ಹೆಚ್ಚು ಇಂಟರ್‍ನೆಟ್ ಬಳಕೆ ಮಾಡ್ತಿರಾ ? ಹಾಗಾದ್ರೆ ನಿಮಗೆ ಸದ್ಯದಲ್ಲೇ ಎದುರಾಗಲಿದೆ ಶಾಕ್‌.!

in ಕನ್ನಡ ಮಾಹಿತಿ 42 views

ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಲ್ಲಿ ಭಾರತೀಯ ಟೆಲಿಕಾಂ ಉದ್ಯಮವು ಒಂದು. ಇದು ತನ್ನ ಅಸ್ಥಿತ್ವವನ್ನು ಉಳಿಸಿಕೊಳುವ ಸಲುವಾಗಿ ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ದರ ಹೆಚ್ಚಳ ಮಾಡಲಿದೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡುತ್ತಿದೆ. ಹೌದು, ಈಗಾಗಲೇ ವಿಶ್ವದಲ್ಲೇ ನಮ್ಮ ಭಾರತದಲ್ಲಿಅತೀ ಕಡಿಮೆ ಬೆಲೆಗೆ ಮೊಬೈಲ್ ಡೇಟಾ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ಇದೀಗ ಈ ಸೇವೆಗಳು ದುಬಾರಿಯಾಗಲಿದೆ ಎಂದು ವರದಿಯೊಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಈಗಾಗಲೇ ಭಾರತದ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ದರ ಹೆಚ್ಚಿಸುವಂತೆ ಪ್ರಸ್ತಾವನೆ ನೀಡಿದೆ.

Advertisement

 

Advertisement

Advertisement

 

Advertisement

ಈಗಾಗಲೇ ಮೊಬೈಲ್ ದರಗಳು ಅಗ್ಗದಲ್ಲಿದ್ದು, ಇದರಿಂದ ಕಂಪೆನಿಗಳು ಭಾರೀ ನಷ್ಟಕ್ಕೊಳಗಾಗುತ್ತಿವೆಯಂತೆ. ಹೀಗಾಗಿ ಹಿಂದಿನ ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವಂತೆ ಟೆಲಿಕಾಂ ಕಂಪೆನಿಗಳು ಟ್ರಾಯ್ನ್ ಒತ್ತಾಯಿಸುತ್ತಿದೆ. ಈಗ ದೇಶದಲ್ಲಿ ಪ್ರತಿ 1ಜಿಬಿ 4G ಡೇಟಾವನ್ನು ಕೇವಲ 3.5 ರೂ. ದರದಲ್ಲಿ ನೀಡಲಾಗುತ್ತಿದೆ. ಅಕಸ್ಮಾತ್‌ ಟೆಲಿಕಾಂ ಕಂಪೆನಿಗಳು ಕನಿಷ್ಠ ದರ ನಿಗದಿಪಡಿಸಲು ಆಗ್ರಹಿಸಿದರೆ, ಮುಂದಿನ ದಿನಗಳಲ್ಲಿ ಇಂಟರ್ನೆಟ್ ದರವು ಈಗಿರುವುದಕ್ಕಿಂತ 5 ರಿಂದ 10 ಪಟ್ಟು ಏರಿಕೆಯಾಗಲಿದೆ.

 

 

Image result for telecom companies in india

 

 

ಇವೆಲ್ಲವನ್ನು ನಾವು ಗಮನಿಸಿದರೆ ನಾವು ಬಳಸುವ ಇಂಟರ್‌ ನೆಟ್‌ ಗೆ ಪ್ರತಿ ಜಿಬಿಗೆ ಬಳಕೆದಾರನು ಕನಿಷ್ಠ 35 ರೂ. ಪಾವತಿಸಬೇಕಾಗಬರಬಹುದು. ಈಗಾಗಲೇ ಇಂತಹದೊಂದು ಪ್ರಸ್ತಾವನೆಯನ್ನು ವೊಡಾಫೋನ್-ಐಡಿಯಾ ಸಲ್ಲಿಸಿದ್ದು, ಸಾಲ ಹೊರೆಯಿಂದ ಕಂಪೆನಿಯನ್ನು ಮೇಲೆತ್ತಲು ಕನಿಷ್ಠ 1 ಜಿಬಿ ದರ 35 ರೂ. ನಿಗದಿ ಮಾಡುವಂತೆ ಆಗ್ರಹಿಸಿದೆ. ಅಲ್ಲದೇ ಇದೇ ಏರ್ಟೆಲ್ ಕಂಪೆನಿ ಕೂಡ ಪ್ರತಿ ಜಿಬಿ 30 ರೂ. ನಿಗದಿ ಮಾಡುವಂತೆ ಟ್ರಾಯ್ಗೆ ಪ್ರಸ್ತಾವನೆ ಸಲ್ಲಿಸಿದೆ. ಹಾಗೆಯೇ ಪ್ರತಿ ಜಿಬಿಗೆ ಕ್ರಮೇಣ 20 ರೂ. ವಿಧಿಸಲು ರಿಲಯನ್ಸ್ ಜಿಯೋ ಕಂಪೆನಿ ಕೂಡ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್, ಪ್ರಸ್ತುತ ಟೆಲಿಕಾಂ ಕಂಪೆನಿಗಳ ಸಾಲದ ಹೊರೆಯನ್ನು ನಿಯಂತ್ರಿಸಲು ಬೆಲೆ ಏರಿಕೆ ಅಲ್ಲದೆ ಬೇರೊಂದು ಆಯ್ಕೆ ಇಲ್ಲ ಎಂದು ತಿಳಿಸಿದೆ. ಅಕಸ್ಮಾತ್‌ ಇದು ಹೀಗೆ ಮುಂದುವರೆದರೆ ನಮ್ಮೆಲ್ಲರಿಗೂ ಬೆಲೆ ಏರಿಕೆ ಬಿಸಿ ತಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ.

 

“ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯಾಲಯ” ಪ್ರೀತಿ-ಪ್ರೇಮ ವಿಚಾರದಲ್ಲಿ, ನೀವು ಇಷ್ಟ ಪಟ್ಟವರು ನಿಮ್ಮಂತ ಆಗಲು ಕರೆಮಾಡಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ . ಡಾ. ಪವನ್ ಶರ್ಮ ಗುರೂಜಿ 9535242057

Advertisement
Share this on...