police department hiring

ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

in ಕನ್ನಡ ಮಾಹಿತಿ 936 views

ರಾಜ್ಯ ಪೊಲೀಸ್ ಇಲಾಖೆಯು ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ), ಇ.ಇ.ಜಿ ತಂತ್ರಜ್ಞರು, ಪ್ರಯೋಗಾಲಯ ಸೇವಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

Advertisement

ಹುದ್ದೆಗಳ ವಿವರ :
ಪ್ರಯೋಗಾಲಯ ಸೇವಕರು- 30(ಕಲ್ಯಾಣ ಕರ್ನಾಟಕ-7)
ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) -1
ಇಇಜಿ ತಂತ್ರಜ್ಞರು- 6 (ಕಲ್ಯಾಣ ಕರ್ನಾಟಕ-1)

Advertisement

Advertisement

ವಿದ್ಯಾರ್ಹತೆ :
➤ ಇ.ಇ.ಜಿ ತಂತ್ರಜ್ಞರು
• ವಿಜ್ಞಾನ ಪದವಿ ಹೊಂದಿರಬೇಕು.
• ಇ.ಇ.ಜಿ ತಾಂತ್ರಿಕ ಕೋರ್ಸ್/ಮೆಡಿಕಲ್ ಲ್ಯಾಬ್ರೆಟರಿ ಟೆಕ್‌ಕೋರ್ಸ್ನಲ್ಲಿ ಡಿಪ್ಲೋಮಾ ಪದವಿ
• ಯಾವುದೇ ಇತರೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
➤ ಪ್ರಯೋಗಾಲಯ ಸಹಾಯಕ
• ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು
• ಕನಿಷ್ಠ ಒಂದು ವರ್ಷ ಪ್ರಾಯೋಗಿಕ ಅನುಭವವನ್ನು ಡಿಜಿಟಲ್ ಪೋಟೋಗ್ರಫಿ ಉಪಕರಣಗಳ ನಿರ್ವಹಣೆಯನ್ನು ವಿಡಿಯೋಗ್ರಫಿ ಸಹಿತ ಹೊಂದಿರಬೇಕು.

Advertisement

• ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದಿಂದ ಮಾನ್ಯತೆ ಹೊಂದಿರುವಂತಹ ಸಂಸ್ಥೆಗಳಿಂದ ಹೊಂದಿರತಕ್ಕದ್ದು.
➤ ಪ್ರಯೋಗಾಲಯ ಸೇವಕರು
• ಪಿಯುಸಿ ಅಥವಾ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು
• ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ :
25.11.2020ಕ್ಕೆ ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು. ಸಾಮಾನ್ಯ ವರ್ಗ – 35 ವರ್ಷ, 2ಎ, 2ಬಿ, 3ಎ, 3ಬಿ – 38 ವರ್ಷ, ಪ.ಜಾ / ಪ.ಪಂ / ಪ್ರವರ್ಗ-1 – 40 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27-10-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-11-2020
ಶುಲ್ಕ ಪಾವತಿಸಲು ಕೊನೆ ದಿನಾಂಕ : 27-11-2020

ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ರೂ.250. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100. ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಚಲನ್ ಮೂಲಕ ಪಾವತಿಸಬಹುದು.

ವೇತನ ಶ್ರೇಣಿ :

➤ ಪ್ರಯೋಗಾಲಯ ಸೇವಕರು:
18600-450-20400-500-22400-550-24600-600-27000-650-29600-750-32600
➤ ಇಇಜಿ ತಂತ್ರಜ್ಞರು
27650-650-29600-750-32600-850-36000-950-39800-1100-46400-1250-52650
➤ ಪ್ರಯೋಗಾಲಯ ಸಹಾಯಕರು
21400-500-22400-550-24600-600-27000-650-29600-750-32600-850-36000-950-
39800-1100-42000

ಸಿ) ಪಿಂಚಣಿ ಸೌಲಭ್ಯ :- ಸರ್ಕಾರದ ಆದೇಶ ಪಿಇಟಿ2006 ರಂತೆ
ನೂತನ ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು.

➤ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು,  ಅರ್ಜಿ ಸಲ್ಲಿಸಲು ಈ ವೆಬ್ಸೈಟ್ ಲಿಂಕ್‌ಗೆ   ಭೇಟಿ ನೀಡಿ

1. http://fsl45p.ksp-online.in/

2. https://rb.gy/wcyyrb

Advertisement
Share this on...