ಟಿಕ್ ಟಾಕ್ ಬ್ಯಾನ್ ನಿಂದ ಚೀನಾಗೆ ಎಷ್ಟು ನಷ್ಟ ಆಗಿದೆ ಗೊತ್ತಾ? ಮುಖ್ಯಸ್ಥ ಬಿಚ್ಚಿಟ್ಟ ಸತ್ಯ !

in ಕನ್ನಡ ಮಾಹಿತಿ 33 views

ಭಾರತ ಸರ್ಕಾರ ಚೀನಾ ಮೂಲದ ಟಿಕ್ ಟಾಕ್ ಸೇರಿದಂತೆ 58 ಆ್ಯಪ್ ಗಳನ್ನು ಬ್ಯಾನ್ ‌ಮಾಡಿ ಬಿಟ್ಟಿದೆ. ಇದರಿಂದ ಚೀನಾ ದೇಶದಲ್ಲಿ ದೊಡ್ಡ ಕೋಲಾಹಲ ಉಂಟಾಗಿದ್ದು ಹೀಗೆ ನಿಷೇದವಾಗುತ್ತಿದ್ದಂತೆ ಟಿಕ್ ಟಾಕ್ ಮುಖ್ಯಸ್ಥರು ಸ್ಪಷ್ಟೀಕರಣ ನೀಡಲು ಮುಂದಾಗಿದ್ದಾರೆ, ತಾನು ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತೇನೆ, ಭಾರತದ ಬಳಕೆದಾರರ ವೈಯಕ್ತಿಕ ಮಾಹಿತಿ, ಭಾರತದ ಭದ್ರತೆ ಮತ್ತು ಸಮಗ್ರತೆಗೆ ಯಾವುದೇ ರೀತಿಯಲ್ಲಿ ಕೂಡಾ ಧಕ್ಕೆಯನ್ನುಂಟು ಮಾಡುವುದಿಲ್ಲ ಎನ್ನುತ್ತಿದ್ದಾರೆ ಟಿಕ್ ಟಾಕ್ ಮುಖ್ಯಸ್ಥರು. ಭಾರತ ಸರ್ಕಾರ ನಿಷೇದದ ಆದೇಶದ ನಂತರ ತನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿರುವ ಟಿಕ್ ಟಾಕ್, ಶೀಘ್ರದಲ್ಲೇ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ಯನ್ನು ನೀಡುವುದಾಗಿ ತಿಳಿಸಿದ್ದಾರೆ.

Advertisement

Advertisement

ಈ ಕುರಿತು ಮಾತನಾಡಿರುವ ಅವರು, ಭಾರತದ ಸರ್ಕಾರ ನಮಗೆ ಅವಕಾಶ ನೀಡಿದರೆ, ಸ್ಪಷ್ಟೀಕರಣ ನೀಡಲು ನಾವು ಸಿದ್ಧರಾಗಿದ್ದೇವೆ. ಭಾರತ ದೇಶದ ಕಾನೂನುಗಳನ್ನು ನಾವು ಪಾಲಿಸುತ್ತಿದ್ದು, ಬಳಕೆದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದೇವೆ. ಅದನ್ನು ಚೀನಾ ಅಥವಾ ಇನ್ನಾವುದೇ ದೇಶದೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿಸಿರುವ ಟಿಕ್ ಟಾಕ್ ಮುಖ್ಯಸ್ಥರು, ಇನ್ನು ಮುಂದೆ ಕೂಡಾ ಈ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಟಿಕ್ ಟಾಕ್ ಆಪ್ ನ ಮುಖ್ಯಸ್ಥರಾದ ನಿಖಿಲ್ ಗಾಂಧಿಯವರು, ನಾವು ಭಾರತದ ಸಮಗ್ರತೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ. ಹದಿನಾಲ್ಕು ಭಾಷೆಗಳಲ್ಲಿ ಮಿಲಿಯನ್ ಬಳಕೆದಾರರನ್ನು ಹೊಂದಿದೆ ಈ ಟಿಕ್ ಟಾಕ್‌. ಈ ಆಪ್ ನಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದು, ಅವರಿಗೆ ಸಿನಿರಂಗದಲ್ಲಿ ಜೀವನವನ್ನು ಕಲ್ಪಿಸಿ ಕೊಟ್ಟಿದೆ‌ ಈ ಟಿಕ್ ಟಾಕ್.

Advertisement

Advertisement

ಇದೀಗ ಭಾರತ ದೇಶದಲ್ಲಿ ಟಿಕ್ ಟಾಕ್ ನಿಷೇದ ಆಗಿರುವುದರಿಂದ ಅದೇಷ್ಟೋ ಪ್ರತಿಭೆಗಳ ಜೀವನಕ್ಕೆ ತೊಂದರೆ ಆಗಬಹುದು. ಚೀನಾ ದೇಶ ಬಿಟ್ಟರೆ ಅತಿ ಹೆಚ್ಚು ಟಿಕ್ ಟಾಕ್ ಬಳಸುವ ದೇಶ ಎಂದರೆ ಅದು ಭಾರತ ದೇಶ. ಭಾರತದಲ್ಲಿ ಜನಸಂಖ್ಯೆ ಹೆಚ್ಚು ಇರುವುದರಿಂದ ಚೀನಾದ ಟಿಕ್ ಟಾಕ್ ಗೆ ಭಾರತ ಒಂದು ದೊಡ್ಡ ಆದಾಯದ ಮೂಲವಾಗಿತ್ತು.ಇನ್ನು ಟಿಕ್ ಟಾಕ್ ಭಾರತಕ್ಕೆ ಬಂದಿದ್ದು 2017 ರಲ್ಲಿ, 2019 ರ ವೇಳೆಗೆ ಭಾರತದಲ್ಲಿ ಟಿಕ್ ಟಾಕ್ 8.1 ಕೋಟಿ ಬಳಕೆದಾರರನ್ನು ಹೊಂದಿತ್ತು. ಕಳೆದ ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ 25 ಕೋಟಿ ಆದಾಯಗಳಿಸಿದ್ದ ಟಿಕ್ ಟಾಕ್, ಮುಂಬರುವ ಅಂದರೆ ಜುಲೈ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 100 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿತ್ತು ಎನ್ನಲಾಗಿದೆ. ಆದರೆ ಭಾರತ ಟಿಕ್ ಟಾಕ್ ಬ್ಯಾನ್ ಮಾಡುವ ಮೂಲಕ ಚೀನಾಕ್ಕೆ ಒಂದು ದೊಡ್ಡ ಹೊಡೆತವನ್ನು ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Advertisement
Share this on...