ಒಂದು ಮುತ್ತಿನ ಕಥೆ ಚಿತ್ರದ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ….?

in ಕನ್ನಡ ಮಾಹಿತಿ/ಸಿನಿಮಾ 772 views

ಡಾ. ರಾಜ್ ಕುಮಾರ್ ಅವರ ಸಾಹಸಮಯ ನಟನೆಯ ಒಂದು ಮುತ್ತಿನ ಕಥೆಯ ಕಥಾನಾಯಕಿ ಅರ್ಚನಾ. ತಮ್ಮ ನಿರ್ದೇಶನದ ಒಂದು ಮುತ್ತಿನ ಕಥೆ ಚಿತ್ರಕ್ಕೆ ಶಂಕರ್ ನಾಗ್ ರವರು ಅರ್ಚನಾರವರೇ ಈ ಪಾತ್ರಕ್ಕೆ ಕರೆಕ್ಟ್ ಎಂದು ಒಂದು ಮುತ್ತಿನ ಕಥೆ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದರು.  ನಟಿ ಅರ್ಚನಾರವರು ಹುಟ್ಟಿದ್ದು ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ. ಕುಚುಪುಡಿ ಹಾಗೂ ಕಥಕ್ಕಳಿ ನೃತ್ಯವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಅರ್ಚನಾ 80-90 ರ ಸಿನಿರಸಿಕರಿಗೆ ತುಂಬಾನೇ ಪರಿಚಯ. ಒಂದು ಮುತ್ತಿನ ಕಥೆ ಚಿತ್ರದ ನಂತರ ಬ್ಲಾಕ್ ಬ್ಯೂಟಿ ಅರ್ಚನಾ ‘ಗುರಿ’ ಚಿತ್ರದಲ್ಲಿ ಮತ್ತೆ ಡಾ. ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ ಇನ್ನು ಮುಂತಾದ ಸಿನಿಮಾಗಳನ್ನು ಇತ್ತೀಚಿನ ವರ್ಷಗಳಲ್ಲಿ ನಿರ್ದೇಶಿಸಿದ ನಿರ್ದೇಶಕ ಪಿ. ವಾಸು ರವರು ‘ಗುರಿ’ ಚಿತ್ರವನ್ನು ನಿರ್ದೇಶಿಸಿದ್ದರು. ನಂತರದಲ್ಲಿ ನಟಿ ಅರ್ಚನಾ ಟೈಗರ್ ಪ್ರಭಾಕರ್ ಅವರ ಜೊತೆಯಲ್ಲಿ ಬೆಳ್ಳಿನಾಗ ಹಾಗೂ ಪ್ರೇಮಿಗಳ ಸವಾಲ್ ಚಿತ್ರಗಳಲ್ಲಿ ನಟಿಸಿದ್ದರು.

Advertisement

 

Advertisement

Advertisement

ನಟಿ ಅರ್ಚನಾ ನಟಿಸಿದ್ದ ಕನ್ನಡದ ಕಟ್ಟಕಡೆಯ ಚಿತ್ರ ಹುಲಿಯಾ. ನಟ ದೇವರಾಜ್ ನಾಯಕ ನಟರಾಗಿ ಅಭಿನಯಿಸಿದ ಈ ಚಿತ್ರ 1996ರಲ್ಲಿ ತೆರೆಕಂಡಿತ್ತು. ಹುಲಿಯಾ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಕಥಾವಸ್ತುವುಳ್ಳ ಚಿತ್ರವಾಗಿ ಮೂಡಿಬಂದಿತ್ತು. ಅರ್ಚನಾರವರು ಕನ್ನಡದಲ್ಲಿ ಕೇವಲ ಐದು ಚಿತ್ರಗಳಲ್ಲಿ ನಟಿಸಿದ್ದರೂ ಅಂದಿನ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು. ಇಂದಿಗೂ ಒಂದು ಮುತ್ತಿನ ಕಥೆ ಎಂದರೆ ತಟ್ಟನೆ ನಟಿ ಅರ್ಚನಾರವರು ಕೂಡ ನೆನಪಾಗುತ್ತಾರೆ. ಅರ್ಚನಾರವರ ನಾಜೂಕಿನ ನಟನೆಯನ್ನು ಡಾ. ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಮೆಚ್ಚಿಕೊಂಡಿದ್ದರು. ತಮಿಳು, ತೆಲುಗು, ಮಲೆಯಾಳಂನಲ್ಲಿ ನಟಿ ಅರ್ಚನಾರವರು ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಾಲಿ ಹಾಗೂ ಹಿಂದಿಯಲ್ಲಿಯೂ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

ಎಲ್ಲಾ ಭಾಷೆಗಳಲ್ಲಿಯೂ ನಟಿ ಅರ್ಚನಾ ಕಲಾತ್ಮಕ ಹಾಗೂ ಪ್ರಯೋಗಾತ್ಮಕ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿರುವುದು ವಿಶೇಷ. ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈ ನಟಿ ಇಂದಿಗೂ ತಮಿಳು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಒಂದು ಮುತ್ತಿನ ಕಥೆ ಚಿತ್ರದ ನಟಿ ಅರ್ಚನಾ.

– ಸುಷ್ಮಿತಾ

Advertisement
Share this on...