ಆಷಾಡ ಮಾಸ ಪ್ರಾರಂಭ…..

in ಜ್ಯೋತಿಷ್ಯ 175 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ಪ್ರಥಮಿ ತಿಥಿ, ಆರಿದ್ರಾ ನಕ್ಷತ್ರ,  ವೃದ್ಧಿಯೋಗ, ಬಾಲವ ಕರಣ, ಜೂನ್ 22  ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಆಷಾಢ ಮಾಸ ಇವತ್ತಿನಿಂದ ಆರಂಭ, ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಈ ಮಾಸದಲ್ಲಿ ಯಾಕೆ ಶುಭ ಕಾರ್ಯಗಳನ್ನು ಮಾಡಬಾರದು, ಹೊಸದಾಗಿ ಮದುವೆಯಾದ ದಂಪತಿಗಳು ಯಾಕೆ ಒಂದೇ ಮನೆಯಲ್ಲಿ ಇರಬಾರದು, ಅತ್ತೆ ಸೊಸೆ ಒಂದೇ ಹೊಸಲಿನಲ್ಲಿ ಯಾಕೆ ಓಡಾಡಬಾರದು, ಆಷಾಢ ಮಾಸದಲ್ಲಿ ಯಾಕೆ ಗರ್ಭವನ್ನು ಧರಿಸಬಾರದು ಅದಕ್ಕೆ  ವೈಜ್ಞಾನಿಕ ಮತ್ತು ಪೌರಾಣಿಕ  ಕಾರಣ ಏನು  ಎಂಬುದರ ಬಗ್ಗೆ ಮಾಹಿತಿಯನ್ನು ನಾಳೆ ಗುರೂಜಿ ರವರು  ತಿಳಿಸಿಕೊಡಲಿದ್ದಾರೆ.

Advertisement

 

Advertisement

Advertisement

ನಿಮ್ಮ ರಾಶಿಗಳ ಫಲ  ಹೀಗಿದೆ.

Advertisement

ಮೇಷ ರಾಶಿ : ಆರಿದ್ರಾ ನಕ್ಷತ್ರ, ಗ್ರಹಣ ಬಿಟ್ಟಿರುವ ಛಾಯೆ,  ಎಲ್ಲೊ ಒಂದು ಆತಂಕವಿದೆ, ಏನು ನಡೆಯುತ್ತೆ ಎಂಬುದರ ಬಗ್ಗೆ ಚಿಂತೆ ಬಿಟ್ಟು,  ನಿಮ್ಮ ಕರ್ತವ್ಯದ ಕಡೆಗೆ ಹೆಜ್ಜೆಯಾಕಿ, ಬಲಾಢ್ಯರಾಗಿ ಇಂದು ಅಂದುಕೊಂಡಿದ್ದೆಲ್ಲ ಶಿವ ಶಾಸನವಾಗಿ ನಡೆಯುತ್ತದೆ, ಸ್ನಾನ ಮಾಡುವಾಗ ಗರಿಕೆ ಮತ್ತು ಗೋಮೂತ್ರವನ್ನು ಹಾಕಿ ಸ್ನಾನ ಮಾಡಿ,  ಸ್ವಲ್ಪ ಗೋಮೂತ್ರವನ್ನು ಸೇವಿಸಿ , ಶಿವನಾಮವನ್ನು ಉಚ್ಚರಿಸುತ್ತಾ  ಕೆಲಸಕ್ಕೆ ಹೋಗಿ ಆತಂಕವೇನೂ ಇಲ್ಲ.

ವೃಷಭ ರಾಶಿ: ಇಂದು ತುಂಬಾ ಉದ್ಯೋಗದ ಎಳೆದಾಟದ ಛಾಯೆ ಉಂಟು ಮನೆಯಲ್ಲಿ ಗಣಪತಿಯ ಮುಂದೆ ದೀಪವನ್ನು ಹಚ್ಚಿ ಹೊಗಿ, ಸ್ನಾನ ಮಾಡುವಾಗ ದುರ್ಗಾ ತೀರ್ಥ ಅಥವಾ ಅರಿಶಿಣವನ್ನು ಹಾಕಿ ಸ್ನಾನ ಮಾಡಿ ಆತಂಕ ಬೇಡ.

