ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ಅಕ್ಕ ತಂಗಿ ಯಾರು ಗೊತ್ತಾ?

in ಮನರಂಜನೆ/ಸಿನಿಮಾ 297 views

ಒಂದೇ ಕುಟುಂಬದ ಸದಸ್ಯರು ಒಂದೇ ಫೀಲ್ಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ವಿಚಾರವೇನಲ್ಲ ಬಿಡಿ. ಅದರಲ್ಲಿಯೂ ಬಣ್ಣದ ಲೋಕದಲ್ಲಂತೂ ಇದು ಸರ್ವೇಸಾಮಾನ್ಯ. ಈ ಅಕ್ಕ ತಂಗಿಯರೂ ಕೂಡಾ ಇದಕ್ಕೆ ಹೊರತಾಗಿಲ್ಲ. ಅಕ್ಕ ಬೆಳ್ಳಿತೆರೆಯ ಮೂಲಕವೇ ನಟನಾ ಕ್ಷೇತ್ರಕ್ಕೆ ಪರಿಚಿತರಾಗಿದ್ದರೆ ತಂಗಿಯ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದದ್ದು ಕಿರುತೆರೆ. ಅರೇ, ಅವರ್ಯಾರು ಎಂದು ಕನ್ ಫ್ಯೂಸ್ ಆಗಬೇಡಿ, ಅವರೇ ಆಶಿಕಾ ರಂಗನಾಥ್ ಮತ್ತು ಅನುಷಾ ರಂಗನಾಥ್. ಮಹೇಶ್ ಬಾಬು ನಿರ್ದೇಶನದ ಕ್ರೇಜಿ ಬಾಯ್ ಸಿನಿಮಾದಲ್ಲಿ ನಂದಿನಿ ಪಾತ್ರಧಾರಿಯಾಗಿ ಬೆಳ್ಳಿತೆರೆಗೆ ಬಂದ ಆಶಿಕಾ ರಂಗನಾಥ್ ಸಿನಿ ಪ್ರಿಯರ ಪಾಲಿಗೆ ಚುಟುಚುಟು ಬೆಡಗಿ. ರ್ಯಾಂಬೋ 2 ಸಿನಿಮಾದಲ್ಲಿ ಶರಣ್ ಅವರಿಗೆ ನಾಯಕಿಯಾಗಿ ನಟಿಸಿದ ಈಕೆ ಚುಟುಚುಟು ಹಾಡಿನ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದರು. ಆಶಿಕಾ ರಂಗನಾಥ್ ಅವರು ಇಂದು ಬಣ್ಣದ ಲೋಕದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರೆ ಅದಕ್ಕೆ ಕ್ಲೀನ್ ಆ್ಯಂಡ್​​​​​​​​​​ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಕಾರ್ಯಕ್ರಮವೇ ಪ್ರಮುಖ ಕಾರಣ. ಆ ಶೋವಿನಲ್ಲಿ ಭಾಗವಹಿಸಿದ ಆಶಿಕಾ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಮತ್ತು ಅದೇ ಅವರ ಬಣ್ಣದ ಲೋಕಕ್ಕೆ ಮುನ್ನುಡಿಯನ್ನು ಬರೆದಿತ್ತು. ಆಶಿಕಾ ಫೋಟೋಗಳನ್ನು ನೋಡಿದ ನಿರ್ದೇಶಕ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು.

Advertisement

Advertisement

ಬಂದ ಅವಕಾಶ ಬೇಡ ಎನ್ನದ ಆಕೆ ನಟಿಸಿದರು. ಆಕೆಯ ಅದೃಷ್ಟೋ ಏನೋ, ಅವರ ಅಭಿನಯದ ಮೊದಲ ಚಿತ್ರ ಯಶಸ್ವಿ ನೂರು ದಿನಗಳ ಪ್ರದರ್ಶನವಾಯಿತು. ಮೊದಲ ಸಿನಿಮಾದಲ್ಲಿಯೇ ಯಶಸ್ಸನ್ನು ಪಡೆದ ಆಶಿಕಾ ಮುಂದೆ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರ್‍ಯಾಂಬೋ 2, ತಾಯಿಗೆ ತಕ್ಕ ಮಗ, ಗರುಡ, ರಂಗಮಂದಿರ, ಅವತಾರ ಪುರುಷ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಮದಗಜ ಸಿನಿಮಾದಲ್ಲಿಯೂ ನಾಯಕಿಯಾಗಿರುವ ಈಕೆ ಶ್ರೀಮುರಳಿ ಅವರ ಜೊತೆ ನಟಿಸುತ್ತಿದ್ದಾರೆ.

Advertisement

ಇಂತಿಲ್ಲ ಚುಟುಚುಟು ಬೆಡಗಿಯ ತಂಗಿ ಅನುಷಾ ರಂಗನಾಥ್ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದು ನಿಜ, ಆದರೆ ಆಕೆ ಸದ್ಯ ಮಿಂಚುತ್ತಿರುವವುದು ಬೆಳ್ಳಿತೆರೆಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೋಕುಲದಲ್ಲಿ ಸೀತೆ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾವನಿಯಾಗಿ ಅಭಿನಯಿಸಿದ್ದ ಈಕೆ ಒನ್ಸ್ ಮೋರ್ ಕೌರವ ಸಿನಿಮಾದ ಮೂಲಕ ಸಿನಿ ಒಯಣ ಶುರು ಮಾಡಿದರು.

Advertisement

ಮುಂದೆ ಸೋಡಾಬುಡ್ಡಿಸೋಡಾಬುಡ್ಡಿ ಮತ್ತು ಅಂದವಾದ ಸಿನಿಮಾದಲ್ಲಿ ಅನುಷಾ ಕಾಣಿಸಿಕೊಂಡಿದ್ದರು‌. ಇದರ ಜೊತೆಗೆ ವಿನಯ್ ರಾಜ್ ಕುಮಾರ್ ಅಭಿನಯದ ಟೆನ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ‌. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಛಾಪು ಮೂಡಿಸುತ್ತಿರುವ ಅಕ್ಕ ತಂಗಿಯರು ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.
– ಅಹಲ್ಯಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...