ಪಿಯೂಸಿ ಯಲ್ಲಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳ ವಿಚಾರದಲ್ಲಿ ಅನಿರುದ್ಧ್ ಅವರ ನಡೆ ಮೆಚ್ಚುವಂತದ್ದು !

in ಕನ್ನಡ ಮಾಹಿತಿ/ಮನರಂಜನೆ 121 views

ಸಿನಿಮಾ ಎಂಬ ಬಣ್ಣದ ಪ್ರಪಂಚ ಯಾರಿಗೆ, ಯಾವಾಗ ಹೇಗೆ ಕೈ ಹಿಡಿಯುತ್ತದೆ ಎಂದು  ಹೇಳಲು ಸಾಧ್ಯವಿಲ್ಲ.ಕೆಲವರು ನಟನೆಯಲ್ಲಿ ಪ್ರತಿಭಾವಂತರೇ ಆಗಿದ್ದೂ, ಫ್ಯಾಮಿಲಿ ಬ್ಯಾಗ್ ಗ್ರೌಂಡ್  ಇದ್ದರೂ ಕೂಡ ಲಕ್ ಎಂಬುದು ಮಾತ್ರ ಅವರ ಕೈ ಹಿಡಿದಿರುವುದಿಲ್ಲ. ಹೌದು ಕಲಾ ದೇವಿಗೆ ಸೇವೆ ಸಲ್ಲಿಸಬೇಕಾದರೆ ಕಠಿಣ ಶ್ರಮದ ಜೊತೆಗೆ ಲಕ್ ಎಂಬುದು ಕೂಡ ಇರಬೇಕು. ಅದೆಷ್ಟೋ ಕಲಾವಿದರು ಅಭಿನಯದಲ್ಲಿ ಪರಿಣಿತರಾಗಿದ್ದರು ಕೂಡ ಈ ಅದೃಷ್ಟ ಎಂಬುದು ಕೈ ಹಿಡಿಯದೇ ಚಿತ್ರರಂಗವೇ ಬೇಡ ಎಂದು ದೂರ ಉಳಿದಿರುವವರನ್ನು ನಾವು ನೋಡಿದ್ದೇವೆ. ಆದರೆ ಕೆಲವರು ಅದೃಷ್ಟವನ್ನು ತಮ್ಮದಾಗಿಸಿ ಕೊಳ್ಳಲು ಸತತ ಪ್ರಯತ್ನ ಮಾಡುತ್ತಲೇ ತೀರುತ್ತಾ ಯಶಸ್ಸನ್ನು ಕಾಣುತ್ತಾರೆ. ಅಂತವರಲ್ಲಿ  ಜೊತೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರು ಕೂಡ ಒಬ್ಬರು. ಅನಿರುದ್ಧ್ ಅವರು ಕೂಡ ಒಬ್ಬ ಪ್ರತಿಭಾವಂತ ನಟನೇ, ಕನ್ನಡದ ಖ್ಯಾತ ನಟ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಅಳಿಯ ಆಗಿರುವ ಇವರು ಕನ್ನಡ ಸೇರಿದಂತೆ  ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ೨೨ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ದಿನೇಶ್ ಬಾಬು ಅವರ ನಿರ್ದೇಶನದ ಚಿಟ್ಟೆ ಎಂಬ ಸಿನಿಮಾದ ಮೂಲಕ ಕನ್ನಡದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ತುಂಟಾಟ, ನೀನೆಲ್ಲೋ ನಾನಲ್ಲೇ, ತಮಾಷೆಗಾಗಿ, ರಾಮ ಶಾಮ ಭಾಮಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.  ಆದರೆ ಅದೇಕೋ ಏನೋ  ಒಳ್ಳೆಯ ಪ್ರತಿಭಾವಂತ ನಟ ಹಾಗಿದ್ದರೂ ಕೂಡಾ ಸಿನಿಮಾಗಳಲ್ಲಿ ಅಷ್ಟು ಯಶಸ್ಸನ್ನು ಕಾಣಲಿಲ್ಲ. ನಂತರ ಚಿತ್ರ ತಂಡದಿಂದ ದೂರ ಉಳಿದ ಅವರು  ಸಮಾಜ ಸೇವೆ ಕೆಲಸ ಮಾಡುವ ಮುಖಾಂತರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು..