ಮಿಥುನ ರಾಶಿ: ನಿಮ್ಮ ಮನೆಯಲ್ಲೇ ಆರಿದ್ರ ನಕ್ಷತ್ರ,  ಚಂದ್ರ,  ರಾಹು ಹುಳಿ ತತ್ತ್ವ,  ಕುಟುಂಬ ಕಾರಕ, ಒಳ್ಳೆಯದು ಉಂಟು, ಆದರೆ  ನಿಜವಾ ಸುಳ್ಳಾ ಎಂಬ ತೊಳಲಾಟವೂ ಉಂಟುನಿಮಗೆ, ಇನ್ನು ಗ್ರಹಣದ ಛಾಯೆ ಇದೆ,   ಐದು ಜನ ವೃದ್ಧರಿಗೆ  ಒಂದು ಒಳ್ಳೆಯ ಊಟ ಕೊಡಿಸಿ ಆತಂಕದ ಛಾಯೆ ಹೋಗುತ್ತದೆ , ಇಲ್ಲ ಅಂದರೆ ಒಂದು ಐದು ಜನರಿಗೆ ಮೂರು ಕೆಜಿ ರವೆ,  ಮೂರು ಕೆಜಿ ಎಣ್ಣೆ,  ಮೂರು ಕೆಜಿ ಅಕ್ಕಿ,  ಮೂರು ಕೆಜಿ ಅವಲಕ್ಕಿ,  ಮೂರು ಕೆಜಿ ಬೆಲ್ಲ,  ಮೂರು ಕೆಜಿ ಯಷ್ಟು  ಸೊಪ್ಪು,  ಮೂರು ಕೆಜಿ ಯಷ್ಟು ತರಕಾರಿ , ಹದಿನಾರು ರೂಪಾಯಿಗಳನ್ನು ಒಬ್ಬರಿಗಾದರೂ ಕೊಡಿ ನಿಮ್ಮ ಆತಂಕ ದೂರವಾಗುತ್ತದೆ.

 

ಕರ್ಕಾಟಕ ರಾಶಿ: ಖರ್ಚಿನ ಚಿಂತೆ. ಮುಂದೇನು ಮಕ್ಕಳಿಗೇನು, ಕುಟುಂಬಕ್ಕೇನು ಎಂಬ ಆತಂಕಕ್ಕೆ ಒಳಗಾಗುವ ಪ್ರಭಾವ , ಇಂದು ಬೆಳಿಗ್ಗೆ ಹೊಸಿಲಿನ ಹೊರಗೆ ಒಂದು ಪುಟ್ಟದಾದ ದೀಪವನ್ನು ಹಚ್ಚಿ , ಸಾಧ್ಯವಾದರೆ ದುರ್ಗಾ ಮತ್ತು ಗಣಪತಿ ಇರುವ ದೇವಸ್ಥಾನಕ್ಕೆ ಹೋಗಿ ಮನೆಯವರೆಲ್ಲರ ಹೆಸರಿನಲ್ಲಿ ಅರ್ಚನೆ ಮಾಡಿಸಿ , ಒಂದು ಒಳ್ಳೆಯ ಶುಭ ಸುದ್ದಿಯನ್ನು ಕೇಳುವಿರಿ.

ಸಿಂಹ ರಾಶಿ: ಅನ್ಯಾಯ ಅಧರ್ಮದ ಮಾರ್ಗದಲ್ಲಿ ದುಡ್ಡನ್ನು ಸಂಪಾದನೆ ಮಾಡಲು ಪ್ರಚೋದನೆಯಾಗುತ್ತದೆ. ಕೋಪ ಮತ್ತು ವ್ಯಘ್ರಗೊಳ್ಳುವಿರಿ,  ವಿಷ ತತ್ತ್ವ ಪಿಡಿಪಿಯ ಪ್ರಭಾವ ಉಂಟಾಗುತ್ತದೆ, ಸೂರ್ಯನಿಗೆ ಗ್ರಹಣ ಪಡೆದಿರುವುದರಿಂದ ಎಲ್ಲ ಬಲವನ್ನು ಕಳೆದುಕೊಂಡಿರುತ್ತೀರಿ, ನಿರ್ಗಮನ ಮತ್ತು ಆಗಮನದ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ ಆದ್ದರಿಂದ ಅಧರ್ಮ ಮಾರ್ಗದಲ್ಲಿ ದುಡ್ಡನ್ನು ಸಂಪಾದನೆ ಮಾಡಲು ಹೋಗಬೇಡಿ .

ಕನ್ಯಾ ರಾಶಿ : ಚೆನ್ನಾಗಿದೆ,  ಕುಟುಂಬ ನಿಮಿತ್ತ,  ಬಾಡಿ ಬಿಲ್ಡಿಂಗ್ , ಕಲಾವಿದರ ಫೀಲ್ಡ್ ನಲ್ಲಿ ಇದ್ದರೆ ,  ಮೀಡಿಯಾ ಫೀಲ್ಡಲ್ಲಿ ಇದ್ದವರಿಗೆ ಒಂದು ಶುಭ ಆರಂಭವನ್ನು ಮಾಡಲು ಅನುಕೂಲ ಮಾಡಿಕೊಡುತ್ತದೆ.

