ಕೊರೊನಾ ಬಾರದಂತೆ ಹೇಗೆ ಜಾಗರೂಕರಾಗಿರಬೇಕೆಂದು ಹೇಳಿದ ಅರಸನಕೋಟೆ ಅಖಿಲಾಂಡೇಶ್ವರಿ

in ಮನರಂಜನೆ/ಸಿನಿಮಾ 247 views

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚಂದನವನದ ಚೆಂದದ ನಟಿ ವಿನಯಪ್ರಸಾದ್ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ಜನಪ್ರಿಯರಾಗಿರುವ ವಿನಯ ಪ್ರಸಾದ್ ವೀಕ್ಷಕರಿಗೆ ಜಾಗರೂಕರಾಗಿರಿ ಎಂಬ ಮನವಿ ಮಾಡಿದ್ದಾರೆ. ಲಾಕ್ ಡೌನ್ ನಂತರ ಶೂಟಿಂಗ್ ಆರಂಭವಾಗಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿ ವಿನಯಪ್ರಸಾದ್ ಅವರು ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು ಅವರು ಕೂಡಾ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಿ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ‌. ಮತ್ತು ಜನರಿಗೂ ಸದಾ ಜಾಗರೂಕರಾಗರಿ ಎಂದು ಹೇಳಿರುವ ವಿನಯ ಪ್ರಸಾದ್ ಯಾವ ರೀತಿಯಲ್ಲಿ ನಮ್ಮನ್ನು ನಾವು ಜಾಗಾರೂಕರಾಗಿಡಬೇಕು ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಹರಡದಂತೆ ಮಾಸ್ಕ್ ಧರಿಸಬೇಕಾದುದು ಅತೀ ಮುಖ್ಯ. ಮಾಸ್ಕ್ ಹೊರತಾಗಿ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸಲೇ ಬೇಕು. ಹೊರಗಿನಿಂದ ಬಂದ ಕೂಡಲೇ ಮರೆಯದೇ ಸ್ಯಾನಿಟೈಸರ್ ಉಪಯೋಗಿಸಲೇ ಬೇಕು. ಅದರಲ್ಲೂ ಮುಖ್ಯವಾದ ಸಂಗತಿಯೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಲೇಬಾರದು ಎಂದು ಹೇಳಿದ್ದಾರೆ ವಿನಯ ಪ್ರಸಾದ್.

Advertisement

Advertisement

ಇದರ ಜೊತೆಗೆ ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು ಕೂಡಾ ತುಂಬಾ ಒಳ್ಳೆಯದು. ಬಿಸಿ ನೀರಿನ ಹಬೆಗೆ  ಕೊರೊನಾ ವೈರಸ್ ನ್ನು ದೂರ ಮಾಡುವ ಇದು ತುಂಬಾ ಪರಿಣಾಮಕಾರಿಯಾದುದು ಹೌದು. ನಾನು ಕೂಡಾ ತಪ್ಪದೇ ಬಿಸಿ ನೀರಿನ ಹಬೆ ತೆಗೆದುಕೊಳ್ಳುತ್ತೇನೆ. ಈ ರೀತಿ ಜಾಗಾರೂಕರಾಗಿರುವುದರಿಂದ ವೈರಸ್ ನಮ್ಮ ದೇಹದೊಳಗೆ ಬಾರದಂತೆ ತಡೆಯಬಹುದು ಎಂದಿದ್ದಾರೆ ಅರಸನಕೋಟೆ ಅಖಿಲಾಂಡೇಶ್ವರಿ.

Advertisement

ಸಾವಿತ್ರಿ ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿರುವ ವಿನಯ ಪ್ರಸಾದ್ ಅವರು ಮುಂದೆ ಶಕ್ತಿ, ಸ್ತ್ರೀ, ನಂದಗೋಕುಲ, ಬಂಗಾರ, ನಿತ್ಯೋತ್ಸವ, ಸುಂದರಿ ಧಾರಾವಾಹಿಗಳಲ್ಲಿ ನಟಿಸಿರುವ ಇವರು ಸದ್ಯ ವೀಕ್ಷಕರ ಪ್ರೀತಿಯ ಅಖಿಲಾಂಡೇಶ್ವರಿ. ಇದರ ಜೊತೆಗೆ ಮಲಯಾಳಂ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿದ ವಿನಯ ಪ್ರಸಾದ್ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಜಿ.ವಿ.ಅಯ್ಯರ್ ಅವರ ಮಧ್ವಾಚಾರ್ಯ ಸಿನಿಮಾ.

Advertisement

ನಂತರ ಕಾಲೇಜು ಹೀರೋ, ಗಣೇಶನ ಮದುವೆ, ಪೋಲಿಸನ ಹೆಂಡ್ತಿ, ನೀನು ನಕ್ಕರೆ ಹಾಲು ಸಕ್ಕರೆ, ಗೌರಿ ಗಣೇಶ, ಮೈಸೂರು ಜಾಣ, ಸೂರ್ಯೋದಯ, ಯಾರಿಗೂ ಹೇಳ್ಬೇಡಿ, ಕಲ್ಯಾಣೋತ್ಸವ, ಮುತ್ತಿನಂಥ ಹೆಂಡತಿ, ಮಹಾ ಎಡಬಿಡಂಗಿ ಸಿನಿಮಾಗಳಲ್ಲಿ ವಿನಯ ಪ್ರಸಾದ್ ಅವರು ಅಭಿನಯಿಸಿದ್ದಾರೆ.

ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಕಮಾಲ್ ಮಾಡುತ್ತಿರುವ ವಿನಯ ಪ್ರಸಾದ್ ನಿರೂಪಕಿಯಾಗಿಯೂ ಮನೆ ಮಾತಾಗಿದ್ದಾರೆ. ಇದರ ಜೊತೆಗೆ ಗಾಯಕಿಯಾಗಿಯೂ ವಿನಯ ಪ್ರಸಾದ್ ಗುರುತಿಸಿಕೊಂಡಿದ್ದಾರೆ.
– ಅಹಲ್ಯಾ

Advertisement
Share this on...