ಇನ್ನೂ ಯಂಗ್ ಆಗಿ ಕಾಣುವ ಅಪರ್ಣ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

in ಮನರಂಜನೆ/ಸಿನಿಮಾ 51 views

ಚಂದದ ಮಾತುಗಾರಿಕೆ, ಮಾತಿನಲ್ಲಿನ ಸ್ಪಷ್ಟತೆ, ಸುಲಲಿತ ನಿರೂಪಣೆಯಿಂದ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಹೆಮ್ಮೆಯ ಕನ್ನಡತಿ ಅಪರ್ಣ. ದಿವಂಗತ ಖ್ಯಾತ ನಿರ್ದೇಶಕ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ‘ಮಸಣದ ಹೂವು’ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಾರೆ. ಹತ್ತು ಚಿತ್ರಗಳಲ್ಲಿ ಅಭಿನಯಿಸಿರುವ ಅಪರ್ಣರವರು ನಿರೂಪಣೆಯಲ್ಲಿಯೂ ಕೂಡ ನೇರ, ದಿಟ್ಟ, ನಿರಂತರ. ಬೆಂಗಳೂರು ದೂರದರ್ಶನದಲ್ಲಿ ನಂಬರ್.1 ನಿರೂಪಕಿಯಾಗಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತಾರೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಅನೇಕ ನೇರ ಪ್ರಸಾರಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ಎಲ್ಲರೂ ಮೆಚ್ಚುವಂತೆ ನಡೆಸಿಕೊಳ್ಳುತ್ತಿದ್ದರು. ಅಪರ್ಣ ಯಾವುದೇ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ, ಸಮಾಧಾನವಾಗಿ ಸೊಗಸಾಗಿ ನಿರೂಪಣೆ ಮಾಡುತ್ತಿದ್ದ ಅಪರ್ಣ ನಿರಂತರ ಕಲಿಕೆಯಿಂದ ಉತ್ತಮ ವಾಗ್ಮಿಯಾಗಿ ಕೂಡ ಬೆಳೆದಿದ್ದಾರೆ.

Advertisement


ಒಮ್ಮೆ ಅಬ್ದುಲ್ ಕಲಾಂರವರು ರಾಷ್ಟ್ರಪತಿಗಳಾಗಿದ್ದ ಸಂದರ್ಭದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ಅಪರ್ಣರವರು ರಾಷ್ಟ್ರಪತಿ ಅಬ್ದುಲ್ ಕಲಾಂರವರು ಬಂದಂತಹ ಸಂದರ್ಭದಲ್ಲಿ ಅವರ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು. ಕೆಲವು ಸಂದರ್ಶನಗಳಲ್ಲಿ ಅಪರ್ಣರವರು ಅಬ್ದುಲ್ ಕಲಾಂರವರ ಮುಗ್ಧತೆ, ನಗು ಹಾಗೂ ಅವರ ಸರಳತೆಯನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬದುಕನ್ನ ಸಿಂಪಲ್ಲಾಗಿ ನೋಡುವ ಅಪರ್ಣರವರ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂತಹದ್ದು. ಬದುಕನ್ನು ಅನುಭವಿಸುವ ರೀತಿ ನನ್ನ ತಂದೆ-ತಾಯಿಯಿಂದ ಬಂದ ಕೊಡುಗೆ ಎನ್ನುತ್ತಾರೆ ಅಪರ್ಣ. ಬದುಕನ್ನು ಎಲ್ಲರಂತೆ ನೋಡದೆ ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುವ ಅಪರ್ಣರವರು ಸಣ್ಣ-ಸಣ್ಣ ಸಂಗತಿಗಳಲ್ಲಿ ದೊಡ್ಡ-ದೊಡ್ಡ ಖುಷಿ ಕಾಣುತ್ತಾರೆ.

Advertisement


ಅಪರ್ಣ ಅವರ ಪತಿ ನಾಗರಾಜ್ ವಾಸ್ತರೆ ಕೂಡ ಅಪರ್ಣ ಅವರಿಗೆ ಕೇವಲ ಪತಿ ಮಾತ್ರವಲ್ಲದೆ ತುಂಬಾ ಒಳ್ಳೆಯ ಸ್ನೇಹಿತ ಹಾಗೂ ಗುರು ಆಗಿದ್ದಾರೆ. ನಿಷ್ಕಲ್ಮಶ ನಗುವಿನ ಅಪರ್ಣ ಇಂದಿಗೂ ಚಿರಯೌವನೆ. 2015 ರಲ್ಲಿ ಪ್ರಾರಂಭವಾದ ಸೃಜನ್ ಲೋಕೇಶ್ ರವರು ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲಿ ಅಪರ್ಣ ಅವರು ವರಲಕ್ಷ್ಮಿ ಎಂಬ ಕಾಮಿಡಿ ಪಾತ್ರದಲ್ಲಿ ನಟಿಸಿ ಎಲ್ಲರ ಮನೆಮಾತಾಗಿದ್ದಾರೆ. ಪ್ರಸ್ತುತ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇವಳು ಸುಜಾತ ಎಂಬ ಧಾರಾವಾಹಿಯಲ್ಲಿ ದುರ್ಗಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Advertisement

– ಸುಷ್ಮಿತಾ

Advertisement

Advertisement
Share this on...