ನಟಿ ಅರುಣಾ ಬಾಲರಾಜ್ ಅವರ ಬಗ್ಗೆ ನಿಮಗೆಷ್ಟು ಗೊತ್ತಾ…?

in ಮನರಂಜನೆ 485 views

ನೈಜ ಹಾಗೂ ಅಮೋಘ ನಟನೆಯ ಮೂಲಕ ಎಲ್ಲರ ಮನೆಯಲ್ಲಿ ಮನಸಲ್ಲಿ ಉಳಿದಿರುವರು ನಟಿ ಅರುಣಾ ಬಾಲರಾಜ್. ಧಾರಾವಾಹಿಗಳ ಮೂಲಕ ತಮ್ಮ ನಟನೆಯನ್ನು ಆರಂಭಿಸಿದ ಅರುಣಾರವರು ನ್ಯಾಚುರಲ್ ನಟನೆಯ ಮೂಲಕ ಎಲ್ಲರನ್ನು ತಮ್ಮ ಕಡೆ ಸೆಳೆದರು. ಚನ್ನರಾಯಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಣಾ ಅವರು ಅಲ್ಲೇ ತಮ್ಮ ಬಾಲ್ಯ ಶಿಕ್ಷಣ ಮುಗಿಸಿದರು. ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಆಕರ್ಷಣೆಯನ್ನು ಬೆಳೆಸಿಕೊಂಡಿದ್ದ ಅರುಣಾರವರು ಡಿಗ್ರಿ ಮುಗಿದ ಮೇಲೆ ಮದುವೆಯಾದರು.
ಆದರೆ ಅವರ ಅದೃಷ್ಟ ಹೇಗಿತ್ತು ಅಂದರೆ ನಟನೆಯ ಹಿನ್ನೆಲೆಯಿರುವ ಕುಟುಂಬಕ್ಕೆ ಸೊಸೆಯಾಗಿ ಎಂಟ್ರಿ ಕೊಟ್ಟರು. ನಟಿ ಅರುಣಾರವರ ಮಾವ ಶ್ರೀನಿವಾಸಮೂರ್ತಿಯವರು ಹತ್ತಾರು ಸೀರಿಯಲ್ ಗಳಲ್ಲಿ ನಟನೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ನನಗೂ ಧಾರವಾಹಿಯಲ್ಲಿ ನಟನೆ ಮಾಡುವ ಆಸೆ ಇದೆ ನನಗೂ ಒಂದು ಪಾತ್ರ ಕೊಡಿಸಿ ಎಂದು ಮಾವನ ಬಳಿ ಕೇಳಿದರು ಅರುಣಾರವರು. ಆಗ ‘ಮನ್ವಂತರ’ ಧಾರಾವಾಹಿ ಮಾಡುತ್ತಿದ್ದ ಶ್ರೀನಿವಾಸಮೂರ್ತಿಯವರು ನನ್ನ ಸೊಸೆಗೂ ಒಂದು ಪಾತ್ರ ಕೊಡಿ ಎಂದು ನಿರ್ದೇಶಕರ ಟಿ.ಎನ್. ಸೀತಾರಾಮ್ ರವರ ಬಳಿ ಕೇಳಿದರು.

Advertisement

Advertisement

ಕೊನೆಗೆ ಒಂದು ದಿನ ಅರುಣಾರವರ ನಟನೆಯನ್ನು ನೋಡಿ ಮೆಚ್ಚಿದ ನಿರ್ದೇಶಕ ‘ಮನ್ವಂತರ’ ಸೀರಿಯಲ್ ನಲ್ಲಿ ಒಂದು ದಿನದ ಪಾತ್ರ ಕೊಟ್ಟರು. ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಅದ್ಭುತ ನಟನೆಯನ್ನು ತೋರಿಸಿದ ಅರುಣಾರವರು ಮತ್ತೆ ಅವಕಾಶ ಪಡೆಯುತ್ತ ಹೋದರು. ಇಂದಿಗೆ ಅರುಣಾರವರು ಸುಮಾರು ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಹಾಗೂ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿಂಗ, ಅಂಬಾರಿ, ರಾಜಹುಲಿ, ಅಯೋಗ್ಯ, ಗಜ, ವಾಸು ನಾನ್ ಪಕ್ಕ ಕಮರ್ಷಿಯಲ್ ಸೇರಿದಂತೆ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅರುಣಾರವರು ಅಭಿನಯಿಸಿದ್ದಾರೆ. ಕುಟುಂಬದ ವಿಷಯದಲ್ಲಿ ನಟಿ ಅರುಣಾರವರು ತುಂಬಾ ಅದೃಷ್ಟ ಮಾಡಿದ್ದಾರೆ.

Advertisement

Advertisement

ಸೊಸೆಯ ಮೇಲೆ ಅಧಿಕಾರ ಚಲಾಯಿಸಲು ನೋಡುವ ಅತ್ತೆ-ಮಾವ ಇರುವ ಈ ಕಾಲದಲ್ಲಿ ತಮ್ಮ ಸೊಸೆಗೆ ಅವಕಾಶ ಕೊಡಿಸಿ ಅರುಣಾ ಅವರ ಕನಸನ್ನು ನನಸು ಮಾಡಿದ್ದಾರೆ. ಅರುಣಾ ಅವರು ಮನೆಯ ಕೆಳ ಭಾಗದಲ್ಲಿ ಅತ್ತೆ-ಮಾವ, ಗಂಡ ಹಾಗೂ ಮಗಳ ಜೊತೆ ವಾಸವಿದ್ದರೆ ಮನೆಯ ಮೊದಲ ಮಹಡಿಯಲ್ಲಿ ಅರುಣಾರವರ ತಂದೆ-ತಾಯಿ ವಾಸವಿದ್ದಾರೆ. ಹಾಗಾಗಿ ಎಲ್ಲರೂ ಒಂದೇ ಸ್ಥಳದಲ್ಲಿ ವಾಸವಿರುವ ಕಾರಣ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಅರುಣಾರವರಿಗೆ ನಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.

– ಸುಷ್ಮಿತಾ

Advertisement
Share this on...