ಅರ್ಜುನ್ ಸರ್ಜಾ ಬೇರೆಯವರಿಗಿಂತ ವಿಭಿನ್ನವಾಗಿ ಕಾಣುತ್ತಾರೆ …ಹೇಗೆ ನೀವೆ ನೋಡಿ..!

in ಮನರಂಜನೆ 79 views

ಕೆಲವು ಸಿನಿಮಾ ನಟರು ತುಂಬಾ ಸರಳವಾಗಿ ಇರುತ್ತಾರೆ. ತಮ್ಮ ಸ್ಟಾರ್ ಗಿರಿ ಪಕ್ಕಕ್ಕಿಟ್ಟು ಸಾಮಾನ್ಯರಂತೆ ಬದುಕುತ್ತಾರೆ. ಜನ ಸಾಮಾನ್ಯರಲ್ಲಿ ಬೆರೆಯುತ್ತಾರೆ. ಸಿಂಪಲ್ ಜೀವನ ಬಯಸುತ್ತಾರೆ. ನಮ್ಮಂತೆ ಸಣ್ಣ-ಸಣ್ಣ ಕೆಲಸಗಳಲ್ಲಿ ಖುಷಿ ಕಾಣುತ್ತಾರೆ. ಸುಮ್ಮನೆ ಸಮಯ ಕಳೆಯದೆ ಪ್ರತಿ ನಿಮಿಷವೂ ಕ್ರಿಯಾಶೀಲರಾಗಿರುತ್ತಾರೆ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತಮ್ಮ ಆಕ್ಷನ್ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ನಟ ಅರ್ಜುನ್ ಸರ್ಜಾ. ಅರ್ಜುನ್ ಸರ್ಜಾರವರ ಇನ್ನೊಂದು ಹೆಸರು ಶ್ರೀನಿವಾಸ ಸರ್ಜಾ. ಆಗಸ್ಟ್ 15, 1964 ರಂದು ತುಮಕೂರಿನ ಮಧುಗಿರಿಯಲ್ಲಿ ಜನಿಸಿದರು. ಇವರ ತಂದೆ ಶಕ್ತಿಪ್ರಸಾದ್ ತಾಯಿ ಲಕ್ಷ್ಮೀದೇವಮ್ಮ. ಇವರ ಹೆಂಡತಿಯ ಹೆಸರು ನಿವೇದಿತಾ. ಇವರಿಗೆ ಐಶ್ವರ್ಯ, ಆಂಜನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬಹು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ದೇಹವನ್ನು ದಂಡಿಸಿ ತುಂಬಾ ಫಿಟ್ ಆಗಿ ಯಂಗ್ ಆಗಿ ಕಾಣುವ ಅಪ್ಪಟ ಹನುಮಂತನ ಅಪಾರ ದೈವಭಕ್ತ ನಟ ಅರ್ಜುನ್ ಸರ್ಜಾ. ಕೇವಲ ನಾಯಕ ನಟರಾಗಿ ಮಾತ್ರವಲ್ಲದೆ ಕ್ರಿಯಾಶೀಲ ನಿರ್ದೇಶಕರಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Advertisement


ಸಿನಿಮಾ ಹೊರತು ಪಡಿಸಿ ಕೂಡ ಅರ್ಜುನ್ ಸರ್ಜಾ ತುಂಬಾ ಕ್ರಿಯಾಶೀಲ, ಮಾನವೀಯತೆಯ ಹಾಗೂ ಹೃದಯವಂತಿಕೆಯ ವ್ಯಕ್ತಿ. ಸಿನಿಮಾಗಳ ಬಿಡುವಿನಲ್ಲಿ ಅರ್ಜುನ್ ಸರ್ಜಾ ಚೆನ್ನೈನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ಹೋಗುತ್ತಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಹಸುಗಳನ್ನು ಸಾಕಿರುವ ಅರ್ಜುನ್ ಸರ್ಜಾ ತಮ್ಮ ಹಸುಗಳ ಮೇಲೆ ತುಂಬಾ ಪ್ರೀತಿ ಹಾಗೂ ಕಾಳಜಿ ತೋರುತ್ತಾರೆ. ತಾವು ಸಾಕಿರುವಂತಹ ಹಸುಗಳಿಗೆ ಅರ್ಜುನ್ ಸರ್ಜಾ ಒಂದು ಟಿವಿಎಸ್ ಎಕ್ಸೆಲ್ ನಲ್ಲಿ ಹುಲ್ಲು ತರುತ್ತಾರೆ. ಹಸುಗಳಿಗೆ ಹುಲ್ಲು ಹಾಕಿ ಹಸುಗಳನ್ನು ಅಪ್ಪಿಕೊಂಡು ಮುದ್ದಿಸುತ್ತಾರೆ. ಅರ್ಜುನ್ ಸರ್ಜಾ ಕೇವಲ ತಮ್ಮ ಫಾರ್ಮ್ ಹೌಸ್ ನಲ್ಲಿರುವ ಹಸುಗಳನ್ನು ಮಾತ್ರ ಸಾಕುತ್ತಿಲ್ಲ. ತಮಿಳುನಾಡಿನ ಹಲವೆಡೆ ಗೋ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ.

Advertisement

Advertisement

 

Advertisement

ಮೂಕ ಪ್ರಾಣಿಗಳ ಬಗ್ಗೆ ತುಂಬಾ ಮಮಕಾರ, ಪ್ರೀತಿ, ಕಾಳಜಿ ತೋರುವ ಅರ್ಜುನ್ ಸರ್ಜಾ ಬೇರೆಯವರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಅರ್ಜುನ್ ಸರ್ಜಾ ರವರ ಸರಳತೆ ಹಾಗೂ ಮಾನವೀಯತೆ ಇಂದಿಗೂ ಅದೆಷ್ಟೋ ಜನಕ್ಕೆ ತಿಳಿದಿಲ್ಲ. ಮನುಷ್ಯನಿಗೆ ತುಂಬಾ ಹತ್ತಿರವಾದ ಪ್ರಾಣಿ ಹಸು. ಹಸು ಹಲವಾರು ರೀತಿಯಲ್ಲಿ ನಮಗೆ ಉಪಕಾರಿ. ಗೋ ಶಾಲೆ ದತ್ತು ತೆಗೆದುಕೊಂಡು ಇಂತಹ ಮುಕ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ನಮ್ಮ ನಟ ಅರ್ಜುನ್ ಸರ್ಜಾ ನಿಜಕ್ಕೂ ಗ್ರೇಟ್ ಅಲ್ಲವೇ..?

– ಸುಷ್ಮಿತಾ

Advertisement
Share this on...