Advertisement

Advertisement

ಆದರೆ ಇದೀಗ ಅವರು ಕಿರುತೆರೆ ಧಾರಾವಾಹಿಯ ಮುಖಾಂತರ ಕಮ್ ಬ್ಯಾಕ್ ಮಾಡಿದ್ದು,ಈ ಧಾರಾವಾಹಿ, ಅವರಿಗೆ ಅಪಾರ ಕೀರ್ತಿಯನ್ನು ತಂದು ಕೊಡುವುದರ  ಜೊತೆಗೆ ಧಾರಾವಾಹಿಯ ದಿಕ್ಕನ್ನೆ  ಬದಲಿಸಿದೆ. ಹೌದು ಜೀ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ ? ಆಟವಾಡುವ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಧಾರಾವಾಹಿಯನ್ನು ಮನೆಯಲ್ಲಿ ಕುಳಿತು ನೋಡುತ್ತಾರೆ. ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿರುವ ಈ  ಧಾರಾವಾಹಿ  ಟಿಆರ್ ಪಿಯಲ್ಲೂ ಕೂಡ ಮೇಲುಗೈ ಸಾಧಿಸುತ್ತಾ ದಾಖಲೆಯನ್ನೇ ಬರೆದಿದೆ. ಅಲ್ಲದೇ ಧಾರಾವಾಹಿಯ ಶೀರ್ಷಿಕೆಯ ಹಾಡು ಫೇಸ್ಬುಕ್ ನಲ್ಲಿ ಅತೀ ಹೆಚ್ಚು ವ್ಯೂಸ್ ಪಡೆದುಕೊಳ್ಳುವ ಮುಖಾಂತರ ಯಾವ ಧಾರಾವಾಹಿಯೂ ಮಾಡದ ದಾಖಲೆಯನ್ನು ಮಾಡಿತ್ತು. ಸಿನಿಮಾದಲ್ಲಿ ನಟರಾದ ಅನಿರುದ್ಧ್  ಅವರು ಇದೀಗ ಕಿರುತೆರೆಯಲ್ಲಿ ಆರ್ಯವರ್ಧನ್ ಎಂಬ ಹೆಸರಿನಿಂದ  ಸೂಪರ್ ಸ್ಟಾರ್ ಆಗಿದ್ದಾರೆ.

Advertisement

Advertisement

ಇನ್ನು ನೆನ್ನೆಯಷ್ಟೆ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,  ಎಂದಿನಂತೆ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳದ್ದೇ ಮೇಲು ಗೈ ಆಗಿದೆ. ಉಡುಪಿ ದಕ್ಷಿಣ‌ ಕನ್ನಡ ಜಿಲ್ಲೆಗಳು ಮೊದಲ ಸ್ಥಾನ ಪಡೆದುಕೊಂಡಿದೆ.  ಸಾಮಾನ್ಯವಾಗಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸೋದು ಮಾಮೂಲಿ.  ಆದರೆ ಕಡಿಮೆ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ವಿಚಾರದಲ್ಲಿ ಅನಿರುದ್ಧ್ ಅವರ ನಡೆ ನಿಜಕ್ಕೂ ಮೆಚ್ಚುವಂತದ್ದು..

