ಪುಷ್ಪಾ ನಿರ್ದೇಶಕರು ರಶ್ಮಿಕಾಗೆ ಈ ಚಿತ್ರ ನೋಡಲು ಹೇಳಿದ್ದಾರಂತೆ!

in ಸಿನಿಮಾ 148 views

ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ನಿಧಾನವಾಗಿ ಟಾಪ್ ಒನ್ ಸ್ಥಾನ ಪಡೆಯಲು ಎಲ್ಲಾ ರೀತಿಯಲ್ಲೂ ಶ್ರಮವಹಿಸುತ್ತಿದ್ದಾರೆ. ಈಗಾಗಲೇ ಟಾಲಿವುಡ್’ನಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ನಟಿಸಿರುವ ರಶ್ಮಿಕಾ, ಪ್ರಸ್ತುತ ಅಲ್ಲು ಅರ್ಜುನ್ ಜೊತೆ ‘ಪುಷ್ಪಾ’ ಚಿತ್ರದಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಎನ್ಟಿಆರ್ ತ್ರಿವಿಕ್ರಮ್ ಚಿತ್ರದಲ್ಲಿಯೂ ಆಕೆ ನಾಯಕಿ ಎಂದು ಮೂಲಗಳು ತಿಳಿಸಿವೆ.

Advertisement

 

Advertisement

Advertisement

 

Advertisement

ಏತನ್ಮಧ್ಯೆ, ‘ಪುಷ್ಪಾ’ ಚಿತ್ರೀಕರಣ ಪ್ರಾರಂಭವಾದರೂ, ಏಕಾಏಕಿ ಕೊರೊನಾ ಎದುರಾದ ಕಾರಣ ಚಿತ್ರಕ್ಕೆ ಅಡಚಣೆಯಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ರಶ್ಮಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಚಿತ್ತೂರಿನ ಹಿನ್ನೆಲೆ ಹೊಂದಿರುವ ಕಾರಣ ಕಲಾವಿದರೆಲ್ಲರೂ ಇಲ್ಲಿನ ಆಡುಭಾಷೆಯನ್ನು ಕಲಿಯಲು ಶ್ರಮಿಸುತ್ತಿದ್ದಾರೆ. ‘ಪುಷ್ಪಾ’ ಚಿತ್ರದ ಪಾತ್ರಕ್ಕೆ ತನ್ನ ಧ್ವನಿಯನ್ನೇ ನೀಡಬೇಕೆಂದು ರಶ್ಮಿಕಾ ನಿರ್ಧರಿಸಿರುವುದರಿಂದ, ಚಿತ್ತೂರು ಭಾಷೆಯನ್ನು ನಿರರ್ಗಳವಾಗಿ ಕಲಿಯಲು ಈ ಲಾಕ್ ಡೌನ್ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

 

 

 

ಈ ನಡುವೆ ನಿರ್ದೇಶಕ ಸುಕುಮಾರ್ ಅವರು ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ಅವರ ಹಳ್ಳಿಯ ಹುಡುಗಿಯ ಪಾತ್ರವನ್ನು ನೋಡಿಕೊಳ್ಳಬೇಕೆಂದು ರಶ್ಮಿಕಾಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ ರಶ್ಮಿಕಾ ಇದೀಗ ಆ ಚಿತ್ರವನ್ನು ನೋಡುತ್ತಿದ್ದಾರೆ.  ಅಂದಹಾಗೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದು, ಅವರ ಪತ್ನಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ.

 

 

ಮೂಲಗಳ ಪ್ರಕಾರ, ಈ ಚಿತ್ರವು ತನ್ನ ಹೆಂಡತಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುವ ಟ್ರಕ್ ಚಾಲಕನ ಜೀವನದ ಬಗ್ಗೆ ಹೇಳುತ್ತದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

 

 

ಸುಕುಮಾರ್ ನಿರ್ದೇಶನದ, ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಪುಷ್ಪಾ’ ಫಸ್ಟ್ ಲುಕ್ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಯಿತು. ಈ ಫಸ್ಟ್ ಲುಕ್ ಪೋಸ್ಟರ್’ನಲ್ಲಿ ಅಲ್ಲು ಅರ್ಜುನ್ ರಗಡ್ ಲುಕ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ರಗಡ್ ಲುಕ್’ನಲ್ಲಿ ದಟ್ಟವಾದ ಗಡ್ಡ ನೋಡಿದವರು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿಕೊಂಡಿದ್ದಾರೆ.

Advertisement
Share this on...