ಕನ್ನಡಿಗರಾಗಿ ಅಪರ್ಣಾ ಮಾಡಿರುವ ಈ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

in ಕನ್ನಡ ಮಾಹಿತಿ 55 views

ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುವ ಸ್ವಚ್ಛ ಮನಸ್ಸಿನ ಅಚ್ಚ ಕನ್ನಡತಿ ಎಂದರೆ ಅದು ಅಪರ್ಣಾ. ಸ್ಯಾಂಡಲ್ ವುಡ್ ನ ಸ್ಟಾರ್ ನಿರೂಪಕಿಯರಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವವರು ಅಪರ್ಣ ರವರು.  ಇವರು ಎಷ್ಟೇ ಸಾಧನೆಯ ಶಿಖರವನ್ನು ಏರಿದರು ಸರಳ ಸಜ್ಜನ ಸ್ವಭಾವಿಯಾಗಿದ್ದು ನಮ್ಮ ನಿಮ್ಮೆಲ್ಲರ ಪಕ್ಕದ ಮನೆಯವರಂತೆ ಎನಿಸಿಬಿಡುತ್ತಾರೆ. ಈಗಿನ ಟಿವಿ ನಿರೂಪಕರು ಮತ್ತು ರೇಡಿಯೊ ಜಾಕಿಗಳು ಅವರಿಂದ ಕಲಿಯಬೇಕಾದದ್ದು ತುಂಬಾ ಇದೆ .

Advertisement

 

Advertisement

Advertisement

ಅಪರ್ಣರವರು 1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಂಬರೀಷ್ ಮತ್ತು ಜಯಂತಿ ರವರೊಂದಿಗೆ  ಅಭಿನಯಿಸಿದ್ದಾರೆ.  ಆಲ್ ಇಂಡಿಯಾ ರೇಡಿಯೋದ ನಿರೂಪಕಿಯಾಗಿ 1993 ರಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ . ಏರ್ ಎಫ್ ಎಂ ರೈನ್ ಬೋ ನ  ಮೊದಲ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಡಿಡಿ ಚಂದನದಲ್ಲಿ ಕಾರ್ಯವನ್ನು ನಿರ್ವಹಿಸಿದ್ದಾರೆ .

Advertisement

1998 ರಲ್ಲಿ ದೀಪಾವಳಿಯ ಸಂದರ್ಭದಲ್ಲಿ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಸತತವಾಗಿ ಎಂಟು ಗಂಟೆಗಳ ಕಾಲ ಕನ್ನಡದಲ್ಲಿ ನಿರೂಪಣೆ ಮಾಡಿ ದಾಖಲೆಯನ್ನು ನಿರ್ಮಿಸಿದ್ದಾರೆ. ಇದಲ್ಲದೆ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ . ಇನ್ನು ಮುಕ್ತ , ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳು ಮತ್ತು ಮಸಣದ ಹೂವು,  ಇನ್ಸ್ಪೆಕ್ಟರ್ ವಿಕ್ರಂ ,  ನಮ್ಮೂರ ರಾಜ , ಒಂದಾಗಿ ಬಾಳು , ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು . ಕೇವಲ ಸೀರಿಯಸ್ ಪಾತ್ರಗಳಲ್ಲೇ ಅಭಿನಯಿಸುತ್ತಿದ್ದ ಅಪರ್ಣಾ ಅವರು ಹಾಸ್ಯ ಪಾತ್ರಗಳಲ್ಲೂ ಅಭಿನಯಿಸಬಲ್ಲೆ ಎಂಬುದನ್ನು ಮಜಾ ಟಾಕೀಸ್ನಲ್ಲಿ ನಿರೂಪಿಸಿದ್ದಾರೆ.

ಇವರು ಒನ್ ಆ್ಯಂಡ್ ಓನ್ಲಿ ವರ್ಲಕ್ಷ್ಮಿ ಎಂದೇ  ಜನರ  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಅಪರ್ಣಾ ಅವರು ಒಬ್ಬ ನಿರೂಪಕಿ ಮಾತ್ರ ಅಲ್ಲ ನಾಯಕಿ ಮಾತ್ರ ಅಲ್ಲ ಒಬ್ಬ ಅಲಂಕೃತಗೊಂಡ ಕನ್ನಡತಿ ಎಂದು ಹೇಳಲಾಗುತ್ತಿದೆ .  ಇವರ ವಾಕ್ ಚಾತುರ್ಯಕ್ಕೆ ಸೋಲದವರೇ ಇಲ್ಲ . ಇವರ ವಾಯ್ಸ್ ಅನ್ನು ರೈಲ್ವೆ ನಿಲ್ದಾಣ ಬಸ್ ನಿಲ್ದಾಣ ಹಾಗೂ ಮೆಟ್ರೊ ರೈಲ್ ಗಳಲ್ಲಿ ಕೂಡ ನಾವು ಕೇಳಿರುತ್ತೇವೆ . ಇವರ ಗಂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಇವರ ಹೆಸರು ನಾಗರಾಜ್. ಐವತ್ತು ವರ್ಷಗಳು ದಾಟಿದರೂ ಕೂಡ ಇನ್ನೂ ಹದಿನೆಂಟು ವರ್ಷದ ಯುವತಿಯಂತೆ ಇರುವ ನಮ್ಮ ಅಚ್ಚ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುವ ಸ್ವಚ್ಛ ಮನಸ್ಸಿನ ಕನ್ನಡತಿಗೆ  ಶುಭವಾಗಲಿ ಎಂದು ನಾವು ಹಾರೈಸೋಣ .ಕನ್ನಡಿಗರಾಗಿ ನಿಮಗೂ ಹೆಮ್ಮೆಯೆನಿಸಿದರೆ ಲೈಕ್ ಮಾಡಿ, ಶೇರ್ ಮಾಡಿ..ಕಮೆಂಟ್ ಮಾಡಿ..

 

 

ಕನ್ನಡದ ಬರಹಗಾರರಿಗೆ ಸುವರ್ಣವಕಾಶ.
ನೀವೂ ಕೂಡ ಬರಹಗಾರರಾಗಿದ್ದರೆ, ಬರಹಗಾರರಾಗಿ ಬೆಳೆಯಬೇಕು ಅನ್ನುವವರು, ಕನ್ನಡದಲ್ಲಿ ಬರೆಯುವ ಅಸಕ್ತಿ ಇರುವವರು ನಿಮ್ಮ ಬರಹಗಳನ್ನು 9483444555 ಗೆ ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಲ್ಲಿ ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು..
ಬರಹಗಾರರಿಗೊಂದು ವೇದಿಕೆ ಕಲ್ಪಿಸಿಕೊಡುವ ಪ್ರಯತ್ನ ನಮ್ಮದು

Advertisement
Share this on...