ಎಲ್ರಿಗೂ ನಮಸ್ಕಾರ.. ಇಂದು ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ.. ಜೀವನವೆಂಬ ದೊಡ್ಡ ಪರೀಕ್ಷೆಯಲ್ಲಿ ಇದೊಂದು ಸಣ್ಣ ಪರೀಕ್ಷೆಯನ್ನು ಎದುರಿಸಿದ ಎಲ್ಲರಿಗೂ ಶುಭಾಶಯಗಳು.. ನೀವು ಅಂದುಕೊಂಡ ರೀತಿಯಲ್ಲಿ ನಿಮ್ಮ ರಿಸಲ್ಟ್ ಬಂದಿಲ್ಲ ಅಂದರೆ ದಯವಿಟ್ಟು ಯಾರೂ ಬೇಸರ ಮಾಡ್ಕೋಬೇಡಿ.. ಜೀವನದ ಹಾದಿಯಲ್ಲಿ ಇದೊಂದು ಮೆಟ್ಟಿಲಷ್ಟೇ.. ಇದೇ ಜೀವನ ಅಲ್ಲ..  ಬದುಕಿನಲ್ಲಿ ಜ್ಞಾನ ಮುಖ್ಯ.. ಮಾರ್ಕ್ಸ್ ಅಲ್ಲ… ಸಾಧನೆಗೆ ನಾನಾ ದಾರಿಗಳಿವೆ.. ಎಲ್ಲಕ್ಕಿಂತ ಮುಖ್ಯ ಬದುಕುವ ರೀತಿ.. ಯಾರ ಮಾತಿಗೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.. ಈ ಸಮಯ ಕಳೆದು ಹೋಗಲಿ.. ನಿಧಾನವಾಗಿ ಕೂತು ಮುಂದೇನು‌ ಮಾಡಬಹುದು ಎಂದು ನಿರ್ಧರಿಸಬಹುದು..

ಹಾಗೆಯೇ ಪೋಷಕರು ದಯವಿಟ್ಟು ಯಾರೂ ಸಹ ಹೆಚ್ಚು ಅಂಕ ಬಂದಿಲ್ಲವೆಂದು ತಮ್ಮ ಮಕ್ಕಳನ್ನ ಬೈಯೋದಾಗ್ಲಿ ಅವರ ಮನಸ್ಸಿಗೆ ನೋವು ಮಾಡೋದಾಗ್ಲಿ ಮಾಡಬೇಡಿ.. ಮತ್ತೊಬ್ಬರ ಮಕ್ಕಳ ಜೊತೆ ಹೋಲಿಕೆ ಮಾಡಿ ಮಾತನಾಡಬೇಡಿ.. ಮಕ್ಕಳ ಮನಸ್ಸು ಸೂಕ್ಷ್ಮವಾಗಿರತ್ತೆ.. ಸ್ನೇಹಿತರಂತೆ ಜೊತೆಯಾಗಿ ನಿಂತು ಮುಂದಿನ ಜೀವನ ರೂಪಿಸಲು ಸಹಾಯ ಮಾಡಿ..ಕಡಿಮೆ ಅಂಕ ಬಂತು ಅಂತ ಬೇಸರ ಮಾಡಿಕೊಂಡ ವಿದ್ಯಾರ್ಥಿಗಳು ನಿಮಗೆ ನನ್ನ ಜೊತೆ ಮಾತನಾಡಿದರೆ ಸಮಾಧಾನ ಎನಿಸಿದರೆ ದಯವಿಟ್ಟು‌ Inbox ನಲ್ಲಿ “ನಾನು ಪಿಯು ವಿದ್ಯಾರ್ಥಿ” ಎಂದು ಮೆಸೆಜ್ ಮಾಡಿ.. ನಾನು ಪ್ರತಿಕ್ರಿಯೆ ನೀಡುವೆ.. ಮುಂದಿನ ನಿಮ್ಮೆಲ್ಲರ ಜೀವನಕ್ಕೆ ಶುಭವಾಗಲಿ.. ಧನ್ಯವಾದಗಳು ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ನೀಡಿದ್ದಾರೆ.

Advertisement
Share this on...