ಪ್ರಿಯತಮನ ಜೊತೆ ‘ಅರಗಿಣಿ’ ಖ್ಯಾತಿಯ ನಟಿ ಎಂಗೇಜ್…!

in ಮನರಂಜನೆ 330 views

ಇಂದು ಸಿನಿಮಾದಷ್ಟೇ ಸೀರಿಯಲ್ ಗಳು ಜನಪ್ರಿಯತೆ ಪಡೆದುಕೊಂಡಿವೆ. ಸಂಜೆಯಾದರೆ ಸಾಕು ಮಹಿಳೆಯರು ಟಿವಿ ಆನ್ ಮಾಡಿ ತಮ್ಮಗೆ ಇಷ್ಟವಾದ ಧಾರವಾಹಿಯನ್ನ ಹಾಕಿಕೊಂಡು ನೋಡುತ್ತಾರೆ. ಸೀರಿಯಲ್ ಮುಗಿದರೂ ಸಹ ಅದರಲ್ಲಿ ಅಭಿನಯಿಸುತ್ತಿರುವ ಪ್ರತಿಯೊಂದು ಪಾತ್ರವನ್ನ ಪ್ರೇಕ್ಷಕರು ಮರೆಯುವುದಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಸೀರಿಯಲ್ ಗಳು ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ಸೀರಿಯಲ್ ನಟಿಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Advertisement

 

Advertisement

 

Advertisement
View this post on Instagram

 

Advertisement

Just showing off the ring wen someone else asked?… #navarun #engagementring #engagementphotos ?: @pixelchroniclesproduction

A post shared by Navya Rao (@navya_rao_g) on

2013ರಲ್ಲಿ ಖಾಸಗಿ ವಾಹಿನಿಯಲ್ಲಿ ಅರಗಿಣಿ ಎಂಬ ಸೀರಿಯಲ್ ಪ್ರಸಾರವಾಗುತ್ತಿತ್ತು. ಅಂದು ಈ ಧಾರವಾಹಿ ತುಂಬಾ ಜನಪ್ರಿಯವಾಗಿತ್ತು. ಈ ಧಾರವಾಹಿಯ ಮುಖ್ಯಭೂಮಿಕೆಯಲ್ಲಿ ನಟಿ ಮೇಘನಾ ಹಾಗೂ ಹರೀಶ್ ನಟಿಸಿದ್ದರು. ಮೇಘನಾ- ಹರೀಶ್ ಎನ್ನುವುದಕ್ಕಿಂತ ಖುಷಿ-ಸಿದ್ದಾರ್ಥ್ ಎಂದರೆ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಇನ್ನೂ ನೆಗೆಟಿವ್ ಪಾತ್ರದಲ್ಲಿ ಹೀರೋ ಸಿದ್ದಾರ್ಥ್ ಗರ್ಲ್ ಫ್ರೆಂಡ್ ಆಗಿ ನವ್ಯ ರಾವ್ ಪೂಜಾ ಸಿಂದ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿದ್ದಾರ್ಥ್ ಮತ್ತು ಖುಷಿಯ ಮಧ್ಯೆ ವಿಲನ್ ಆಗಿ ಪೂಜಾ ಸಿಂಧ್ಯಾ ತೆರೆಮೇಲೆ ಮಿಂಚಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.

 

 

ನವ್ಯ ಸ್ನೇಹಿತರೊಬ್ಬರ ಮದುವೆಯಲ್ಲಿ ವರುಣ್ ಎಂಬುವವರನ್ನ ಭೇಟಿ ಮಾಡಿದ್ದರು. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ನಂತರ ವರುಣ್ ನವ್ಯರವರಿಗೆ ಪ್ರಪೋಜ಼್ ಮಾಡಿದ್ದಾರೆ. ಆಗ ನವ್ಯ ಕೂಡ ಅವರ ಪ್ರೀತಿಯನ್ನ ಒಪ್ಪಿಕೊಂಡಿದ್ದು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರ ತಿಳಿಸಿದ್ದಾರೆ. ಎರಡು ಮನೆಯವರು ಕೂಡ ಖುಷಿಯಿಂದ ಒಪ್ಪಿಕೊಂಡು ಬೇಗ ಮದುವೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆಯೇ ಕಳೆದ ಮಾರ್ಚ್ 18ರಂದು ಬೆಂಗಳೂರಿನ ನಂದನ ಹೋಟೆಲ್ ನಲ್ಲಿ ಅದ್ದೂರಿಯಾಗಿ ನವ್ಯ ಹಾಗೂ ವರುಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಇವರಿಬ್ಬರ ಪರಿಚಯ ಆಗಿ ಕೇವಲ 8 ತಿಂಗಳು ಕಳೆದಿವೆ ಅಷ್ಟು ಬೇಗ ಮದುವೆಯಾಗುತ್ತಿದ್ದಾರೆ.

 

 

View this post on Instagram

 

In love with this pic… caption this ❣️ Photography: @pixelchroniclesproduction

A post shared by Navya Rao (@navya_rao_g) on

ನಮ್ಮಿಬ್ಬರ ಮನೆಯಲ್ಲಿ ಯಾವುದೇ ಆಕ್ಷೇಪ ಇಲ್ಲದೆ ನಮ್ಮ ಪ್ರೀತಿಯನ್ನ ಒಪ್ಪಿಕೊಂಡಿದ್ದಾರೆ. ಅಲ್ಲದೆ ಸುಮ್ಮನೆ ಯಾಕೆ ಪ್ರೇಮಿಗಳಾಗಿ ಸುತ್ತಾಡುತ್ತಿರುತ್ತೀರಾ ಬೇಗ ಮದುವೆಯಾಗಿ ಅಂತ ಮನೆಯಲ್ಲಿ ಹೇಳಿದರು. ಅದಕ್ಕೆ ಇಷ್ಟು ಬೇಗ ಮದುವೆಯಾಗುತ್ತಿದ್ದೀವಿ ಅಂತ ನವ್ಯ ಹೇಳಿದ್ದಾರೆ. ನಟಿ ನವ್ಯಾ ಮೊದಲಿಗೆ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಅವರಿಗೆ ‘ಅರಗಿಣಿ’ ಧಾರವಾಹಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲು ಅವಕಾಶ ಬಂದಿತ್ತು. ಈ ಮೂಲಕ ನವ್ಯ ಕಿರುತೆರೆಗೆ ಕಾಲಿಟ್ಟರು. ನಟನೆಯ ಜೊತೆಗೆ ನವ್ಯ ಎಂ.ಕಾಂ‌. ಪದವಿ ಕೂಡ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಸೀರಿಯಲ್ ನಲ್ಲೂ ನವ್ಯ ಅಭಿನಯಿಸಿದ್ದಾರೆ.

 

ಸದ್ಯಕ್ಕೆ ನವ್ಯ ರಾಮ-ಸೀತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನವ್ಯ ತಾಯಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಭಾವಿಪತಿ ವರುಣ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಸದ್ಯಕ್ಕೆ ಕೊರೋನಾ ವೈರಸ್ ಸಮಸ್ಯೆ ಮುಗಿದ ನಂತರ ಜೂನ್ 7 ಮತ್ತು 8 ರಂದು ಬೆಂಗಳೂರಿನಲ್ಲಿಯೇ ಈ ಜೋಡಿ ಮದುವೆಯಾಗಲಿದೆ ಅಂತ ತಿಳಿದುಬಂದಿದೆ.

– ಸುಷ್ಮಿತಾ

Advertisement