 

ತುಲಾ ರಾಶಿ: ಭಾಗ್ಯ ಸ್ಥಾನದಲ್ಲಿರುವ ಚಂದ್ರ ಉದ್ಯೋಗ ನಿಮಿತ್ತ ಶುಭ ಸುದ್ದಿ ಬರುತ್ತದೆ,  ಆದರೆ ಮಾನಸಿಕವಾಗಿ,  ಸ್ವಲ್ಪ  ದೈಹಿಕವಾಗಿ ಜರ್ಜರಿತವಾಗಿರುತ್ತೀರಿ,  ಆದರೆ ತೊಂದರೆ ಏನೂ ಇಲ್ಲ.

ವೃಶ್ಚಿಕ ರಾಶಿ : ಅಷ್ಟಮದಲ್ಲಿ ಇರುವಂತಹ ಚಂದ್ರ,  ದೂರದ ಊರಿನಿಂದ ಒಂದು ಶುಭ ಸುದ್ದಿ,  ಮತ್ತು ಅಶುಭ ಸುದ್ದಿ , ಇವೆರಡರ ನಡುವಿನ ಪ್ರಭಾವವಿದೆ ಆತಂಕಕ್ಕೆ ಒಳಗಾಗಬೇಡಿ. ಮನೆಯಲ್ಲಿ ನೂರಾ ಎಂಟು ಗರಿಕೆಗಳನ್ನು ತೆಗೆದುಕೊಂಡು ಅದನ್ನು ಗಂ ಗಣಪತಯೇ ನಮಃ ಎಂದು ಪೂಜೆ ಮಾಡಿ,  ತೀರ್ಥ ಸೇವನೆ ಮಾಡಿ , ಇಡಿ ಮನೆಯವರಿಗೆಲ್ಲ ನೈವೇದ್ಯವನ್ನು ಹಂಚಿ,  ಮನಸ್ಸು ತಿಳಿ ಆಗುತ್ತದೆ,  ಗಾಬರಿಯಾಗಬೇಡಿ,  ಒಳ್ಳೆಯದಾಗುತ್ತೆ.

ಧನಸ್ಸು ರಾಶಿ :  ಸಪ್ತಮದಲ್ಲಿ ಚಂದ್ರ,  ಅಷ್ಟಮಾಧಿಪತಿ ಸಪ್ತಮದಲ್ಲಿ ಕುಳಿತಿರುವುದರಿಂದ ಸ್ವಲ್ಪ ಆತಂಕದ ಛಾಯೆ, ಅಧಿಕಾರ ರಾಜ್ಯವನ್ನು ಆಳುತ್ತಿರುವಂತಹವರಿಗೆ ಸ್ವಲ್ಪ ಆತಂಕದ ಛಾಯೆ ಇರುತ್ತದೆ, ಬಹು ದೊಡ್ಡ ಸ್ಥಾನದಲ್ಲಿ ಇರುವವರು ಬೇರೊಬ್ಬರನ್ನು ನಂಬಿ ಮೋಸ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ, ಅದರಿಂದ ನಿಮಗೆ ಕೆಟ್ಟ ಹೆಸರು ಬರುವಂತಹ ಸಾಧ್ಯತೆಗಳಿವೆ  ಎಚ್ಚರಿಕೆ.

 

ಮಕರ ರಾಶಿ : ಸಪ್ತಮಾಧಿಪತಿ ವಿಶೇಷವಾಗಿ ಅಷ್ಟ ಭಾವದಲ್ಲಿದ್ದಾನೆ,  ಯಾವುದೋ ಒಂದು ಕೆಲಸದಲ್ಲಿ  ಒತ್ತಡವಿರುತ್ತದೆ, ಶತ್ರುಗಳು ದೂರವಾಗುತ್ತಾರೆ,  ಸಮಸ್ಯೆಗಳು ಕೂಡ ದೂರವಾಗುತ್ತದೆ , ಶಿವನ ದೇವಸ್ಥಾನದಲ್ಲಿ ಒಂದು ಅರ್ಚನೆಯನ್ನು ಮಾಡಿ ವಿಭೂತಿಯನ್ನು ಹಚ್ಚಿಕೊಂಡು,  ಸ್ವಲ್ಪ ವಿಭೂತಿಯನ್ನು  ಬಾಯಿಗೆ ಹಾಕಿಕೊಂಡು ,  ಹೊರಗೆ  ಹೋಗಿ ತುಂಬಾ ಒಳ್ಳೆಯದಾಗುತ್ತದೆ.

