ಅನುಶ್ರೀ ವರ್ಕೌಟ್ ಮಾಡುತ್ತಿರುವುದು ಫಿಟ್ನೆಸ್​​​ಗೆ ಅಲ್ವಂತೆ…ನೋಡಿ ಏಕೆ ಅಂತ..?

in ಕ್ರೀಡೆ/ಮನರಂಜನೆ 101 views

ನಿರೂಪಕಿ ಅನುಶ್ರೀ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮೈಕ್ ಹಿಡಿದು ಸ್ಟೇಜ್ ಹತ್ತಿದರೆ ಸಾಕು ನಿರರ್ಗಳವಾಗಿ ಕನ್ನಡ ಮಾತಾಡ್ತಾರೆ. ಇಂದಿಗೂ ರಾಜ್ಯದ ನಂಬರ್ ಒನ್ ನಿರೂಪಕಿ ಎಂಬ ಹೆಸರು ಉಳಿಸಿಕೊಂಡು ಬಂದಿದ್ದಾರೆ ಎಂದರೆ ಆ ಸಾಧನೆ ಹಿಂದೆ ಅವರ ಪರಿಶ್ರಮ ಎಷ್ಟಿರಬಹುದು ನೀವೇ ಯೋಚಿಸಿ.ಇನ್ನು ಕಳೆದ 3 ತಿಂಗಳಿಂದ ಎಲ್ಲೆಡೆ ಜಿಮ್​​ಗಳು ಬಂದ್ ಆಗಿವೆ. ಸದ್ಯಕ್ಕೆ ಜಿಮ್ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಒಂದೆಡೆ ಜನರು ಕೊರೊನಾದಿಂದ ಗುಣಮುಖರಾಗುತ್ತಾ ಮನೆಗೆ ಸೇರುತ್ತಿದ್ದರೆ. ಅಷ್ಟೇ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ದೃಢವಾಗುತ್ತಿದೆ. ಮತ್ತೆ ಲಾಕ್​ಡೌನ್ ಆಗಬಹುದು ಎನ್ನುತ್ತಿದ್ದಾರೆ ಜನ. ಈ ನಡುವೆ ಜನರು ಮೊದಲಿನಂತೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ವಹಿಸುವವರು ಜಿಮ್ ಮರೆತು ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ.

Advertisement

Advertisement

 

Advertisement

ನಿರೂಪಕಿ ಅನುಶ್ರೀ ಕೂಡಾ ಇದೀಗ ರಿಯಾಲಿಟಿ ಶೋ ಶೂಟಿಂಗ್ ಇಲ್ಲದ ಕಾರಣ ಮನೆಯಲ್ಲಿ ಸೇಫ್ ಆಗಿ ಇದ್ದಾರೆ. ಜೊತೆಗೆ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮನಿಗೂ ವ್ಯಾಯಾಮ ಹೇಳಿಕೊಡುತ್ತಿದ್ದಾರೆ. ತಾವು ತಮ್ಮನೊಂದಿಗೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ತಮ್ಮ ಎಂದ ಮೇಲೆ ಸಣ್ಣ ಪುಟ್ಟ ಜಗಳ ಇರುತ್ತದೆ. ಅವನೊಂದಿಗೆ ಜಗಳವಾಡಲು ಶಕ್ತಿ ಬೇಕಲ್ಲವೇ, ಅದಕ್ಕೆ ಈ ವರ್ಕೌಟ್ ಮಾಡುತ್ತಿದ್ದೇನೆ’ ಎಂದು ಅನುಶ್ರೀ ತಮ್ಮ ಇನ್ಸ್​ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

Advertisement

ಅನುಶ್ರೀ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮಕ್ಕೆ ಬಹಳ ವರ್ಷಗಳಿಂದ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಇದರೊಂದಿಗೆ ಅನೇಕ ಕಾರ್ಯಕ್ರಮಗಳನ್ನೂ ಅವರು ನಡೆಸಿಕೊಟ್ಟಿದ್ದಾರೆ. ಜೊತೆಗೆ AA (ಅನುಶ್ರೀ ಆ್ಯಂಕರ್) ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಈ ಚಾನೆಲ್ ಮೂಲಕ ಅನೇಕ ಸೆಲಬ್ರಿಟಿಗಳ ಸಂದರ್ಶನ ಮಾಡುತ್ತಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದಾರೆ.

Advertisement
Share this on...