ವೈದ್ಯನಾಗಿ ಕೊರೋನಾ ವಿರುದ್ದ ಹೋರಾಡುತ್ತಿರುವ ಬಾಲಿವುಡ್ ನಟ….!

in Kannada News/ಮನರಂಜನೆ 44 views

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋರೊನಾ ವೈರಸ್ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೋನಾ ಹಾವಳಿ ಹೆಚ್ಚಾಗಿದ್ದು ಈ ಸಂಕಷ್ಟದ ಸಮಯದಲ್ಲಿ ಕೆಲ ನಟ-ನಟಿಯರು ನರ್ಸ್ ಆಗಿ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಾ ಬಡವರಿಗೆ ಸಹಾಯ ಮಾಡುತ್ತಾ ಕೋರೊನಾ ವಿರುದ್ದದ ಹೋರಾಟಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಧ್ಯೆ ಬಾಲಿವುಡ್ ನಟರೊಬ್ಬರು ವೈದ್ಯರಾಗಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ದೇಶದ ಸೇವೆಯಲ್ಲಿ ನಿರತರಾಗಿದ್ದಾರೆ. ಅರೇ ಯಾರಪ್ಪ ಆ ಬಾಲಿವುಡ್ ನಟ ಅಂತಿರಾ..?

Advertisement

 

Advertisement

Advertisement

 

Advertisement

ಬಾಲಿವುಡ್ ನಟ ಆಶಿಶ್ ಗೋಖಲೆ ಕೂಡ ಕೋರೊನಾ ಹೋರಾಟದಲ್ಲಿ ದೇಶಕ್ಕೆ ಸಾಥ್ ನೀಡುತ್ತಿದ್ದು ವೈದ್ಯಕೀಯ ವೃತ್ತಿ ಮಾಡುತ್ತಾ ಸೊಂಕಿತರ ಸೇವೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಆಶಿಶ್ ರವರು ಸೊಂಕಿತರಿಗೆ ಚಿಕಿತ್ಸೆ ನೀಡುತ್ತಾ ಕೊರೋನಾ ವಿರುದ್ದ ಹೋರಾಡುತ್ತಿದ್ದಾರೆ.

 

 

ಈ ಬಗ್ಗೆ ಆಶಿಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಜನರ ಸೇವೆ ಮಾಡುತ್ತಿರುವುದ್ದರಿಂದ ನನಗೆ ನೆಮ್ಮದಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ ಮತ್ತೊಂದು ಪೋಸ್ಟ್ ನಲ್ಲಿ ಎಲ್ಲರೂ ಕಣ್ಣು ಬಿಟ್ಟು ನೋಡಿ ಮೆಕ್ಕಾ ಮತ್ತು ಮದೀನ ಬಂದ್ ಆಗಿದೆ. ವ್ಯಾಟಿಕನ್ ಬಂದ್ ಆಗಿದೆ. ತಿರುಪತಿ ಮತ್ತು ಶಿರಡಿ ಕೂಡ ಬಂದ್ ಆಗಿದೆ.

 

 

ಆದರೆ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಮತ್ತು ನರ್ಸ್ ಗಳು 24/7 ಕೆಲಸ ಮಾಡುತ್ತಿದ್ದಾರೆ ಎಂದು ಬರೆದುಕೊಂಡು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸದ್ಯ ಕೋರೊನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಜೊತೆಗೆ ಆಶಿಶ್ ನಿಂತಿದ್ದು ವೈದ್ಯರಾಗಿ ಸೇವೆ ಸಲ್ಲಿಸುತ್ತಾ ರಣಕೇಕೆ ಹಾಕುತ್ತಿರುವ ಕೋರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿದ್ದಾರೆ.

 

 

ವೈದ್ಯಕೀಯ ವೃತ್ತಿಯ ಜೊತೆಗೆ ಆಶಿಶ್ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆಗೆ ಈ ಹಿಂದೆ ಆಶಿಶ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಆಶಿಶ್ ಸಿನಿಮಾರಂಗದಲ್ಲೇ ಉಳಿಯಲಿಲ್ಲ. ಬದಲಿಗೆ ತಮ್ಮ ವೈದ್ಯಕೀಯ ವೃತ್ತಿಯನ್ನ ಮುಂದುವರಿಸಿಕೊಂಡು ಬಂದದ್ದು ಎಂದು ಸಂಕಷ್ಟದಲ್ಲಿರುವ ದೇಶಕ್ಕೆ ಭರವಸೆಯ ಬೆಳಕಾಗಿ ರೋಗಿಗಳ ಪ್ರಾಣ ಕಾಪಾಡುವ ಮಹತ್ಕಾರ್ಯವನ್ನ ಮಾಡುತ್ತಿದ್ದಾರೆ.

– ಸುಷ್ಮಿತಾ

Advertisement
Share this on...