‘ಅಂಬಿ ಅಂಕಲ್ ನೀವು ಸ್ವರ್ಗದಲ್ಲೇ ಬರ್ತಡೇ ಪಾರ್ಟಿ ಮಾಡ್ತೀರಿ’….ಹೀಗೆ ಹೇಳಿದ್ದು ಯಾರು…?

in ಮನರಂಜನೆ 54 views

ಮೇ 29 ರೆಬಲ್ ಸ್ಟಾರ್ ಹುಟ್ಟಿದ ದಿನ. ರೆಬಲ್ ಸ್ಟಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಂಡ್ಯದ ಗಂಡು, ರೆಬಲ್ ಸ್ಟಾರ್ ಇನ್ನಿಲ್ಲ ಎಂದು ತಿಳಿದವರು ಆಘಾತಕ್ಕೆ ಒಳಗಾಗಿದ್ದರು. ಅವರು ಮರೆಯಾದ ದಿನದಿಂದ ಇಂದಿನವರೆಗೆ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು, ಚಿತ್ರರಂಗದವರು ಅವರನ್ನು ನೆನೆಯದ ದಿನವೇ ಇಲ್ಲ.ಅಂಬಿ ಹುಟ್ಟುಹಬ್ಬದಂದು ಸುಮಲತಾ ಅಂಬರೀಶ್, ಅಭಿಷೇಕ್ ಹಾಗೂ ಕುಟುಂಬದವರು ಅಂಬಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ರೆಬಲ್ ಸ್ಟಾರ್ ನಮ್ಮೊಂದಿಗೆ ಇಲ್ಲದೆ ಅವರ ಹುಟ್ಟುಹಬ್ಬ ಆಚರಿಸಿದ್ದು ಇದು ಎರಡನೇ ಬಾರಿ. ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕೆಲವರು ಅಣ್ಣಾ ಎಂದು ಪ್ರೀತಿಯಿಂದ ಕರೆದರೆ ಕೆಲವರು ಅಂಕಲ್ ಎಂದು ಕರೆಯುತ್ತಿದ್ದರು.

Advertisement

 

Advertisement

Advertisement

ಜನ್ಮದಿನದಂದು ಅವರಿಗೆ ಲಕ್ಷಾಂತರ ಮಂದಿ ಶುಭ ಕೋರಿದರು. ಕಿರುತೆರೆ ನಿರೂಪಕಿ ಅನುಶ್ರೀ ಕೂಡಾ ರೆಬಲ್ ಸ್ಟಾರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಅಂಬರೀಶ್ ಅವರೊಂದಿಗೆ ಫೋಟೋ ಹಂಚಿಕೊಂಡು ‘Love you always ಅಂಬರೀಶ್ ಅಂಕಲ್’ ಎಂದು ವಿಶ್ ಮಾಡಿದ್ದರು. ಇನ್ನು ಬಿಗ್​ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ, ರಾಧಾ ರಮಣ ಖ್ಯಾತಿಯ ಅವನಿ ಪಾತ್ರಧಾರಿ ಆಶಿತಾ ಚಂದ್ರಪ್ಪ ಅವರು ಕೂಡಾ ರೆಬಲ್ ಸ್ಟಾರ್ ಬರ್ತಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ರೆಬಲ್ ಸ್ಟಾರ್ ಭುಜಕ್ಕೆ ಒರಗಿರುವ ಫೋಟೋವನ್ನು ಇನ್ಸ್​​​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿರುವ ಆಶಿತಾ ‘ನನ್ನ ಮನಸ್ಸಿಗೆ ಬೇಸರವಾದಾಗಲೆಲ್ಲಾ ನಿಮ್ಮ ಬಳಿ ಓಡೋಡಿ ಬರುತ್ತಿದ್ದೆ.

Advertisement

 

ನೀವು ನೀಡುವ ಒಂದು ಹಗ್ ನನ್ನ ಬೇಸರವನ್ನೆಲ್ಲಾ ಮರೆಸುತ್ತಿತ್ತು. ಆದರೆ ನನಗೆ ಇಂದು ನೋವು ಹಂಚಿಕೊಳ್ಳಲು ನೀವೂ ಇಲ್ಲ, ನನ್ನ ಅಮ್ಮನೂ ಇಲ್ಲ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ಧೇನೆ. ಆದರೆ ನನಗೆ ಗೊತ್ತು ಇಲ್ಲಿ ನಮ್ಮೊಂದಿಗೆ ಇಲ್ಲವಾದರೂ ಸ್ವರ್ಗದಲ್ಲಿ ನೀವು ಬರ್ತಡೇ ಪಾರ್ಟಿ ಮಾಡುತ್ತಿರುತ್ತೀರಿ. ಸ್ವರ್ಗದ ಜನರು ಬಹಳ ಅದೃಷ್ಟವಂತರು, ಏಕೆಂದರೆ ಅಲ್ಲಿ ನೀವಿದ್ದೀರಿ, ಹ್ಯಾಪಿ ಬರ್ತಡೇ ಇನ್ ಹೆವೆನ್ ಅಂಕಲ್, ನನ್ನ ಅಮ್ಮ ಕೂಡಾ ಅಲ್ಲೇ ಇದ್ದಾರೆ’ ಎಂದು ಬಹಳ ಭಾವುಕರಾಗಿ ಆಶಿಕಾ ಬರೆದುಕೊಂಡಿದ್ದಾರೆ.

 

2018 ನವೆಂಬರ್ 24 ರಂದು ಬೆಳಗಿನ ಜಾವ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್​​​ವೊಂದು ನಾಲೆಗೆ ಉರುಳಿ ಈ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಅಂಬರೀಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಸಂಜೆ ವೇಳೆಗೆ ಅಂಬಿ ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆ ಸುಮಾರಿಗೆ ಅಂಬಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದರು. ಒಟ್ಟಿನಲ್ಲಿ ಈ ಕಲಿಯುಗ ಕರ್ಣ ಇಂದು ನಮ್ಮೊಂದಿಗೆ ಮಾನಸಿಕವಾಗಿ ಜೊತೆಯಾಗಿದ್ದಾರೆ.

Advertisement
Share this on...