ವರಲಕ್ಷ್ಮಿ ಅಲಿಯಾಸ್ ಅಪರ್ಣಾ ಅವರ ಗಂಡ ಯಾರು ಗೊತ್ತಾ ? ಅವರ ವಯಸ್ಸು ಎಷ್ಟಿರಬಹುದು ?

in ಮನರಂಜನೆ 319 views

ದಶಕಗಳ ಹಿಂದೆ ಅಪರ್ಣಾ ಎಂದರೆ ನೆನಪಾಗುವುದು ಅಚ್ಚ ಕನ್ನಡದಲ್ಲಿ ಮಾತನಾಡುವ ಹೆಮ್ಮೆಯ ಕನ್ನಡತಿ. 90ರ ದಶದಲ್ಲಿ ಡಿ.ಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಕಾರ್ಯಕ್ರಮಗಳ ನಿರೂಪಕರಾಗಿ ಕೆಲಸ ಮಾಡಿ ತಮ್ಮನ್ನು ತಾವು ಸ್ಥಾಪಿಸಿಕೊಂಡ್ಡಿದ್ದರು. ಅವರ ಅಚ್ಛ ಕನ್ನಡದ ನಿರೂಪಣೆ ಎಲ್ಲರಿಗೂ ಬಹಳ ಇಷ್ಟುವಾಗುತ್ತಿತ್ತು. ಅದೆಷ್ಟೋ ಜನರಿಗೆ ತಿಳಿದಿಲ್ಲ ಬೆಂಗಳೂರು ಮೆಟ್ರೊದಲ್ಲಿ ಮಾಡಿದ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ನ ದಾಖಲೆಯ ಪ್ರಕಟಣೆಗಳಿಗಾಗಿ ಅಪರ್ಣಾ ಧ್ವನಿ ನೀಡಿದ್ದಾರೆ ಎಂಬುದು.ಕನ್ನಡದ ದಿಗ್ಗಜ ನಟರಾದ ಡಾ.ವಿಷ್ಣುವರ್ಧನ್, ಅಂಬರೀಶ್, ಆರತಿ, ಜೈಜಗದೀಶ್, ವಜ್ರಮುನಿ, ಪದ್ಮಾವಾಸಂತಿ ಸೇರಿದಂತೆ ಹಲವು ತಾರೆಯರನ್ನು ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟವರು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್. ಇವರು ನಿರ್ದೇಶನದ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಪ್ರತಿಭಾವಂತೆ ಅಪರ್ಣಾ ಅವರು.

Advertisement

Advertisement

1984 ರಲ್ಲಿ ಪುಟ್ಟಣ್ಣ ಕಣಗಲ್ ಅವರ ಚಲನಚಿತ್ರ ಮಸಣದ ಹೂವು ಚಿತ್ರದಲ್ಲಿ ಅಪರ್ಣಾ ತಮ್ಮ ಚೊಚ್ಚಲ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಅಂಬರೀಶ್ ಮತ್ತು ಜಯಂತಿ ಅವರೊಂದಿಗೆ ನಟಿಸಿದ್ದಾರೆ. ಬಳಿಕ ಚಲನಚಿತ್ರಗಳಿಗಾಗಿ ಬಣ್ಣ ಹಚ್ಚಿದ್ದು ಅಪರೂಪ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್.ಎಂ.ರೇನ್ ಬೋದಲ್ಲಿ ರೇಡಿಯೋ ಜಾಕಿ ಆಗಿ ಕಾರ್ಯ ನಿರ್ವಹಿಸಿದ ಅಪರ್ಣಾ, ಡಿಡಿ ಚಂದನ ವಾಹಿನಿಯ ಹಲವು ಕಾರ್ಯಕ್ರಮಗಳಿಗೂ ನಿರೂಪಣೆ ಮಾಡಿದ್ದಾರೆ.

Advertisement

 

Advertisement

ಅಲ್ಲದೆ ದೈನಂದಿನ ಧಾರಾವಾಹಿಗಳಾದ ಮುಕ್ತ , ಮೂಡಲಮನೆ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು. ಆದರೆ ಹೆಚ್ಚು ಜನಪ್ರಿಯತೆ ಗಳಿಸಿದ್ದು ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮದಲ್ಲಿ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಅಪರ್ಣಾ ಅವರಿಗೆ ಕಾಮಿಡಿ ಚಿತ್ರಗಳು ಇದೀಗ ಹುಡುಕಿಕೊಂಡು ಬರುತ್ತಿವೆ..

 

ಅಲ್ಲದೇ ಅಪರ್ಣಾ ಅವರು ಬೆಂಗಳೂರು ಮೆಟ್ರೋ ಅಲ್ಲಿಯೂ ಕೂಡ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಈ ವಿಚಾರ ಅದೆಷ್ಟೋ ಮಂದಿಗೆ ತಿಳಿದಿಲ್ಲ.ನಟಿ ನಿರೂಪಕಿ ಅಪರ್ಣಾ ಅವರು ನಟನೆ ಮತ್ತು ನಿರೂಪಣೆ ಮಾತ್ರವಲ್ಲದೆ ಯಾಗಿಯೂ ಕೂಡ ಸಖತ್ ಹೆಸರು ಮಾಡಿದ್ದಾರೆ. ಇನ್ನು ಅಪರ್ಣಾ ಅವರಿಗೆ ನಲವತ್ತೈದು ವರ್ಷ ತುಂಬಿದ್ದು ಯುವತಿಯಂತೆ ಕಾಣುವ ಅಪರ್ಣಾ ಅವರು ನಾಗರಾಜ್ ಎಂಬುವವರನ್ನು ವರಿಸಿದ್ದು ಅವರು ಇಂಜಿನಿಯರ್ ಆಗಿದ್ದಾರೆ. ಅಪರ್ಣಾ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು ಇವರ ಜೀವನ ಹೀಗೆ ಸುಖದಿಂದ ನೆಮ್ಮದಿಯಿಂದ ಸಾಗಲಿ ಎಂದು ಕೇಳಿಕೊಳ್ಳೋಣ.

Advertisement
Share this on...