಾಂಕ್ ಅವರು ಮೊದಲು ಕೇಳಿದ್ದು ಅನುಶ್ರೀ ಅವರನ್ನು ಆದರೆ ತುಂಬಾ ಸಂಕೋಚ ಮನೋಭಾವವನ್ನು ಹೊಂದಿದ್ದ ಅನುಶ್ರೀ ನಟನೆ ಮಾಡಲು ಹಿಂಜರಿಯುತ್ತಾರೆ. 2011 ರಲ್ಲಿ ಡಬ್ಬಿಂಗ್ ಆರ್ಟಿಸ್ಟ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ ಅನುಶ್ರೀ ಅನ್ನುವುದು ಇನ್ನೊಂದು ಮೆಚ್ಚುವಂತಹ ವಿಷಯ. 2018 ರಲ್ಲಿ ಕೆಂಪೇಗೌಡ ಪ್ರಶಸ್ತಿ ಹಾಗೂ ಉತ್ತಮ ಆಂಕರ್ ಎಂದು ಹಲವು ಬಾರಿ ಜೀ಼ ಕುಟುಂಬ ಅವಾರ್ಡ್ಸ್ ಸಹ ಅನುಶ್ರೀ ಅವರಿಗೆ ದೊರಕಿದೆ.

Advertisement

ಅನುಶ್ರೀ ಅವರು ಬೆಂಕಿಪಟ್ಟಣ, ರಿಂಗ್ ಮಾಸ್ಟರ್, ಮಾದ ಮತ್ತು ಮಾನಸಿ, ಉಪ್ಪು ಹುಳಿ ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಇವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸ ರಿ ಗ ಮ ಪ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ, ಚಿನ್ನದ ಬೇಟೆ ಸೇರಿದಂತೆ ಆನುಶ್ರೀ ಹಲವು ಟಿವಿ ಶೋಗಳಿಗೆ ಆಂಕರ್ ಆಗಿ ತಮ್ಮ ಮಾತಿನ ಶೈಲಿಯಿಂದ ಎಲ್ಲಾ ಪ್ರೇಕ್ಷಕರನ್ನು ಆಕರ್ಷಿಸಿ ಬಹಳ ಸೊಗಸಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆಯನ್ನು ನಂಬಿ ಬೆಂಗಳೂರು ಬಸ್ಸನ್ನು ಹತ್ತಿ ಅನುಶ್ರೀ ಈ ಹಂತಕ್ಕೆ ಬೆಳೆದಿದ್ದಾರೆ ಅಂದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅನುಶ್ರಿ ಅವರ ಛಲ ಹಾಗೂ ಅವರ ಧೈರ್ಯ ಮೆಚ್ಚುವಂತಹದ್ದು

– ಸುಷ್ಮಿತಾ

Advertisement
Share this on...