ಕುಂಭ ರಾಶಿ: ಹೆಸರು, ಕೀರ್ತಿ,  ಪ್ರತಿಷ್ಠೆ , ಗೌರವ, ವೈರಾಗ್ಯದ ಭಾವವೂ ಇರುತ್ತದೆ,  ಅಮ್ಮನ ಆರೋಗ್ಯದ ಕಡೆಗೆ ಗಮನ ವಹಿಸಿ,

ಮೀನ ರಾಶಿ : ಸುಖ ಭಾವದಲ್ಲಿ ಚಂದ್ರನಿದ್ದಾನೆ, ಸುಖ ಕಾರಕ , ಸುಖ ಕಾರಕ ನಾಗಿದ್ದಾರೆ ಅಂತಹ ಮನೆಯಲ್ಲಿ ಅಮ್ಮ ಆರೋಗ್ಯವಾಗಿರುತ್ತಾರೆ. ಸುಖದ ವಿಚಾರವನ್ನು ಪಡೆಯುವಿರಿ,  ವಿದ್ಯಾರ್ಥಿಗಳಿಗೆ ಒಂದು ವಿಶೇಷವಾದ ಏಳಿಗೆಯ ದಿನ , ಚಂದ್ರನಿಗೆ ರಾಹು ಸೇರಿರುವುದರಿಂದ ಆರಿದ್ರ ನಕ್ಷತ್ರವಾಗಿರುವುದರಿಂದ ಅದರಲ್ಲೂ ರಾಹುವಿಗೆ  ಹುಳಿಯ ಭಾವವಿರುತ್ತದೆ,  ಆದ್ದರಿಂದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬ್ರಹ್ಮ ಶಂಕರವನ್ನು ತಿನ್ನಿಸಿ, ಗಡಿಬಿಡಿ ಆತಂಕ , ಗಲಿಬಿಲಿ ಎನಿಸುತ್ತದೆ, ಅದರಲ್ಲೂ ವಿದ್ಯಾರ್ಥಿಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಸ್ಯಾನಿಟೈಸರ್ ಅಥವಾ ಹಸ್ತಾಮೃತವನ್ನು ಜೊತೆಯಲ್ಲಿ ಇಟ್ಟುಕೊಂಡು ಸದಾ ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ಈ ಹಸ್ತಾಮೃತದಲ್ಲಿ ಪ್ರಸನ್ನ ಎಂಬ ವಸ್ತುವನ್ನು ಶೇ 73 ರಷ್ಟು ಬಳಸಿದ್ದೇವೆ. ತುಳಸಿ ಎಕ್ಸ್ಟ್ರ್ಯಾಕ್ಟ್ ಅನ್ನು ಕೂಡ ಬಳಸಿದ್ದೇವೆ. ತುಳಸಿಯನ್ನು ದಿನನಿತ್ಯ ಬಳಸುವುದರಿಂದ ಕಡಿಮೆ ಎಂದರೂ 20 ರಿಂದ 70 ಸಾವಿರ  ವೈರಸ್ ಗಳು ಕೊಲ್ಲುವ ಶಕ್ತಿ ಇದೆ. ಆದ್ದರಿಂದಲೇ ಮನೆಯ ಮುಂದೆ ಹಿಂದಿನಿಂದಲೂ ತುಳಸಿ ಗಿಡವನ್ನು ಇಡುವಂತಹ ಅಭ್ಯಾಸವಿದೆ.  ಈ ಹಸ್ತಾಮೃತದಲ್ಲಿ ತುಳಸಿಯ ಸುವಾಸನೆ ಇದೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಜೇಬಿನಲ್ಲಿ ಈ ಒಂದು ಹಸ್ತಾಮೃತನ ಇಟ್ಟುಕೊಳ್ಳುವುದು ಒಳ್ಳೆಯದು,  ಅಲ್ಲದೆ ಒಂದು ಸ್ಪೂನ್ ಬ್ರಹ್ಮ ಶಂಕರವನ್ನು ಹಾಲಿನ ಜೊತೆ  ಸೇವಿಸುವುದರಿಂದ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಹೆಚ್ಚುತ್ತದೆ, ಒಳ್ಳೆಯದಾಗುತ್ತದೆ.

Advertisement
Share this on...