ಹೊಸ ಅವತಾರದಲ್ಲಿ ಮನರಂಜನೆ ನೀಡಲು ಬರುತ್ತಿದ್ದಾರೆ ಕಲಾಕಾರ ಹರೀಶ್ ರಾಜ್

in Uncategorized 131 views

ಹಳೇ ಚಿಗುರು ಹೊಸ ಬೇರು ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಹರೀಶ್ ರಾಜ್ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿ ಮಿಂಚಿದ ಪ್ರತಿಭೆ. ನಟನೆಯ ಜೊತೆಗೆ ನಿರ್ದೇಶಕರಾಗಿ ತೊಡಗಿಸಿಕೊಂಡಿರುವ ಹರೀಶ್ ರಾಜ್ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆದರೆ ಹರೀಶ್ ರಾಜ್ ಅವರು ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿಲ್ಲ‌. ಬದಲಿಗೆ ಹೊಸ ಅವತಾರದ ಮೂಲಕ ಹರೀಶ್ ರಾಜ್ ಅವರು ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಲು ತಯಾರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮಜಾಭಾರತ ಹೊಸ ಸೀಸನ್ ನಲ್ಲಿ ಹರೀಶ್ ರಾಜ್ ಅವರು ವಿಶೇಷ ಪಾತ್ರದಲ್ಲಿ ಹರೀಶ್ ರಾಜ್ ನಿಮ್ಮ ಮುಂದೆ ಬರಲಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಿರುತೆರೆಗೆ ಬಂದಿದ್ದ ಹರೀಶ್ ರಾಜ್ ಅವರು ತಮ್ಮ ನಡವಳಿಕೆಯ ಮೂಲಕ ಕಿರುತೆರೆ ವೀಕ್ಷಕರಿಗೆ ತುಂಬಾನೇ ಹತ್ತಿರವಾಗಿದ್ದರು. ಇದೀಗ ಮಜಾಭಾರತದ ಮೂಲಕ ಮಗದೊಮ್ಮೆ ವೀಕ್ಷಕರನ್ನು ರಂಜಿಸಲು ಹರೀಶ್ ರಾಜ್ ಸಜ್ಜಾಗಿದ್ದಾರೆ.

Advertisement

Advertisement

“ಮಜಾಭಾರತ ಶೋವಿನ ಮೂಲಕ ಮತ್ತೆ ನಿಮ್ಮನ್ನು ರಂಜಿಸಲು ಬರುತ್ತಿದ್ದೇನೆ ಎಂದು ತುಂಬಾ ಸಂತಸವಾಗುತ್ತಿದೆ. ನಾನು ಇದೀಗ ಮಜಾಭಾರತ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದೇನೆ. ಅಂದ ಹಾಗೇ ನಾನು ಇದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ವಿಭಿನ್ನ ಪಾತ್ರದ ಮೂಲಕ ನಿಮಗೆ ಮನರಂಜನೆ ನೀಡಲು ನಾನು ಬರುತ್ತಿದ್ದೇನೆ. ಅಜ್ಜ ಅಜ್ಜಿ ಅಪ್ಪ ಅಮ್ಮ ಅಂಕಲ್ ಆಂಟಿ ಹೀಗೆ ವಿಭಿನ್ನ ಅವತಾರದ ಮೂಲಕ ಮನರಂಜನೆ ನೀಡುತ್ತಿದ್ದೇನೆ” ಎನ್ನುತ್ತಾರೆ ಹರೀಶ್ ರಾಜ್.

Advertisement

ಅಂದ ಹಾಗೇ ಹರೀಶ್ ರಾಜ್ ಅವರು ಕಿರುತೆರೆಗೆ ಹೊಸಬರೇನಲ್ಲ. ಮನೆಯೊಂದು ಮೂರು ಬಾಗಿಲು, ಕುಬೇರಪ್ಪ ಆ್ಯಂಡ್ ಸನ್ಸ್, ಸ್ವಾತಿಮುತ್ತು, ಕಾವ್ಯಂಜಲಿ, ಮೂಕರಾಗ, ಪ್ರೇಮಕಥೆಗಳು, ಮಿಂಚಿನ ಬಳ್ಳಿ, ದಂಡಪಿಂಡಗಳು, ಆತ್ಮ, ಪ್ರತಿಬಿಂಬ, ಚಕ್ರ ಹೀಗೆ ಸಾಲು ಸಾಲು ಕನ್ನಡ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಹರೀಶ್ ರಾಜ್ ವೀರ ಸಿಪಾಯಿ, ಅಂತರಾಳ್, ಸ್ವರಜನ್ಮ, ಕಾಂತಪುರ, ಮಾಲ್ಗುಡಿ ಡೇಸ್, ಚಕ್ರವ್ಯೂಹ್ ಎಂಬ ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಪರಭಾಷೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿದ್ದಾರೆ.

Advertisement

ದೋಣಿ ಸಾಗಲಿ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಹಿರಿತೆರೆಗೆ ಕಾಲಿಟ್ಟ ಹರೀಶ್ ರಾಜ್ ಮುಂದೆ ಶಾಂತಿ ಶಾಂತಿ ಶಾಂತಿ, ಕಾನೂರ ಹೆಗ್ಗಡತಿ, ಭೂಗತ ದೊರೆ, ಕುರಿಗಳು ಸಾರ್ ಕುರಿಗಳು, ದ್ವೀಪ, ತುಂಟಾಟ, ರಾಂಗ್ ನಂಬರ್, ಮೌನಿ, ಭಗತ್, ತನನಂ ತನನಂ, ಪವರ್, ಓರೆಂಜ್, ಗೋವಿಂದಾಯ ನಮಃ ಹೀಗೆ ಒಟ್ಟು ಐವತ್ತು ಸಿನಿಮಾಗಳಲ್ಲಿ ನಟಿಸಿರುವ ಹರೀಶ್ ರಾಜ್ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಕಲಾಕಾರ್ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದುಕೊಂಡಿರುವ ಹರೀಶ್ ರಾಜ್ ಸದ್ಯ ಕಿಲಾಡಿ ಪೋಲಿಸ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಅದರಲ್ಲಿ ನಟರಾಗಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ನಟನೆಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಹರೀಶ್ ರಾಜ್ ಇದೀಗ ಕಾಮಿಡಿಯ ಮೂಲಕ ಮನರಂಜನೆ ನೀಡಲಿದ್ದಾರೆ.
– ಅಹಲ್ಯಾ

Advertisement
Share this on...